Advertisement

ಗದಗ: ಬಿಸಿಲಿನ ಬೇಗೆಗೆ ಸ್ವಿಮ್ಮಿಂಗ್‌ ಫೂಲ್‌ಗೆ ಲಗ್ಗೆ

05:49 PM May 14, 2024 | Team Udayavani |

ಉದಯವಾಣಿ ಸಮಾಚಾರ
ಗದಗ: ಸಾರ್ವಜನಿಕರು ಬಿಸಿಲಿನ ತಾಪದಿಂದ ಹೊರಬರಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಗದಗ-ಬೆಟಗೇರಿ ಅವಳಿ ನಗರದಲ್ಲಿ ನಿರ್ಮಾಣಗೊಂಡಿರುವ ನಾಲ್ಕು ಸ್ವಿಮ್ಮಿಂಗ್‌ ಪೂಲ್‌ಗ‌ಳಿಗೆ ಲಗ್ಗೆಯಿಟ್ಟಿದ್ದಾರೆ.

Advertisement

ಕಳೆದ ನಾಲ್ಕು ತಿಂಗಳ ಅವಧಿ ಯಲ್ಲಿ ಅಂದರೆ ಜನವರಿಯಿಂದ ಏಪ್ರಿಲ್‌ ಅಂತ್ಯದವರೆಗೆ 30 ಸಾವಿರಕ್ಕೂ ಅಧಿಕ ಜನರು ಸ್ವಿಮ್ಮಿಂಗ್‌ ಪೂಲ್‌ ಬಳಕೆ ಮಾಡಿಕೊಂಡಿದ್ದು, 14.62 ಲಕ್ಷ ರೂ. ಕಲೆಕ್ಷನ್‌ ಆಗಿದೆ. ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಏಪ್ರಿಲ್‌ ತಿಂಗಳಲ್ಲಿ ಬಿಸಿಲು ರೌದ್ರಾವತಾರ ತಾಳಿದಂತಿತ್ತು.

ಉಷ್ಣಾಂಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಏರಿಕೆಯಾಗಿತ್ತು. ಪ್ರಸಕ್ತ ವರ್ಷ ಏಪ್ರಿಲ್‌ 6ರಂದು 41 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿರು ವುದು ಕಳೆದ 12 ವರ್ಷಗಳ ಇತಿಹಾಸದಲ್ಲಿ ದಾಖಲೆಯಾಗಿತ್ತು. ಉಷ್ಣಾಂಶದಲ್ಲಿ ಏರಿಕೆ, ಬಿಸಿಲಿನ ತಾಪ
ಹಾಗೂ ಈಜು ಕಲಿಯುವ ಹುಮ್ಮಸ್ಸಿನಲ್ಲಿ ಅತ್ಯಧಿಕ ಸಂಖ್ಯೆಯ ಸ್ವಿಮ್ಮಿಂಗ್‌ ಪೂಲ್‌ಗೆ ಆಗಮಿಸಿ ಈಜುವ ಮೂಲಕ ತಣಿದಿದ್ದಾರೆ, ಸಂತಸ ಪಟ್ಟಿದ್ದಾರೆ..

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ನಗರದ ಕೆ.ಎಚ್‌. ಪಾಟೀಲ ಜಿಲ್ಲಾ ಕ್ರೀಡಾಂಗಣದ ಆವರಣ, ಕಳಸಾಪೂರ ರಸ್ತೆ ನಂದೀಶ್ವರ ಈಜುಕೊಳ, ರಾಜೀವಗಾಂಧಿ ನಗರದ ಸ್ವಾಮಿ ವಿವೇಕಾನಂದ ಈಜುಕೊಳ, ವಸಂತಸಿಂಗ್‌ ಜಮಾದಾರ ನಗರದಲ್ಲಿರುವ ಈಜುಕೊಳ ಸೇರಿ ಒಟ್ಟು ನಾಲ್ಕು ಈಜುಗೊಳದಲ್ಲಿ ಸಾರ್ವಜನಿಕರು ಬಿಸಿಲಿನ ಬೇಗೆಯಿಂದ ತಣಿಯಲು ಪ್ರಯತ್ನಿಸಿದ್ದಾರೆ.

ಅವಳಿ ನಗರದಲ್ಲಿರುವ ನಾಲ್ಕೂ ಈಜುಕೊಳಗಳಲ್ಲಿ ಪ್ರತಿದಿನ ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಸ್ವಿಮ್ಮಿಂಗ್‌ ಫೂಲ್‌ ತೆರೆದಿದ್ದು ತಲಾ 45 ನಿಮಿಷಗಳಿಗೆ 50 ರೂ. ವಂತಿಗೆ ಪಾವತಿಸಿ ಪ್ರತಿದಿನ ಸುಮಾರು 250ರಿಂದ 300 ಜನರು ಸ್ವಿಮ್ಮಿಂಗ್‌ ಪೂಲ್‌ ಬಳಕೆ
ಮಾಡಿಕೊಂಡಿದ್ದಾರೆ. ಈಜು ಕಲಿಯುವವರು ತರಬೇತಿ ಸಹಿತ 21 ದಿನಗಳಿಗೆ 3 ಸಾವಿರ ರೂ., ಮಾಸಿಕ ಪಾಸ್‌ 1,000 ರೂ. ಶುಲ್ಕ ಪಾವತಿಸಿ ಈಜುಕೊಳಗಳನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ.

