Advertisement
ಹಿರಿಯಡಕ ಬಜೆಯಲ್ಲಿ ಸ್ವರ್ಣಾ ನದಿಗೆ ನಿರ್ಮಿಸಲಾಗಿ ರುವ ಅಣೆಕಟ್ಟಿನಿಂದ ದಿನವೊಂದಕ್ಕೆ 24 ಎಂಎಲ್‌ಡಿ ನೀರನ್ನು ಪಂಪ್ ಮಾಡಿ ನಗರ ಸಭೆಯ 35 ವಾರ್ಡ್‌ಗಳು, ಅಕ್ಕ ಪಕ್ಕದ 6 ಗ್ರಾ.ಪಂ.ಗಳಿಗೆ ಪೂರೈಸಲಾಗುತ್ತದೆ. ಆದರೆ ಬೇಸಗೆಯಲ್ಲಿ ಸ್ವರ್ಣೆ ಬತ್ತುವುದ ರಿಂದ ನೀರಿನ ಬರ ಆರಂಭವಾಗುತ್ತದೆ. 25 ಗ್ರಾ.ಪಂ.ಗಳಲ್ಲಿ ವರ್ಷಂಪ್ರತಿ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತದೆ.
ನಗರಸಭೆ ವ್ಯಾಪ್ತಿಯ ಲ್ಲಿಯೂ ನೀರಿನ ಬೇಡಿಕೆ ಹೆಚ್ಚುತ್ತಿದೆ. ಅಷ್ಟು ಪ್ರಮಾಣದ ನೀರು ಸ್ವರ್ಣೆಯಿಂದ ವರ್ಷವಿಡೀ ದೊರೆಯುವುದಿಲ್ಲ. ವಾರಾಹಿಯಿಂದ ಉಡುಪಿಗೆ 38 ಕಿ.ಮೀ. ಉದ್ದದ ಪೈಪ್‌ಲೈನ್ ಅಳವಡಿಸಿ ಕುಡಿಯುವ ನೀರು ಪೂರೈಸುವ ಯೋಜನೆಯ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಒಟ್ಟು 300 ಕೋ.ರೂ. ವೆಚ್ಚದ ಈ ಯೋಜನೆ 36 ತಿಂಗಳುಗಳಲ್ಲಿ (2018ರ ನವೆಂಬರ್‌ನಿಂದ ಮೊದಲ್ಗೊಂಡು) ಪೂರ್ಣಗೊಳ್ಳ ಲಿದೆ. ಪೈಪ್‌ಲೈನ್ ಹಾದು ಹೋಗಲಿರುವ ಗ್ರಾ.ಪಂ.ಗಳಿಗೂ ಈ ಯೋಜನೆಯಿಂದ ನೀರು ದೊರೆಯಲಿದೆ. ಬಹುಗ್ರಾಮ ಯೋಜನೆ ಕುಂಠಿತ
ಚಾಂತಾರು, ಹೆಜಮಾಡಿ ಮತ್ತು ತೆಂಕನಿಡಿಯೂರಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಅಕ್ಕಪಕ್ಕದ ಹಲವಾರು ಗ್ರಾ.ಪಂ.ಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಗೆ ಸರಕಾರದ ಮಂಜೂರಾತಿ ದೊರೆತು ಹಲವು ವರ್ಷಗಳಾಗಿವೆ. ಆದರೆ ಅನಂತರ ಯಾವುದೇ ಬೆಳವಣಿಗೆಗಳು ನಡೆದಿಲ್ಲ. ಇದು ಅನುಷ್ಠಾನಗೊಂಡರೆ ತಾಲೂಕಿನ ಶೇ. 60ರಿಂದ 70ರಷ್ಟು ಪ್ರದೇಶಕ್ಕೆ ಶಾಶ್ವತ ಪರಿಹಾರ ದೊರೆಯುವ ನಿರೀಕ್ಷೆ ಇದೆ.
ಕಳೆದ ವರ್ಷ 61.45 ಲ.ರೂ. ವೆಚ್ಚದಲ್ಲಿ ಟ್ಯಾಂಕರ್ ನೀರು ಪೂರೈಸಲಾಗಿದೆ. ತಾಲೂಕಿನಲ್ಲಿ 4-5 ವರ್ಷಗಳಿಂದೀಚೆಗೆ ಟ್ಯಾಂಕರ್ ನೀರು ಪೂರೈಕೆ ನಡೆಯುತ್ತಿದೆ.
