Advertisement
ಇವರ ನೇತೃತ್ವದ ಭಾರತೀಯ ತಂಡವು 1971ರಲ್ಲಿ ವೆಸ್ಟ್ ವಿಂಡೀಸ್ ಹಾಗೂ ಇಂಗ್ಲಂಡ್ ಪ್ರವಾಸಗಳ ಸಂದರ್ಭಗಳಲ್ಲಿ ಸರಣಿ ಜಯವನ್ನು ತಮ್ಮದಾಗಿಸಿಕೊಂಡಿತ್ತು. ಮಾತ್ರವಲ್ಲದೇ 1972-73ರ ಅವಧಿಯಲ್ಲಿ ಇವರ ನೇತೃತ್ವದ ಟೀಂ ಇಂಡಿಯಾವು ಇಂಗ್ಲಂಡ್ ತಂಡವನ್ನು 2-1 ಅಂತರದಲ್ಲಿ ಸೋಲಿಸಿ ಸರಣಿ ಜಯಿಸಿತ್ತು. ಈ ಮೂಲಕ ವಿದೇಶಿ ನೆಲದಲ್ಲಿ ಮೂರು ಬಾರಿ ಸರಣಿ ಗೆದ್ದ ಯಶಸ್ವೀ ನಾಯಕನಾಗಿ ವಾಡೇಕರ್ ಗುರುತಿಸಿಕೊಂಡಿದ್ದರು.
1966ರಲ್ಲಿ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಟೆಸ್ಟ್ ಕ್ಯಾಪ್ ಧರಿಸಿದ್ದ ವಾಡೇಕರ್ ಅವರು 37 ಪಂದ್ಯಗಳನ್ನು ಆಡಿ 31.07 ಸರಾಸರಿಯಲ್ಲಿ 2113 ರನ್ನುಗಳನ್ನು ಕಲೆ ಹಾಕಿದ್ದರು. ಇವುಗಳಲ್ಲಿ 1 ಶತಕ ಹಾಗೂ 14 ಅರ್ಧಶತಕಗಳನ್ನು ದಾಖಲಿಸಿದ್ದರು. ಇನ್ನು ತನ್ನ ವೃತ್ತಿಜೀವನದಲ್ಲಿ ವಾಡೇಕರ್ ಅವರು ಆಡಿದ್ದು ಕೇವಲ 2 ಏಕದಿನ ಪಂದ್ಯಗಳನ್ನು ಮಾತ್ರ. ಇವರು ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಇಂಗ್ಲಂಡ್ ವಿರುದ್ಧ 1974ರಲ್ಲಿ ಆಡಿದ್ದರು.