Advertisement
ರಂಗನವಾಡ ಹಾಗೂ ಎಸ್.ಎಂ. ಕೃಷ್ಣ ನಗರದಲ್ಲಿ 10ಕ್ಕೂ ಹೆಚ್ಚು ತಂಡಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಸೋಂಕಿತರಿಗಾಗಿ ಜಾಲಾಡುತ್ತಿದ್ದಾರೆ. ಅಲ್ಲದೇ ಮೃತರ ಮನೆಯವರು ಹಾಗೂ ಸಂಬಂಧಿ ಕರು ಸೇರಿದಂತೆ ಪ್ರಾಥಮಿಕ ಸಂಪರ್ಕದಲ್ಲಿದ್ದ 35 ಜನರನ್ನು ಕೊರೊನಾ ಪರೀಕ್ಷೆ ಒಳಪಡಿಸಿದರೂ, ವೃದ್ಧೆಗೆ ಹರಡಿದ್ದ ಸೋಂಕಿನ ಮೂಲ ಪತ್ತೆಯಾಗಿಲ್ಲ. ಇದು ಜಿಲ್ಲೆಯ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದರೆ, ಜಿಲ್ಲಾಡಳಿತವನ್ನು ಚಿಂತೆಗೀಡುಮಾಡಿದೆ. ಈ ನಡುವೆ ಗುರುವಾರ ಬೆಳಗಿನಜಾವ ಸೋಂಕಿತ ವೃದ್ಧೆ ಮೃತಪಟ್ಟಿದ್ದರಿಂದ ರಂಗನವಾಡ ಭಾಗದ ದಾಸರ ಓಣಿ, ಖೀಲ್ಲಾ ಓಣಿ, ಹಳೇ ಕಚೇರಿ ಹಿಂಭಾಗದಲ್ಲಿ, ರೆಹಮತ ನಗರ, ಎಸ್. ಎಂ. ಕೃಷ್ಣ ನಗರದಲ್ಲಿ ಸಮೀಕ್ಷೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ.
Related Articles
Advertisement
ಸಮೀಕ್ಷೆಯಿಂದ 11 ಜನ ಪತ್ತೆಕೋವಿಡ್ ಸೋಂಕಿನಿಂದ ಮೃತ ಪಟ್ಟಿರುವ ವೃದ್ಧೆಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ನಾಲ್ಕು ಕುಟುಂಬಗಳ 11 ಜನರನ್ನು ಸಮೀಕ್ಷೆ ವೇಲೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ರಂಗನವಾಡದ ಕಂಟೇನ್ಮೆಂಟ್ ಪ್ರದೇಶ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸುತ್ತಿರುವ ಸಿಬ್ಬಂದಿ ವೃದ್ಧೆಯೊಂದಿಗೆ ಸಂಪರ್ಕದಲ್ಲಿದ್ದ 11 ಜನರನ್ನು ಗುರುತಿಸಿದ್ದಾರೆ. ಬಳಿಕ ಹಿರಿಯ ಅಧಿಕಾರಿಗಳ ನೆರವು ಪಡೆದು, ಜಿಲ್ಲಾಸ್ಪತ್ರೆಗೆ ಸಾಗಿಸಿದ್ದು, ಕೊರೊನಾ ತಪಾಸಣೆಗಾಗಿ ಅವರಿಂದ ಗಂಟಲು
ದ್ರವ ಹಾಗೂ ರಕ್ತದ ಮಾದರಿಯನ್ನು ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ರಂಗನವಾಡದ ವೃದ್ಧೆಗೆ ಕೋವಿಡ್ ಸೋಂಕು ಹೇಗೆ?ಯಾರಿಂದ ತಗುಲಿದೆ ಎಂಬುದನ್ನು ಪತ್ತೆ ಮಾಡಲು ಹಲವು ತಂಡಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ
ಕಾರ್ಯನಿರ್ವಹಿಸುತ್ತಿದ್ದಾರೆ. ರಂಗನವಾಡದಲ್ಲಿ ನಡೆದ ಸಮೀಕ್ಷೆಯಿಂದ ವೃದ್ಧೆಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 11 ಜನರನ್ನು ಗುರುತಿಸಿ, ಜಿಲ್ಲಾ ಆಸ್ಪತ್ರೆಗೆ
ರವಾನಿಸಲಾಗಿದೆ.
ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