Advertisement

ರಸ್ತೆಯ ಮೇಲೆ ಆಗಾಗ ಹರಿಯುವ ಒಳಚರಂಡಿ ತ್ಯಾಜ್ಯ

04:25 PM May 23, 2023 | Team Udayavani |

ಕನಕಪುರ: ಜನನೀಬಿಡ ಪ್ರದೇಶದಲ್ಲಿ ಆಗಾಗ ಹುಕ್ಕಿ ಹರಿದು ಕಿರಿಕಿರಿ ತಂದೋಡ್ಡುವ ಒಳಚರಂಡಿ ತ್ಯಾಜ್ಯದ ಸಮಸ್ಯೆಗೆ ಶಾಸ್ವತ ಪರಿಹಾರ ಕಂಡುಕೊಳ್ಳದ ನಗರಸಭೆ ಅಧಿಕಾರಿಗಳಿಗೆ ಸಾರ್ವಜನಿಕರ ಹಿಡಿಶಾಪ ಹಾಕುತ್ತಿದ್ದಾರೆ.

Advertisement

ನಗರದ ಸ್ವಚ್ಛತೆ ಮತ್ತು ಆರೋಗ್ಯ ಕಾಪಾಡಲು ಸಹಕಾರಿಯಾಗಬೇಕಿದ್ದ ಒಳಚ ರಂಡಿ ವ್ಯವಸ್ಥೆಯೇ ಕಂಟಕವಾಗಿ ಪರಿಣ ಮಿಸಿದ್ದು, ನಗರದ ಬಸ್‌ ನಿಲ್ದಾಣದ ವೃತ್ತದಲ್ಲಿ ಆಗಾಗ ಮ್ಯಾನ್‌ಹೋಲ್‌ನಿಂದ ಹುಕ್ಕಿ ಹರಿ ಯುವ ಮಲಮೂತ್ರದ ತ್ಯಾಜ್ಯವನ್ನು ತುಳಿದು ಕೊಂಡೇ ಓಡಾಡಬೇಕಾದ ಪರಿಸ್ಥಿತಿ ಎದುರಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನಗರದ ಬಸ್‌ ನಿಲ್ದಾಣದ ಪೆಟ್ರೋಲ್‌ ಬಂಕ್‌ ಪಕ್ಕ ಸಮೀಪದಲ್ಲಿರುವ ಒಳ ಚರಂಡಿ ಮ್ಯಾನ್‌ ಹೋಲ್‌ನಿಂದ, ಗಲೀಜು ನೀರು ಉಕ್ಕಿ ಹರಿದು ಸರ್ಕಲ್‌ ಸುತ್ತಲೂ ರಸ್ತೆಯ ಮೇಲೆ ಗಲೀಜು ನೀರು ನಿಂತುಕೊಂಡಿದ್ದು, ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆ ಆಗಿ ಕಿರಿಕಿರಿಯಾಗುತ್ತಿದೆ. ಸಣ್ಣ ಮಳೆ ಬಂದರೂ ಮ್ಯಾನ್‌ಹೋಲ್‌ನಿಂದ ತ್ಯಾಜ್ಯದ ನೀರು ಹುಕ್ಕಿ ಹರಿಯುತ್ತಿದೆ. ರಸ್ತೆಯ ಮೇಲೆ ನಿಂತಿರುವ ತ್ಯಾಜ್ಯದ ಗಬ್ಬು ವಾಸನೆಯಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಅನಿವಾರ್ಯ ಎನ್ನುವಂತಾಗಿದೆ.

