Advertisement

EPF ನಿಧಿ ವಂಚನೆ: ರಾಬಿನ್‌ ಉತಪ್ಪ ವಿರುದ್ದದ ವಾರಂಟ್‌ಗೆ ಹೈಕೋರ್ಟ್‌ ತಡೆ

09:58 AM Jan 01, 2025 | Team Udayavani |

ಬೆಂಗಳೂರು: ಕಂಪನಿಯಲ್ಲಿನ ಉದ್ಯೋಗಿಗಳಿಗೆ ಉದ್ಯೋಗ ಭವಿಷ್ಯ ನಿಧಿ (EPF) ಹಣ ಪಾವತಿಸದ ಆರೋಪದಡಿ ಭಾರತದ ಮಾಜಿ ಕ್ರಿಕೆಟಿಗ ರಾಬಿನ್‌ ಉತ್ತಪ್ಪ ವಿರುದ್ಧದ ವಾರಂಟ್‌ಗೆ ಹೈ ಕೋರ್ಟ್‌ ತಡೆ ನೀಡಿದೆ.

Advertisement

ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರು ಹೊರ ಡಿಸಿರುವ ವಸೂಲಿ (ರಿಕವರಿ) ನೋಟಿಸ್‌, ಬಂಧನ ವಾರೆಂಟ್‌ ಪ್ರಶ್ನಿಸಿ
ರಾಬಿನ್‌ ಉತ್ತಪ್ಪ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯ ಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ರಜಾ ಕಾಲದ ಏಕಸದಸ್ಯ ನ್ಯಾಯಪೀಠ, ಬೆಂಗಳೂರಿನ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ಮತ್ತು ವಸೂಲಿ ಅಧಿಕಾರಿ, ಕೇಂದ್ರ ಕಾರ್ಮಿಕ ಇಲಾಖೆ, ಸಹಾಯಕ ಭವಿಷ್ಯ ನಿಧಿ ಆಯುಕ್ತರು ಮತ್ತು ವಸೂಲಿ ಅಧಿಕಾರಿ, ಪುಲಿಕೇಶಿ ನಗರ ಠಾಣಾಧಿಕಾರಿಗೆ ನೋಟಿಸ್‌ ಜಾರಿಗೊಳಿಸಿತು. ಅಲ್ಲದೆ, ವಾರಂಟ್‌ಗೆ ತಡೆ ನೀಡಿ ವಿಚಾರಣೆ ಮುಂದೂಡಿತು. ಉತ್ತಪ್ಪ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ವಾದ ಮಂಡಿಸಿದರು.

ರಾಬಿನ್‌ ಉತ್ತಪ್ಪ “ಸೆಂಟಾರಸ್‌ಲೈಫ್ ಸ್ಟೈಲ್‌ ಬ್ರ್ಯಾಂಡ್ಸ್‌ ಪ್ರೈ.ಲಿ.’ ಎಂಬ ಖಾಸಗಿ ಕಂಪನಿಯ ಸಹ ಪಾಲುದಾರ ರಾಗಿದ್ದಾರೆ. ಆದರೆ, 2020ರಲ್ಲಿ ತಮ್ಮ ಪಾಲು ದಾರ ಹುದ್ದೆಗೆ ರಾಜೀನಾಮೆ ನೀಡಿ ದ್ದರು. ಹೀಗಾಗಿ ಅವರನ್ನು
ಪ್ರಕರಣದಲ್ಲಿ ಭಾಗಿಯನ್ನಾಗಿಸುವುದಕ್ಕೆ ಅವಕಾಶವಿಲ್ಲ. ಅವರಿಗೆ ನೀಡಿರುವ ನೋಟಿಸ್‌, ಬಂಧನ ವಾರಂಟ್‌
ಅನ್ನು ರದ್ದುಪಡಿಸಬೇಕು ಎಂದು ವಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next