Advertisement

ಕುರಿಗಳ ಖರೀದಿ ಮುಂದುವರೆಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್

02:20 PM Dec 27, 2019 | Team Udayavani |

ಚಿಕ್ಕಬಳ್ಳಾಪುರ: ಮಾಜಿ ಸ್ಪೀಕರ್ ರಮೇಶ್‌ ಕುಮಾರ್ ಗುರುವಾರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಚೇಳೂರಿನಲ್ಲಿ ನಡೆದ ಕುರಿಗಳ ಸಂತೆಗೆ ಬೆಳ್ಳಂ ಬೆಳಗ್ಗೆ ಆಗಮಿಸಿ‌ ಕುರಿಗಳನ್ನು ಖರೀದಿಸಿ ಗಮನ ಸೆಳೆದರು.

Advertisement

ಕಳೆದ ವಾರ‌ ಆಂದ್ರಪ್ರದೇಶದ ಮದನಪಲ್ಲಿ ಪುಂಗನೂರು ಸಂತೆಯಲ್ಲಿ ಕುರಿಗಳ ಖರೀದಿ ಮಾಡಿ ಗಮನ ಸೆಳೆದಿದ್ದ ರಮೇಶ್ ಕುಮಾರ್, ಇಂದು ಜಿಲ್ಲೆಯ ಚೇಳೂರಿನ ಕುರಿಗಳ ಸಂತೆಗೆ ಆಗಮಿಸಿದ್ದರು. ಅವರೊಂದಿಗೆ ಅವರ ಬೆಂಬಲಿಗರು ಸಹ ಇದ್ದು ರಮೇಶ್ ಕುಮಾರ್ ತೂಗಿ ಅಳೆದು ಕುರಿಗಳನ್ನು ಖರೀದಿ ಮಾಡಿದರು.

ಸಕ್ರಿಯ ರಾಜಕಾರಣದಲ್ಲಿರುವ ರಮೇಶ್ ಕುಮಾರ್ ತಮ್ಮ ಬಿಡುವಿನ ಸಮಯದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು ಹಲವು ವಾರಗಳಿಂದ ರಾಜ್ಯದ ಹಾಗೂ ಹೊರ ರಾಜ್ಯಗಳ ಪ್ರತಿಷ್ಠಿತ ಕುರಿ ಸಂತೆಗಳಿಗೆ ಬೇಟಿ ನೀಡಿ‌ ಕುರಿಗಳನ್ನು ಖರೀದಿ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next