Advertisement
ಹೌದು.., ರಾಜ್ಯದ ಮಹತ್ವಾಕಾಂಕ್ಷಿ ಹೆದ್ದಾರಿ ಎನಿ ಸಿದ್ದ ಬೆಂಗಳೂರು ಮೈಸೂರು ದಶಪಥ ಹೆದ್ದಾರಿ ಕಾಮ ಗಾರಿಯನ್ನು ರಾಜ್ಯದಲ್ಲಿ ಯಾವ ರಾಷ್ಟ್ರೀಯ ಹೆದ್ದಾ ರಿಯೂ ಮಾಡದ ರೀತಿಯಲ್ಲಿ ಅಭಿವೃದ್ಧಿ ಪಡಿ ಸುವುದಾಗಿ ಕೇಂದ್ರ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಗಳು ಪ್ರಾರಂಭದ ದಿನಗಳಲ್ಲಿ ಹೇಳಿದ್ದರು. ಇದೀಗ ಕಾಮಗಾರಿ ಪೂರ್ಣಗೊಂಡಿದೆ. ಸಂಚಾರ ಆರಂಭಗೊಂಡು ವರ್ಷಗಳೇ ಕಳೆದಿವೆಯಾದರೂ ಹೆದ್ದಾರಿ ಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ದೊರೆಯ ಬೇಕಾದ ಯಾವುದೇ ಸೌಲಭ್ಯಗಳು ಸಿಗದಾಗಿದೆ.
Related Articles
Advertisement
ಜಾರಿಯಾಗದ ಹೆಚ್ಚುವರಿ ಯೋಜನೆಗಳು: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಚನ್ನಪಟ್ಟಣ ತಾಲೂಕಿನ ಕನ್ನಮಂಗಲ ಗ್ರಾಮದ ಸಮೀಪ ಕೆಫೆಟೇರಿಯಾ ನಿರ್ಮಾಣಕ್ಕೆ 1 ಸಾವಿರ ಕೋಟಿ ರೂ. ಪ್ರವೇಶಕ್ಕೆ ನಿರ್ಬಂಧಿಸುವ ಉದ್ದೇಶದಿಂದ ಕ್ಲೋಸ್ ಟೋಲ್‌ಗಳ ನಿರ್ಮಾಣಕ್ಕೆ ಯೋಜನೆ ಸಿದ್ದಪಡಿಸಲಾ ಗಿತ್ತಾದರೂ ವರ್ಷ ಕಳೆದರೂ ಈ ಕಾಮಗಾರಿಗಳು ಆರಂಭಗೊಂಡಿಲ್ಲ. ಕ್ಲೋಸ್‌ಟೋಲ್‌ಗೆ ಜಾಗ ಗುರುತಿ ಸಲಾಗಿದೆಯಾದರೂ ಭೂಸ್ವಾಧೀನ ಪ್ರಕ್ರಿಯೆ ನಡೆ ಯದ ಪರಿಣಾಮ ಅಪಾಯಕಾರಿ ಎಂಟ್ರಿ ಎಕ್ಸೈಟ್ ಗಳ ಸಮಸ್ಯೆ ಹಾಗೇ ಮುಂದುವರೆದಿದೆ. ಈ ಸಮಸ್ಯೆ ಸರಿಪಡಿಸುವ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಟೋಲ್ ಪ್ರವೇಶದಿಂದ ಸವಾರರು ತಪ್ಪಿಸಿ ಕೊಳ್ಳುತ್ತಿ ದ್ದಾರೆ ಎಂಬ ಕಾರಣ ನೀಡಿ, ಹೆದ್ದಾರಿ ಪ್ರಾಧಿಕಾರವು, ಎಂಟ್ರಿ ಎಕ್ಸಿಟ್‌ಗಳನ್ನು ಸಾಕಷ್ಟು ಕಡಿತಗೊಳಿಸಿದ್ದಾರೆ. ಕೆಲವೆಡೆ ಎಂಟ್ರಿ ಅಷ್ಟನ್ನೆ ನೀಡಿ ದ್ದಾರೆ. ಹೀಗಾಗಿ ತುರ್ತು ಸನ್ನಿವೇಶಗಳಲ್ಲಿ ಆ್ಯಂಬುಲೆನ್ಸ್, ಟೋಯಿಂಗ್ ಗಾಡಿಗಳು ಎಕ್ಸ್‌ಪ್ರೆಸ್‌ವೇ ಏರಲು ಪರದಾಡಬೇಕಿದೆ. ಪೆಟ್ರೋಲ್ ಬಂಕ್, ಪಂಚರ್ ಶಾಪ್, ಹೋಟಲ್ ಗಳು ಯಾವೊಂದು ಕೆಲಸವು ಆಗಿಲ್ಲ, ಪ್ರತಿ ಕಿ.ಮಿಗೆ ಅಳವಡಿಸಬೇಕಿದ್ದ ಎಐ ಕ್ಯಾಮೆರಾಗಳ ಅಳವಡಿಕೆಯು ನಡೆದಿಲ್ಲ. ಈ ಬಗ್ಗೆ ಯಾರ ಸಂಪರ್ಕಕ್ಕೂ ಸಿಗದೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಉದಾಸೀನ ಮಾಡುತ್ತಿರುವುದು ಪ್ರಯಾಣಿಕರು ಅವ್ಯವಸ್ಥೆಯ ಹೆದ್ದಾರಿಯಲ್ಲಿ ಸಾಗುವಂತಾಗಿದೆ.
