Advertisement

Hajj Pilgrims: ಕಾಲ್ನಡಿಗೆಯಲ್ಲಿ ಮೆಕ್ಕಕ್ಕೆ ತೆರಳಿದ್ದ ಖಲೀಲ್‌ ಇಂದು ಊರಿಗೆ

12:08 PM Jun 20, 2024 | Team Udayavani |

ಉಪ್ಪಿನಂಗಡಿ: ಕಾಲ್ನಡಿಗೆಯಲ್ಲಿ ಮೆಕ್ಕಕ್ಕೆ ತೆರಳಿ ಹಜ್‌ ಕಾರ್ಯ ಪೂರೈಸಿದ ಪೆರಿಯಡ್ಕದ ಅಬ್ದುಲ್‌ ಖಲೀಲ್‌ ಯಾ ನೌಶಾದ್‌ ಜೂ. 20ರಂದು ಪೆರಿಯಡ್ಕಕ್ಕೆ ತಲುಪಲಿದ್ದು ಅವರಿಗೆ ಪೆರಿಯಡ್ಕ ಮೊಹಿಯುದ್ದೀನ್‌ ಜುಮಾ ಮಸೀದಿ ಮತ್ತು ಉಪ್ಪಿನಂಗಡಿ ಎಸ್‌.ಕೆ.ಎಸ್‌.ಎಸ್‌.ಎಫ್. ವತಿಯಿಂದ ಸ್ವಾಗತ, ಸಮ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪೆರಿಯಡ್ಕ ಮೊಹಿಯುದ್ದೀನ್‌ ಜುಮಾ ಮಸೀದಿ ಅಧ್ಯಕ್ಷ ಕೆ.ಪಿ. ಬಶೀರ್‌ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಇದನ್ನೂ ಓದಿ:Sandalwood; ದರ್ಶನ್‌ ಅಂದರ್‌, ಡೆವಿಲ್‌ ಬಾಹರ್: ‘ಕೆಡಿ’ ರಿಲೀಸ್‌ ಹಾದಿ ಸುಗಮ

ಅಬ್ದುಲ್‌ ಖಲೀಲ್‌ 2023 ಜನವರಿ 30ರಂದು ಮಸೀದಿಯಲ್ಲಿ ಪ್ರಾರ್ಥನೆ ನೆರವೇರಿಸಿ ಹೊರಟು ನಡಿಗೆ ಮೂಲಕ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್‌, ರಾಜಸ್ಥಾನ್‌, ಹರಿಯಾಣ, ಡೆಲ್ಲಿ, ಉತ್ತರ ಪ್ರದೇಶ, ಪಂಜಾಬ್‌ ದಾಟಿ ಪಾಕಿಸ್ತಾನದ ಗಡಿ ವಾಘಾ ಮೂಲಕ ಪಾಕಿಸ್ತಾನ ಪ್ರವೇಶ ಮಾಡಿದ್ದರು.

ಆ ಬಳಿಕ ಓಮನ್‌, ಯು.ಎ.ಇ., ಸೌದಿ ಅರೇಬಿಯಾದ ಮೂಲಕ ಒಟ್ಟು ಸುಮಾರು 8,130 ಕಿಲೋ ಮೀಟರ್‌ ದೂರವನ್ನು 1 ವರ್ಷ 2 ದಿವಸದಲ್ಲಿ ಕ್ರಮಿಸಿ 2024ರ ಫೆ.8ರಂದು ಮೆಕ್ಕ ಪ್ರವೇಶಿಸಿದ್ದರು. ಅಲ್ಲಿ 4 ತಿಂಗಳು 26 ದಿವಸ ಇದ್ದು, ಜೂ. 16ರಂದು ಪವಿತ್ರ ಹಜ್‌ ಕರ್ಮವನ್ನು ಮುಗಿಸಿರುತ್ತಾರೆ.

ಜೂ. 20ರಂದು ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣ ತಲಪಲಿರುವ ಖಲೀಲ್‌ ಅವರನ್ನು ಪೆರಿಯಡ್ಕ ಜಮಾಅತ್‌
ಪದಾಧಿಕಾರಿಗಳು ಬರಮಾಡಿಕೊಳ್ಳಲಿದ್ದಾರೆ. ಉಪ್ಪಿನಂಗಡಿ ಮಸೀದಿ ಬಳಿಯಲ್ಲಿ  ಉಪ್ಪಿನಂಗಡಿ ಎಸ್‌.ಕೆ.ಎಸ್‌.ಎಸ್‌.ಎಫ್.
ವತಿಯಿಂದ ಸ್ವಾಗತಿಸುವ ಕಾರ್ಯಕ್ರಮ ನಡೆಯಲಿದ್ದು, ಆ ಬಳಿಕ ಪೆರಿಯಡ್ಕದಲ್ಲಿ ಮಸೀದಿ ಮತ್ತು ಎಸ್‌.ಕೆ.ಎಸ್‌.ಎಸ್‌.ಎಫ್.
ಪೆರಿಯಡ್ಕ ಸಮಿತಿ ವತಿಯಿಂದ ಸಮ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜೂ. 26ರಂದು ಅತೂರುನಲ್ಲಿ ಎಸ್‌.
ಕೆ.ಎಸ್‌.ಎಸ್‌.ಎಫ್. ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಬಶೀರ್‌ ತಿಳಿಸಿದರು.

Advertisement

ಎಸ್‌.ಕೆ.ಎಸ್‌.ಎಸ್‌.ಎಫ್. ಉಪ್ಪಿನಂಗಡಿ ಕ್ಲಸ್ಟರ್‌ ಕಾರ್ಯದರ್ಶಿ ಇಸ್ಮಾಯಿಲ್‌ ತಂಙಳ್‌, ಪೆರಿಯಡ್ಕ ಘಟಕದ ಅಧ್ಯಕ್ಷ ಶರೀಫ್,
ಆತೂರು ಕ್ಲಸ್ಟರ್‌ ಅಧ್ಯಕ್ಷ ಸಿದ್ದಿಕ್‌ ಎಸ್‌. ಕೆ., ಪೆರಿಯಡ್ಕ, ಮೊಹಿಯುದ್ದೀನ್‌ ಜುಮಾ ಮಸೀದಿ ಸದಸ್ಯ ಅಬ್ದುಲ್‌ ರಹಿಮಾನ್‌, ನೌಫ‌ಲ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next