Related Articles
ಹಿಂದೆಲ್ಲಾ ಕೊಳವೆ ಬಾವಿಯಿಂದ ಕನಿಷ್ಠ 20 ವರ್ಷ ನೀರು ದೊರೆಯುತ್ತಿತ್ತು. ಈಗ 5 ವರ್ಷಕ್ಕೆ ಬತ್ತಿ ಹೋಗುತ್ತಿವೆ. ತಾಲೂಕಿನಲ್ಲಿ ಈ ವರ್ಷದ ಮಾರ್ಚ್ ಒಳಗೆ 18 ತೆರೆದ ಬಾವಿಗಳನ್ನು ನಿರ್ಮಿಸುವ ಕಾಮಗಾರಿಗಳು ಪ್ರಗತಿಯಲ್ಲಿವೆ. ತಾಲೂಕಿನಲ್ಲಿ ಉಪ್ಪುನೀರಿನ ಸಮಸ್ಯೆಯೂ ಇದೆ. ಅಂಥ ಕಡೆ ಸಣ್ಣ ಬಾವಿ ನಿರ್ಮಾಣ ಮಾಡಲಾಗುತ್ತಿದೆ.
– ಸಹಾಯಕ ಕಾರ್ಯನಿರ್ವಾಹಕ ಅಭಿಯಂತ, ತಾ.ಪಂ. ಉಡುಪಿ
Advertisement
ಸದ್ಯ ಸಮಸ್ಯೆ ಇಲ್ಲತಾಲೂಕಿನಲ್ಲಿ ಸದ್ಯ ನೀರಿನ ಸಮಸ್ಯೆ ಇಲ್ಲ. ಆದರೂ ಎದುರಾಗ ಬಹುದಾದ ಸಮಸ್ಯೆ ನಿರ್ವಹಿಸಲು ಪೂರ್ಣ
ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಗತ್ಯವಿದ್ದಲ್ಲಿ ಟ್ಯಾಂಕರ್ ಮೂಲಕ ಪೂರೈಸಲು ಕೂಡ ಸಿದ್ಧರಾಗಿದ್ದೇವೆ. ಅಂತರ್‌ಜಲ ಮಟ್ಟ ಕಾಪಾಡುವ ನಿಟ್ಟಿನ ಕಾರ್ಯಕ್ರಮಗಳು ಪಂಚಾಯತ್ ಮಟ್ಟದಲ್ಲಿ ಅನುಷ್ಠಾನಗೊಳ್ಳಲಿವೆ.
– ರಾಜು ಕೆ. ಇಒ, ಉಡುಪಿ ತಾ.ಪಂ. ವರ್ಷಕ್ಕೆ 40 ಬೋರೆÌಲ್
ಶಾಶ್ವತ ಪರಿಹಾರವಾಗಿ ಕೊಳವೆ ಬಾವಿ, ತೆರೆದ ಬಾವಿಗಳನ್ನು ಕೊರೆಸ ಲಾಗುತ್ತದೆ. ಆದರೆ ಅಂತರ್ಜಲ ಮಟ್ಟ ಕುಸಿತ ವ್ಯವಸ್ಥೆ ಮೇಲೆ ದೊಡ್ಡ ಹೊಡೆತ ನೀಡುತ್ತಿದೆ. ತಾಲೂಕಿನಲ್ಲಿ ವರ್ಷವೊಂದಕ್ಕೆ ಸರಾಸರಿ 30-40 ಕೊಳವೆ ಬಾವಿ ಹಾಗೂ 15-20 ತೆರೆದ ಬಾವಿಗಳನ್ನು ಕೊರೆಯಲಾಗುತ್ತಿದೆ. ಕೊರತೆಗೆ ಕಾರಣ
ನೀರಿನ ಬಳಕೆ ಹೆಚ್ಚಿರುವುದು, ಮಳೆನೀರು ಭೂಮಿಯಲ್ಲಿ ಇಂಗಲು ಅವಕಾಶ ಕಡಿಮೆಯಾಗುತ್ತಿರುವುದು, ಲಭ್ಯ ಇರುವ ನೀರಿನಲ್ಲಿ ಉಪ್ಪಿನಂಶದಿಂದಾಗಿ ಬಳಕೆ ಯೋಗ್ಯವಾಗದಿರುವುದು, ಬಾವಿಗಳ ಅವಗಣನೆ ಮೊದಲಾದವು ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಲು ಕಾರಣ. – ಸಂತೋಷ್ ಬೊಳ್ಳೆಟ್ಟು