ಅವ್ಯವಸ್ಥೆ ಸರಿಯಾಗೇ ಇಲ್ಲ : ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇನ ಅವ್ಯವಸ್ಥೆಗಳು ಇಂದಿಗೂ ಸರಿಯಾಗಿಲ್ಲ. ಸ್ಕೈವಾಕ್, ಎಐ ಕ್ಯಾಮೆರಾ, ರೆಸ್ಟ್ ಏರಿಯಾ, ಬಸ್ ಶೆಲ್ಟರ್‌ಗಳು ಹೀಗೆ ಅಗತ್ಯ ಸೌಲಭ್ಯಗಳು ಮರೀಚಿಕೆಯಾಗಿದ್ದು, ಇವುಗಳನ್ನು ಕಲ್ಪಿಸುವ ಬಗ್ಗೆ ಹೆದ್ದಾರಿ ಪ್ರಾಧಿಕಾರ ತುಟಿತೆರೆಯುತ್ತಿಲ್ಲ. ಇಡೀ ಹೆದ್ದಾರಿ ಅವ್ಯವಸ್ಥೆಗಳ ಆಗರವಾಗಿದೆ. ಈ ಹಿಂದೆ ಹೆದ್ದಾರಿ ಪ್ರಾಧಿಕಾರ, ರಾಜ್ಯ ಸರ್ಕಾರ, ಕೇಂದ್ರ ಸಾರಿಗೆ ಸಚಿವರು ನೀಡಿದ್ದ ಭರವಸೆಗಳೆಲ್ಲವು ಹುಸಿಯಾಗಿದೆ.
ಎಲ್ಲಾ ಸೌಕರ್ಯಗಳನ್ನು ಕಲ್ಪಿಸಿದ ಬಳಿಕ ಟೋಲ್ ಸಂಗ್ರಹ ಮಾಡ ಬೇಕು ಎಂದು ಹೆದ್ದಾರಿ ಪ್ರಾಧಿಕಾರದ ನಿಯಮ ಹೇಳುತ್ತದೆ. ಆದರೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಅರ್ಧಂಬರ್ಧ ಸೌಲಭ್ಯಗಳನ್ನು ಹೊಂದಿದ್ದು ಪೂರ್ಣ ಪ್ರಮಾಣದ ಟೋಲ್ ಸಂಗ್ರಹಿ ಸುತ್ತಿರುವುದು ಸರಿಯಲ್ಲ. ಹೆದ್ದಾರಿ ಪ್ರಾಧಿಕಾರ ಪೂರ್ಣ ಸೌಲಭ್ಯ ಕಲ್ಪಿಸುವವರೆಗೆ ಟೋಲ್ ಸಂಗ್ರಹಣೆಯನ್ನು ನಿಲ್ಲಿಸಲಿ. ಈ ಬಗ್ಗೆ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಕೇಂದ್ರ ಸರ್ಕಾರದ ಗಮನಸೆಳೆಯುವ ಕೆಲಸ ಮಾಡಲಿ. -ನೀಲೇಶ್‌ಗೌಡ, ರಾಜ್ಯಾಧ್ಯಕ್ಷ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ
– ಸು.ನಾ.ನಂದಕುಮಾರ್