Advertisement

ರೋಣ: ಹಸಿರು ಪೈರಿಗೆ ಜಿಂಕೆಗಳ ದಾಂಗುಡಿ; ರೈತ ಕಂಗಾಲು

05:33 PM Jun 10, 2024 | Team Udayavani |

ಉದಯವಾಣಿ ಸಮಾಚಾರ
ರೋಣ: ಹಚ್ಚ ಹಸಿರಿನ ಪೈರನ್ನೇ ಗುರಿಯಾಗಿಸಿಕೊಂಡು ಸಾಮೂಹಿಕ ವಾಗಿ ಲಗ್ಗೆ ಇಡುವ ಜಿಂಕೆಗಳ ಹಾವಳಿಯಿಂದ ಮಳೆಯಾಶ್ರಿತ ಕೃಷಿ ಮಾಡುವ ರೈತರು ನಲುಗಿ ಹೋಗಿದ್ದಾರೆ. ಅಸಮರ್ಪಕ ಮಳೆ ಹಾಗೂ ಬರದಿಂದ ತತ್ತರಿಸಿರುವ ಕೃಷಿಕರು ಮಳೆಗಾಗಿ ಹಾತೊರೆಯುತ್ತಿದ್ದಾರೆ. ಮೂರ್‍ನಾಲ್ಕು ವರ್ಷಗಳ ಸಂಕಷ್ಟಗಳು ನೀಗುತ್ತವೆ ಎಂಬ ಆಶಾಭಾವದೊಂದಿಗೆ ಸಾಲ ಮಾಡಿ ದುಬಾರಿ ಮೊತ್ತದ ಹೆಸರು ಬೀಜಗಳನ್ನು ಖರೀದಿಸಿ ಬಿತ್ತಿದ್ದಾರೆ. ಇದೀಗ ಬೀಜಗಳು ಮೊಳಕೆಯೊಡೆದು ಸಸಿಯಾಗುತ್ತಿದ್ದಂತೆಯೇ ಸಸಿಗಳು ಜಿಂಕೆಗಳ ಹೊಟ್ಟೆ ಸೇರುತ್ತಿದ್ದು, ಜಿಂಕೆ ಹಾವಳಿ ತಲೆನೋವಾಗಿ ಪರಿಣಮಿಸಿದೆ.

Advertisement

30ರಿಂದ 40ರಷ್ಟಿರುವ ಜಿಂಕೆಗಳ ಗುಂಪು ಕೇವಲ ಅರ್ಧ ಗಂಟೆಯಲ್ಲಿ ಎರಡೂ¾ರು ಎಕರೆ ಪ್ರದೇಶದಲ್ಲಿನ ಬೆಳೆ ನಾಶಪಡಿಸುತ್ತವೆ. ವರ್ಷದಿಂದ ವರ್ಷಕ್ಕೆ ಜಿಂಕೆಗಳ ಸಂತತಿ ಹೆಚ್ಚುತ್ತಲೇ ಇದೆ. ಬೆಳೆ ರಕ್ಷಣೆಗಾಗಿ ಜಿಂಕೆಗಳನ್ನು ಚದುರಿಸಲು ಹೋದರೆ ಅರಣ್ಯ ಇಲಾಖೆಯವರು ಬೇಟೆಯಾಡುವ ಕಾರಣ ನೀಡಿ ರೈತರನ್ನು ಜೈಲಿಗೆ ತಳ್ಳುತ್ತಾರೆನ್ನುವ ಭಯ ಕಾಡುತ್ತಿದೆ.
ರೈತರ ಬೆಳೆ ಪ್ರತಿ ವರ್ಷ ಹಾಳಾಗುತ್ತಿದ್ದರೂ ಸರ್ಕಾರ ಮಾತ್ರ ಈ ವಿಷಯ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುದು ರೈತರ
ಅಳಲು.