Advertisement

ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಜಿಲ್ಲಾ ಕ್ರೀಡಾಂಗಣದ ಈಜುಕೊಳದಲ್ಲಿ ಮಕ್ಕಳಿಗೆ ಮತ್ತು ವಯಸ್ಕರಿಗೆ ವಿಶೇಷ ಬೇಸಿಗೆ ಶಿಬಿರ ಆರಂಭಿಸಿತ್ತು. ನಗರದ ಕೆ.ಎಚ್‌. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿನ ಈಜುಕೊಳದಲ್ಲಿ 3 ಸಿಬ್ಬಂದಿ, ಕಳಸಾಪೂರ ರಸ್ತೆಯ ನಂದೀಶ್ವರ ಈಜುಕೊಳ, ರಾಜೀವಗಾಂಧಿ ನಗರದ ಸ್ವಾಮಿ ವಿವೇಕಾನಂದ ಈಜುಕೊಳ ಹಾಗೂ ವಸಂತಸಿಂಗ್‌ ಜಮಾದಾರ ನಗರದಲ್ಲಿರುವ ಈಜುಕೊಳದಲ್ಲಿ ತಲಾ ಇಬ್ಬರಂತೆ ಒಟ್ಟು 9 ಸಿಬ್ಬಂದಿ ಈಜುಕೊಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಈ ವಿಶೇಷ ಶಿಬಿರದಲ್ಲಿ ಮನರಂಜನೆಗಾಗಿ ಮಾತ್ರ ಗಂಟೆ ಮತ್ತು ತಿಂಗಳ ಲೆಕ್ಕದಲ್ಲಿ ಶುಲ್ಕ ಪಾವತಿಸಿ
ಈಜುಕೊಳಕ್ಕೆ ಆಗಮಿಸಿ ದೇಹ ತಣ್ಣಗೆ ಮಾಡಿಕೊಳ್ಳುತ್ತಿದ್ದಾರೆ. ಶಿಬಿರಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಕ್ರೀಡಾ ತರಬೇತುದಾರ ಮಾಹಿತಿ ನೀಡಿದರು.

ಮಾರ್ಚ್‌, ಏಪ್ರಿಲ್‌ನಲ್ಲೆ ಅತೀ ಹೆಚ್ಚು ಶುಲ್ಕ ಸಂದಾಯ: ಕಳೆದ ಮಾರ್ಚ್‌ ತಿಂಗಳಿನಲ್ಲಿ ನಾಲ್ಕು ಈಜುಕೊಳ ಮೂಲಕ ಸಾರ್ವಜನಿಕರಿಂದ 3,90, 100 ರೂ. ಹಣ ಸಂದಾಯವಾದರೆ, ಏಪ್ರಿಲ್‌ನಲ್ಲಿ ದಾಖಲೆಯ 9,24,350 ರೂ. ಸಂದಾಯವಾಗುವ
ಮೂಲಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಬೊಕ್ಕಸಕ್ಕೆ ಅತ್ಯಧಿಕ ಹಣ ಪಾವತಿಯಾಗಿರುವುದು ಇದೇ ಮೊದಲ ಬಾರಿಯಾಗಿದೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧೀನದಲ್ಲಿ ನಾಲ್ಕು ಈಜುಕೊಳಗಳು ಕಾರ್ಯ ನಿರ್ವಹಿಸುತ್ತಿರುವುದು
ಹೆಮ್ಮೆಯ ವಿಷಯ. ಈ ಭಾಗದ ವಿದ್ಯಾರ್ಥಿಗಳಿಗೆ, ಈಜುಪಟುಗಳಿಗೆ, ಸಾರ್ವಜನಿಕರಿಗೆ ಈಜುಕೊಳಗಳು ಸದ್ಬಳಕೆಯಾಗುತ್ತಿವೆ. ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌., ಜಿಪಂ ಸಿಇಒ ಭರತ್‌ ಎಸ್‌. ಸಂಪೂರ್ಣ ಸಹಾಯ, ಸಹಕಾರ ನೀಡಿದ್ದರಿಂದಲೇ ಇಷ್ಟೆಲ್ಲ ಸಾಧ್ಯವಾಗಿದೆ.

ಡಾ|ಶರಣು ಗೊಗೇರಿ, ಸಹಾಯಕ
ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ.

*ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next