ಗಬ್ಬು ವಾಸನೆ ಬೀರುತ್ತದೆ: ಬಸ್‌ ನಿಲ್ದಾಣದ ವೃತ್ತದಲ್ಲೇ ಈ ಅವ್ಯವಸ್ಥೆ ಆಗಿರುವುದು ಪ್ರತಿನಿತ್ಯ ಓಡಾಡುವ ಸಾರ್ವಜನಿಕರಿಗೆ ಒಂದು ರೀತಿಯ ಕಿರಿ ಕಿರಿ ಉಂಟು ಮಾಡಿದೆ. ಬಸ್‌ ನಿಲ್ದಾಣದ ವೃತ್ತದ ಸುತ್ತಮುತ್ತಲೂ ರಸ್ತೆ ಗುಂಡಿ ಬಿದ್ದು ಹಾಳಾಗಿದೆ. ಮ್ಯಾನ್‌ ಹೋಲ್‌ನಿಂದ ಆಗಾಗ ಹೊರಬರುವ ತ್ಯಾಜ್ಯ ಗುಂಡಿಗಳಲ್ಲಿ ನಿಂತು ಗಬ್ಬು ವಾಸನೆ ಬೀರುತ್ತದೆ. ಮಳೆ ನೀರಿನ ಜೊತೆಗೆ ಒಳಚರಂಡಿ ತ್ಯಾಜ್ಯ ಮಿಶ್ರಿತಗೊಂಡು ಪ್ರತಿನಿತ್ಯ ಶಾಲಾ ಕಾಲೇಜು ಓಡಾಡುವ ವಿದ್ಯಾ ರ್ಥಿಗಳು ಹಾಗೂ ಬಸ್‌ ನಿಲ್ದಾಣಕ್ಕೆ ಹೋಗು ವವರು ಬರುವವರು ಕೊಚ್ಚೆ ನೀರನ್ನು ತುಳಿದು ಕೊಂಡೆ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಓಡಾಡಲು ಜನರಿಗೆ ಕಿರಿಕಿರಿ: ಮಳೆ ಬಂದಾಗ ನಗರದ ಬಹುತೇಕ ವಾರ್ಡ್‌ಗಳಲ್ಲಿ ಜನರು ಇದೇ ಸಮಸ್ಯೆ ಎದುರಿಸುತ್ತಿದ್ದಾರೆ. ನಗರದ ಇಂದಿ ರಾ ನಗರದಲ್ಲೂ ಮಳೆ ಬಂತೆಂದರೆ ಸಾಕು ಒಳಚರಂಡಿ ಹುಕ್ಕಿ ಹರಿಯುತ್ತದೆ. ಇಂದಿರಾ ನಗರದಿಂದ ಮೆಜೆಸ್ಟಿಕ್‌ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಮ್ಯಾನ್‌ ಹೋಲ್‌ ಆಗಾಗ ಕಟ್ಟಿಕೊಂಡು ಒಳಚರಂಡಿ ತ್ಯಾಜ್ಯ ಹೊರ ಬರುತ್ತದೆ. ಈ ರಸ್ತೆಯಲ್ಲಿ ಸಾರ್ವಜನಿಕರು ಓಡಾಡಲು ಕಿರಿಕಿರಿಯಾಗುತ್ತಿದೆ.

Advertisement

ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ: ಆರೋಪ: ಅವೈಜ್ಞಾನಿಕ ಕಾಮಾಗಾರಿಯೇ ಒಳಚರಂಡಿ ತ್ಯಾಜ್ಯ ಹುಕ್ಕಿ ಹರಿಯಲು ಕಾರಣ ಎಂಬುದು ಸಾರ್ವಜನಿಕರ ಆರೋಪ. ನಗರದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, ಕ್ರಮಬದ್ಧವಾಗಿ ಕಾಮಗಾರಿ ಮಾಡಿಲ್ಲ. ಒಳಚರಂಡಿಯಲ್ಲಿ ತ್ಯಾಜ್ಯದ ನೀರು ಸರಾಗವಾಗಿ ಹರಿದು ಹೋಗಲು ಆಗದೆ ಆಗಾಗ ಕಟ್ಟಿಕೊಳ್ಳುತ್ತಿದೆ. ಗುತ್ತಿಗೆದಾರರು ಮತ್ತು ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಎಂದು ಸಾರ್ವಜನಿಕರ ಆರೋಪಿಸಿದ್ದಾರೆ.

ನಗರದಲ್ಲಿ ನಗರಸಭೆ ಮತ್ತು ಕೊಳಚೆ ನಿರ್ಮೂಲನಾ ಮಂಡಳಿಯಿಂದ ಮಾಡಿರುವ ಒಳಚರಂಡಿ ವ್ಯವಸ್ಥೆ ಸಂಪೂರ್ಣವಾಗಿ ಕಳಪೆ ಮತ್ತು ಅವೈಜ್ಞಾನಿಕತೆಯಿಂದ ಕೂಡಿದೆ. ಮಳೆ ಬಂದರೆ ಸಾಕು ತ್ಯಾಜ್ಯದ ನೀರು ರಸ್ತೆಯ ಮೇಲೆ ನಿಲ್ಲುತ್ತದೆ. ಒಳಚರಂಡಿ ಮೇಲೆ ಹಾಕಿರುವ ಮುಚ್ಚಳ ಕಳಪೆಯಾಗಿದ್ದು, ವಾಹನ ಓಡಾಟಕ್ಕೆ ಒಡೆದು ಹೋಗುತ್ತಿವೆ. ಅವೈಜ್ಞಾನಿಕ ಕಾಮಗಾರಿ ಜೊತೆಗೆ ಹಣ ದುರ್ಬಳಕೆ ಬಗ್ಗೆ ಸೂಕ್ತ ತನಿಖೆ ಮಾಡಿ ಶಿಸ್ತು ಕ್ರಮ ಕೈಗೊಳ್ಳಬೇಕು. – ಮಲ್ಲಿಕಾರ್ಜುನ್‌, ಧಮ್ಮದೀವಿಗೆ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next