Advertisement

Kalaburagi; ರಾಡಿ ನೀರು ಪೂರೈಕೆ: ಈಜು ಕೋಳವೂ ಬಂದ್

07:09 PM Jun 20, 2024 | Team Udayavani |

ಕಲಬುರಗಿ: ರಾಡಿ (ಕಲುಷಿತ) ನೀರು ಪೂರೈಕೆಯಿಂದ ಇಲ್ಲಿನ‌ ಜೀಮ್ಸ್ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ತುರ್ತು ಶಸ್ತ್ರಚಿಕಿತ್ಸೆ ಬಂದ್ ಮಾಡಿರುವ ನಡುವೆ ಈಗ ಈಜುಕೋಳ ಸಹ ಬಂದಾಗಿದೆ.

Advertisement

ನಗರದ ಚಂದ್ರಶೇಖರ ಪಾಟೀಲ್ ಜಿಲ್ಲಾ ಕ್ರೀಡಾಂಗಣ ದಲ್ಲಿರುವ ಜಿಲ್ಲಾ ಯುವಜನ ಸೇವಾ ಕ್ರೀಡಾ ಇಲಾಖೆಯ ಈಜುಕೋಳ ರಾಡಿ ನೀರು ಪೂರೈಕೆ ಹಿನ್ನೆಲೆಯಲ್ಲಿ ಸಂಪೂರ್ಣ ಬಂದ್ ಮಾಡಲಾಗಿದೆ.

ಈಜುಕೋಳಕ್ಜೆ ಮಣ್ಣು ಮಿಶ್ರಿತ ನೀರು ಪೂರೈಕೆಯಾಗಿದ್ದು, ಶುದ್ದೀಕರಣ ಮಾಡದ ಮಟ್ಟಿದೆ ರಾಡಿ ನೀರಾಗಿದ್ದರಿಂದ ನೀರು ಶುದ್ದಗೊಳ್ಳದೇ ಹಿನ್ನೆಲೆಯಲ್ಲಿ ವಾರ ಕಾಲ ಈಜುಕೋಳ ವನ್ನೇ ಬಂದ್ ಮಾಡಲಾಗಿದೆ.

ಗುರುವಾರ ಎಂದಿನಂತೆ ದಿನಾಲು ಈಜಾಡುವ ಈಜು ಪ್ರಿಯರು ಈಜುಕೋಳಕ್ಕೆ ಹೋದರೆ ರಾಡಿ ನೀರಿನಿಂದ ಈಜುಕೋಳ ಬಂದ್ ಮಾಡಲಾಗಿದೆ ಎಂದು ಈಜುಕೋಳ ನಿರ್ವಹಣಾ ಸಿಬ್ಬಂದಿ ತಿಳಿಸಿದರು.

ರಾಡಿ ನೀರು ಎಷ್ಟು ಪ್ರಮಾಣದಲ್ಲಿ ಇದೆ ಎಂದರೆ ನೀರಿನಲ್ಲಿ ಈಜಾಡಿದರೆ ಮೈಗೆ ಮಣ್ಣು ಹತ್ತಿಕೊಳ್ಳುವಂತಿದೆ. ನೀರು ಎಷ್ಟೇ ಶುದ್ಧ ಮಾಡಿದರೆ ಆಗೋದಿಲ್ಲ. ನೀರು ಬದಲಾಯಿಸುವುದು ಸೂಕ್ತವಾಗಿದೆ ಎಂದು ಜಿಲ್ಲಾ ಯುವಜನ ಸೇವಾ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

Advertisement

ದಿನವೂ ಬೆಳಗ್ಗೆ ಸಾವಿರ ಹಾಗೂ ಸಂಜೆ ಐದಾರು ಜನ ಈಜಾಡುತ್ತಾರೆ. ಇವರೆಲ್ಲರೂ ಶುಲ್ಕ ತುಂಬಿ ಈಜಾಡುತ್ತಾರೆ. ಬೇಸಿಗೆ ದಿನದಲ್ಲಂತು‌ ಮಕ್ಕಳಿಗೆ ವಿಶೇಷ ಶಿಬಿರ ಮೂಲಕ ಈಜು ತರಬೇತಿ ಸಹ ನಡೆದಿವೆ. ಅವರೆಲ್ಲರೂ ಈಗ ಈಜು ಬಲ್ಲವರಾಗಿದ್ದಾರೆ. ಈಗ ಈಜಾಡಬೇಕೆಂದರೆ ಈಜುಕೋಳವೇ ಬಂದಾಗಿದೆ.

ಈಜುಕೋಳ ಈ ಹಿಂದೆ ವಿದ್ಯುತ್ ಕೊರತೆ ಹಾಗೂ ಸಕಾಲಕ್ಕೆ ಕಚ್ಚಾ ಸಾಮಾಗ್ರಿಗಳ ಪೂರೈಕೆ ಕೊರತೆ ಹಿನ್ನೆಲೆಯಲ್ಲಿ ಬಂದಾಗಿದ್ದರೆ ಇದೇ ಪ್ರಥಮ ಬಾರಿಗೆ ರಾಡಿ ನೀರಿನಿಂದ ಬಂದಾಗಿದೆ. ಒಟ್ಟಾರೆ ಉಪಯೋಗಕ್ಕೆ ಬಾರದ ರಾಡಿ ನೀರು ಕಲಬುರಗಿ ಮಹಾನಗರ ದಲ್ಲಿ ಹಲವು ತೊಂದರೆ ಗಳಿಗೆ ಎಡೆ ಮಾಡಿದೆಯಲ್ಲದೇ ಜೀವನದ ಮೇಲೂ ಪರಿಣಾಮ ಬೀರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next