Advertisement
ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, 2018ರ ವಿಧಾನಸಭೆ ಚುನಾವಣೆಯಲ್ಲಿ ಸಮೀಕ್ಷೆಗಳು ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಲಿದೆ ಎಂದಿದ್ದವು. ಆದರೆ, 104 ಸ್ಥಾನ ಪಡೆಯುವುದರೊಂದಿಗೆ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಈಗಲೂ ನಮಗೆ ಬಹುಮತ ದೊರೆಯಲಿದೆ. ಬಿಜೆಪಿಗೆ 150 ಸ್ಥಾನ ದೊರೆಯಲಿದೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದ್ದೆ. ಅದಕ್ಕೆ ನಾನು ಈಗಲೂ ಬದ್ಧನಾಗಿದ್ದೇನೆ ಎಂದರು.
ಶಿಗ್ಗಾವಿ ಕ್ಷೇತ್ರದ ಮತ ದಾರರು ನನಗೆ ತೋರಿ ರುವ ಪ್ರೀತಿ, ಬೆಂಬಲಕ್ಕೆ ನಾನು ಚಿರಋಣಿಯಾಗಿದ್ದಾನೆ. ಮತ ದಾನವನ್ನು ಹಬ್ಬದ ರೀತಿಯಲ್ಲಿ ಆಚರಿಸುವ ಮೂಲಕ ದೊಡ್ಡ ಪ್ರಮಾಣದ ಗೆಲುವು ತಂದು ಕೊಡಲಿದ್ದಾರೆ ಎಂಬ ವಿಶ್ವಾಸ ನನ್ನದಾಗಿದೆ.
Related Articles
Advertisement
ಚುನಾವಣ ಸಮೀಕ್ಷೆಗಳು ನಿಖರವಾಗಿರಲ್ಲ: ಸಿಎಂಉಗರಗೋಳ: ಎಕ್ಸಿಟ್ ಪೋಲ್ಸ್ ಕೇವಲ ಎಕ್ಸಿಟ್ ಪೋಲ್ಸ್ ಅಷ್ಟೇ. ಅವು ನಿಖರವಾಗಿರುವುದಿಲ್ಲ. ಇಂತಹ ಸಮೀಕ್ಷೆಗಳಿಂದ ಯಾವುದೇ ಭೀತಿಯಿಲ್ಲ. ಸರಕಾರ ರಚನೆಗೆ ಬೇಕಾದ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದ್ದು ಬಹುಮತದ ಸರಕಾರ ರಚನೆಯಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಪತ್ನಿ ಚನ್ನಮ್ಮ ಜತೆ ಸವದತ್ತಿ ತಾಲೂಕಿನ ಯಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಮತದಾನೋತ್ತರ ಸಮೀಕ್ಷೆಗಳಿಂದ ಯಾವುದೇ ಭೀತಿಯಿಲ್ಲ. ಕಳೆದ ಬಾರಿ ಎಕ್ಸಿಟ್ ಪೋಲ್‌ನಲ್ಲಿ ಕಾಂಗ್ರೆಸ್‌ಗೆ 107, ಬಿಜೆಪಿ 80 ಸ್ಥಾನ ಎಂದು ಹೇಳಲಾಗಿತ್ತು. ಆದರೆ ಅದು ಉಲ್ಟಾ ಆಗಿತ್ತು. ನಮಗೆ 104, ಅವರಿಗೆ 80 ಸ್ಥಾನ ಬಂದಿದ್ದವು. ಉತ್ತರ ಪ್ರದೇಶದಲ್ಲಿ ಯೋಗಿ ಗೆಲ್ಲುವುದಿಲ್ಲ ಎಂದಿದ್ದರು. ಅಲ್ಲಿ ಸಂಪೂರ್ಣ ಬಹುಮತದಿಂದ ಬಿಜೆಪಿ ಗೆದ್ದು ಇತಿಹಾಸ ನಿರ್ಮಿಸಿತ್ತು ಎಂದರು. ಅತಂತ್ರ ಸ್ಥಿತಿ ನಿರ್ಮಾಣವಾಗದು
ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಬಿಜೆಪಿಗೆ ಪ್ಲಸ್ ಆಗಿದೆ. ಯುವ ಸಮುದಾಯ ಮತ್ತು ಮಹಿಳೆಯರು ಪಕ್ಷದ ಪರ ಮತ ಚಲಾಯಿಸಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗದು ಎಂದು ಸಿಎಂ ಹೇಳಿದರು. ನಮಗೆ 141 ಸ್ಥಾನ ಸಿಗಲಿದೆ: ಡಿ.ಕೆ. ಶಿವಕುಮಾರ್
ಕನಕಪುರ: ನಾನು ಸಮೀಕ್ಷೆಗಳನ್ನು ನಂಬುವುದಿಲ್ಲ. ನಮಗೆ 141 ಸ್ಥಾನ ಖಚಿತವಾಗಿ ಬರಲಿದ್ದು, ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಆಡಳಿತಕ್ಕೆ ಬರಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಜನರ ಪ್ರೀತಿ, ದೇವರ ಆಶೀರ್ವಾದ ನನ್ನ ಮೇಲಿದೆ. ಮೇ 13ರ ಫಲಿತಾಂಶದಲ್ಲಿ ಗೊತ್ತಾಗಲಿದೆ. ನಮಗೆ ಪೂರ್ಣ ಬಹುಮತ ಬರುತ್ತದೆ. ಅನ್ಯ ಪಕ್ಷದ ಬೆಂಬಲ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು. 130ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು: ಪರಮೇಶ್ವರ್
ತುಮಕೂರು: ರಾಜ್ಯದಲ್ಲಿ ಈ ಬಾರಿ ಜನ ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್ ಪಕ್ಷ ಎಲ್ಲರ ನಿರೀಕ್ಷೆಯಂತೆ 130ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸರಕಾರ ರಚನೆ ಮಾಡುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಡಾ| ಜಿ. ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 140 ಸ್ಥಾನ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ: ಪಾಟೀಲ್
ವಿಜಯಪುರ: ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಶಿವ ಕುಮಾರ್ ಅವರೂ ಮುಂಚೆಯೇ ಹೇಳಿ ದಂತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 120-140 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ನಾವು ಅಧಿ ಕಾರಕ್ಕೆ ಬರುವುದು ಖಚಿತ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.