Advertisement

ಭಯ ಹುಟ್ಟಿಸುತ್ತಲೇ ಬಂದ ಕೋವಿಡ್‌ 19‌ ಟ್ರೇಲರ್‌!

04:24 AM May 28, 2020 | Lakshmi GovindaRaj |

ಸದಾ ಒಂದಲ್ಲ ಒಂದು ವಿವಾದಗಳ ಮೂಲಕವೇ ಸುದ್ದಿಯಲ್ಲಿರುವ ನಿರ್ದೇಶಕ ರಾಮ್‌ಗೋಪಾಲ್‌ ವರ್ಮಾ (ಆರ್‌ಜಿವಿ) ಸಮಾಜದಲ್ಲಿ ಟ್ರೆಂಡಿಂಗ್‌ನಲ್ಲಿರುವ ವಿಚಾರಗಳನ್ನ ಸಿನಿಮಾ ಮಾಡಿ ತೆರೆಮೇಲೆ ತರುವಲ್ಲಿ ಸೈ ಎನಿಸಿಕೊಂಡವರು.  ಸದ್ಯ ವಿಶ್ವವನ್ನೇ ಕಾಡುತ್ತಿರುವ ಕೋವಿಡ್‌ 19 ವೈರಸ್‌ ಕುರಿತು ರಾಮ್‌ಗೋಪಾಲ್‌ ವರ್ಮಾ ಕೆಲ ಸಮಯದ  ಹಿಂದೆ ಫೀಚರ್‌ ಫಿಲ್ಮ್ ಮಾಡುವುದಾಗಿ ತಿಳಿಸಿದ್ದರು.

Advertisement

ಅದರಂತೆ ಈಗ ಆರ್‌ಜಿವಿ ತಮ್ಮ ಹೊಸ ಸಿನಿಮಾ  ಕೋವಿಡ್‌ 19 ವೈರಸ್‌ ಟ್ರೇಲರನ್ನು ಯೂಟ್ಯೂಬ್‌ ನಲ್ಲಿ ಬಿಡುಗಡೆ ಮಾಡಿದ್ದಾರೆ. ಸುಮಾರು 4 ನಿಮಿಷ ಅವಧಿಯ ಈ ಟ್ರೇಲರ್‌  ನೋಡುತ್ತಿದ್ದಂತೆ ಪ್ರೇಕ್ಷಕರಲ್ಲಿ ಭಯ ಹುಟ್ಟಿಸುವಂತಿದೆ. ಟ್ರೇಲರ್‌ ಬಿಡುಗಡೆ ಕುರಿತು ಸೋಶಿಯಲ್‌ ಮೀಡಿಯಾಗಳಲ್ಲಿ ಮಾಹಿತಿ  ನೀಡಿರುವ ಆರ್‌ಜಿವಿ, ಕೋವಿಡ್‌ 19 ವೈರಸ್‌ ಚಿತ್ರ ನಿಮ್ಮೆಲ್ಲರೊಳಗಿರುವ ಭಯದ ಕುರಿತಾದ ಚಿತ್ರವಾಗಿದೆ. ಇದು ರೋಗ ಮತ್ತು ಸಾವಿನ ಭಯದ ವಿರುದ್ಧವಾಗಿ ಪ್ರೀತಿಯ ಶಕ್ತಿಯನ್ನು ಪರೀಕ್ಷಿಸುತ್ತದೆ.

ನಮ್ಮ ಕೆಲಸವನ್ನು ಆ  ದೇವರೊಂದಿಗೆ ಕೋವಿಡ್‌ 19 ಕೂಡ ನಿಲ್ಲಿಸಲು ಸಾಧ್ಯವಾಗಿಲ್ಲ ಎಂಬುವುದನ್ನು ನಿರೂಪಿಸೋಣ ಎಂದುಕೊಂಡೆವು. ವಿಶ್ವದಲ್ಲೇ ಕೋವಿಡ್‌ 19 ವೈರಸ್‌ ಕುರಿತು ತೆಗೆದ ಮೊದಲ ಸಿನಿಮಾ ಇದಾಗಿದೆ. ನಮ್ಮ ನಟರು, ತಂತ್ರಜ್ಞಾನರು ತಮ್ಮ ಕ್ರಿಯೇಟಿವಿಟಿಯನ್ನು ತೆರೆದಿಟ್ಟಿದ್ದಾರೆ. ಲಾಕ್‌ಡೌನ್‌ ಸಂದರ್ಭದಲ್ಲಿ ನಮ್ಮವರು ಲಾಕ್‌ಡೌನ್‌ ಆಗಿಲ್ಲ ಎನ್ನುವುದನ್ನು ತೋರಿಸಿದ್ದಾರೆ ಎಂದಿದ್ದಾರೆ ವರ್ಮಾ.

Advertisement

Udayavani is now on Telegram. Click here to join our channel and stay updated with the latest news.

Next