ಪುಡಿಗಾಸಿನ ಪರಿಹಾರ: ರೈತರು ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದ ಬೆಳೆಹಾನಿಗೆ ಅರಣ್ಯ ಇಲಾಖೆ ಕೊಡುವ ಪುಡಿಗಾಸು ಪರಿಹಾರ ರೈತರಿಗೆ ಯಾವುದಕ್ಕೂ ಸರಿಯಾಗಲ್ಲ. ಸತತ ಬರಗಾಲ, ನೆರೆ ಹಾವಳಿಯಿಂದ ಬೆಂದು ಹೋಗಿರುವ ರೋಣ ತಾಲೂಕಿನ ರೈತರು ಈ ಬಾರಿ ಸುರಿದ ಉತ್ತಮ ಮಳೆಯಿಂದ ಬದುಕು ಕಟ್ಟಿಕೊಳ್ಳುವ ಆಶಾಭಾವನೆಯಲ್ಲಿದ್ದಾರೆ. ಆದರೆ ಮೊಳೆಕೆಯ
ಲ್ಲಿರುವ ಪೈರುಗಳಿಗೆ ಜಿಂಕೆಗಳ ಹಾವಳಿ ಮತ್ತೆ ರೈತರ ಆಸೆಗೆ ತಣ್ಣೀರೆರಚುತ್ತಿದೆ.

ಜಿಂಕೆ ಹಾವಳಿಯಿಂದ ಬೆಳೆ ರಕ್ಷಿಸಿಕೊಳ್ಳಲು ಬೆಳಿಗ್ಗೆಯಿಂದ ಸಂಜೆವರೆಗೆ ಕಾಯುತ್ತೇವೆ. ಆದರೆ ಸಂಜೆ ಮನೆಗೆ ತೆರಳಿದಾಗ ಜಿಂಕೆಗಳು ಜಮೀನಿಗೆ ನುಗ್ಗಿ ಪೈರು ತಿಂದು ಹಾಕುತ್ತವೆ. ಹೀಗಾಗಿ ಈ ಸಮಸ್ಯೆಗೆ ಪರಿಹಾರ ನೀಡಬೇಕು.
*ಮಲ್ಲಣ್ಣ ಗಡಗಿ, ರೈತ

ಈ ಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಿಂಕೆಗಳಿರುವುದು ಗಮನಕ್ಕೆ ಬಂದಿದೆ. ಜಿಂಕೆ ಹಾವಳಿಯಿಂದ ಬೆಳೆಗಳು ಹಾಳಾದ
ಜಮೀನಿಗೆ ಹೋಗಿ ಸರ್ವೇ ಮಾಡಿ ಅರಣ್ಯ ಇಲಾಖೆಯಿಂದ ಪರಿಹಾರ ನೀಡಲಾಗುವುದು.
*ಮಂಜುನಾಥ ಮೇಗಲಮನಿ,
ತಾಲೂಕು ವಲಯ ಅರಣ್ಯಾಧಿಕಾರಿ, ರೋಣ

Advertisement

ಅರಣ್ಯ ಇಲಾಖೆ ಅಂಕಿ-ಅಂಶಗಳ ಪ್ರಕಾರ ರೋಣ ತಾಲೂಕಿನಾದ್ಯಂತ 3000ಕ್ಕೂ ಹೆಚ್ಚು ಜಿಂಕೆಗಳಿವೆ. ಇವು ಕೃಷಿಕರ ಜಮೀನುಗಳಲ್ಲಿ ಬೆಳೆ ತಿಂದು ಹಾಕುತ್ತಿವೆ. ತಾಲೂಕಿನಲ್ಲಿ ಜಿಂಕೆಗಳ ಹಾವಳಿ ವ್ಯಾಪಕವಾಗಿದೆ. ಬೆಳವಣಿಗೆ ಹಂತದ ಪೈರಿನ ಮೇಲೆ ಜಿಂಕೆಗಳು ಸಾಮೂಹಿಕವಾಗಿ ದಾಂಗುಡಿ ಇಡುತ್ತ ಬೇರು ಸಹಿತ ಬೆಳೆ ನಾಶಪಡಿಸುತ್ತಿವೆ.
*ಬಾವಾಸಾಬ್‌ ಬೆಟಗೇರಿ, ರೋಣ, ರೈತ

*ಯಚ್ಚರಗೌಡ ಗೋವಿಂದಗೌಡ

Advertisement

Udayavani is now on Telegram. Click here to join our channel and stay updated with the latest news.

Next