Advertisement

ಈ ಜಾಗದಲ್ಲಿ ಕೂತು ತೀರ್ಮಾನಿಸೋದು ಹಿಂಸೆಯಾಗಿದೆ..: ಪ್ರಧಾನಿ ಮೋದಿ

08:07 PM Dec 13, 2022 | Team Udayavani |

ಬೆಂಗಳೂರು: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಮಂಗಳವಾರ ಸಂಸತ್‌ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

Advertisement

ಭೇಟಿ ನಂತರ ಸುದ್ದಿಗಾರರ ಜತೆ ಮಾತನಾಡಿ, ನಮ್ಮ ರಾಜ್ಯದ ನೀರಾವರಿ ವಿಚಾರವನ್ನು ಪ್ರಸ್ತಾಪ ಮಾಡಿದ್ದೇನೆ. ಕಾವೇರಿ, ಕೃಷ್ಣಾ, ಮಹದಾಯಿ ವಿಚಾರವನ್ನು ಪ್ರಸ್ತಾಪಿಸಿದ್ದೇನೆ. ನೀರಾವರಿ ಯೋಜಗಳಲ್ಲಿ ರಾಜ್ಯಕ್ಕೆ ಅನ್ಯಾಯವಾಗಿರುವ ವಿಷಯವನ್ನು ವಿವರವಾಗಿ ಪ್ರಧಾನಿ ಮೋದಿಯವರಿಗೆ ವಿವರಿಸಿದ್ದೇನೆ. ಈ ಜಾಗದಲ್ಲಿ ಕೂತು ತೀರ್ಮಾನ ಮಾಡುವುದು ಹಿಂಸೆಯಾಗಿದೆ ದೇವೇಗೌಡರೇ, ಎಂದು ಪ್ರಧಾನಿಯವರು ಹೇಳಿದರು ಎಂದು ತಿಳಿಸಿದರು.

ನದಿ ನೀರಿನ ವ್ಯಾಜ್ಯಗಳ ತೀರ್ಮಾನ ಕಷ್ಟವಾಗಿದೆ. ನಮ್ಮವರೆ ನಮಗೆ ವಿರೋಧ ಮಾಡುತ್ತಿದ್ದಾರೆ. ಎಲ್ಲಾ ನದಿಗಳದ್ದು ವಿವಾದಗಳಿವೆ. ಯಾವ ನಿರ್ಧಾರ ತೆಗೆದುಕೊಳ್ಳುವುದು ಎಂದು ಪ್ರಧಾನಿ ಮೋದಿ ಅವರೇ ಕೇಳಿದರು ಎಂದರು.

ಕುಂಚಿಟಿಗ ಸಮುದಾಯಕ್ಕೆ ಅನ್ಯಾಯ ಆಗಿರುವ ಬಗ್ಗೆ ವಿವರವಾಗಿ ಹೇಳಿದ್ದೇನೆ. ಕುಂಚಿಟಿಗ ಸಮಯದಾಯ ಕರ್ನಾಟಕದಲ್ಲಿ ಆರರಿಂದ ಏಳು ತಾಲೂಕುಗಳಲ್ಲಿದೆ. ಕುಂಚಿಟಿಗ ಸಮುದಾಯವನ್ನು ಪ್ರತ್ಯೇಕವಾಗಿ ಗುರುತಿಸಬೇಕಿದೆ .ಕೇಂದ್ರ ಸರ್ಕಾರವು ಈ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸಬೇಕು ಎಂದು ಪ್ರಧಾನಿಯವರಲ್ಲಿ ಮನವಿ ಮಾಡಿದ್ದೇನೆ ಎಂದು ಹೇಳಿದರು.

ಹಾಸನದ ವಿಮಾನ ನಿಲ್ದಾಣ ವಿಚಾರವನ್ನು ಪ್ರಸ್ತಾಪ ಮಾಡಿದ್ದೇನೆ. ಇನ್ನೂ ಏರ್‌ ಪೋರ್ಟ್‌ ಕೆಲಸ ಆಗಿಲ್ಲ. ನೀವೇ ತೀರ್ಮಾನ ಮಾಡಿ ಎಂದು ಮನವಿ ಮಾಡಿರುವುದಾಗಿ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next