Advertisement

ಫ‌ುಟ್‌ಬಾಲ್‌ ಮಾಜಿ ನಾಯಕ ಚಾಪ್‌ಮನ್‌ ನಿಧನ: ದೇಶ ಕಂಡ ಖ್ಯಾತ ಆಟಗಾರನಿಗೆ ಹೃದಯಾಘಾತ

04:19 PM Oct 13, 2020 | keerthan |

ನವದೆಹಲಿ/ಬೆಂಗಳೂರು: ಭಾರತ ಫ‌ುಟ್‌ಬಾಲ್‌ ತಂಡದ ಮಾಜಿ ನಾಯಕ, ಕರ್ನಾಟಕದ ಕಾರ್ಲಟನ್‌ ಚಾಪ್‌ಮನ್‌ ಸೋಮವಾರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

Advertisement

ಅನಾರೋಗ್ಯದ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿತ್ತು. ಕೇವಲ 49 ವರ್ಷಕ್ಕೆ ಅವರು ಮರಣಕ್ಕೆ ತುತ್ತಾಗಿರುವುದು ಫ‌ುಟ್‌ಬಾಲ್‌ ವಲಯಕ್ಕೆ ದಿಗ್ಭ್ರಮೆ ಉಂಟು ಮಾಡಿದೆ. ಹೋಮ ಮತ್ತು

ಅವರು ಭಾರತ ಕಂಡ ಸಾರ್ವಕಾಲಿಕ ಶ್ರೇಷ್ಠ ಆಟಗಾರರಾದ ಐ.ಎಂ.ವಿಜಯನ್‌ ಮತ್ತು ಭೈಚುಂಗ್‌ ಭುಟಿಯರೊಂದಿಗೆ ಭಾರತದ ಪರವಾಗಿ ಆಡಿದ್ದರು. ಭಾರತ ಕಂಡ ಯಶಸ್ವಿ ಆಟಗಾರರಲ್ಲೊಬ್ಬರೂ ಹೌದು. ಶ್ರೇಷ್ಠ ಮಧ್ಯಕ್ಷೇತ್ರೀಯ ಆಟಗಾರರಾಗಿದ್ದ ಅವರು, 1995ರಿಂದ 2001ರವರೆಗೆ ದೇಶದ ಪರ ಆಡಿದ್ದರು, ನಾಯಕರೂ ಆಗಿದ್ದರು. ಅವರ ನಾಯಕತ್ವದಲ್ಲಿ ಭಾರತ ಸ್ಯಾಫ್ ಕಪ್‌ ಗೆದ್ದಿದೆ. ಒಟ್ಟಾರೆ ಅವರು 2001ರಲ್ಲಿ ಫ‌ುಟ್‌ಬಾಲ್‌ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದರು.

ಇದನ್ನೂ ಓದಿ:ಡೆಲ್ಲಿ ಅಂತಿಮ ಸ್ಕೋರ್‌ ಮೊದಲೇ ನಿಗದಿ?! ಐಪಿಎಲ್ ನಲ್ಲಿ ಮತ್ತೆ ಫಿಕ್ಸಿಂಗ್ ಶಂಕೆ!

ನಗುಮೊಗದ ಸಾಧಕ
ಸದಾ ನಗುಮೊಗದಿಂದ ಎಲ್ಲರ‌ ಮೆಚ್ಚುಗೆಗೆ ಪಾತ್ರರಾಗಿದ್ದ ಕಾರ್ಲಟನ್‌, ಬೆಂಗಳೂರಿನಲ್ಲಿ 1971, ಏ.13ರಂದು ಹುಟ್ಟಿದ್ದರು. ಈಸ್ಟ್ ಬೆಂಗಾಲ್‌, ಜೆಸಿಟಿ, ಟಾಟಾ ಫುಟ್‌ಬಾಲ್‌ ಅಕಾಡೆಮಿ, ಕೊಚ್ಚಿನ್‌ ಅವರು ಆಡಿದ ಪ್ರಮುಖ ತಂಡಗಳು. ಟಾಟಾ ಫ‌ುಟ್‌ಬಾಲ್‌ ಅಕಾಡೆಮಿ ಯಿಂದ ಫ‌ುಟ್‌ಬಾಲಿಗನಾಗಿ ಹೊರಹೊಮ್ಮಿದ ಅವರು, 1993ರಲ್ಲಿ ಈಸ್ಟ್‌ಬೆಂಗಾಲ್‌ ತಂಡ‌ವನ್ನು ಕೂಡಿಕೊಂಡರು. ಇಲ್ಲಿ ಅವರು ಹ್ಯಾಟ್ರಿಕ್‌ ಗೋಲು ಬಾರಿಸಿ ಇರಾಖ್‌ ತಂಡದ‌ ಅಲ್‌ ಜವ್ರಾನ್ ನ್ನು ಸೋಲಿಸಲು ನೆರವಾಗಿದ್ದರು. ಆದರೆ ಅವರ ಶ್ರೇಷ್ಠ ಆಟ ಹೊರಹೊಮ್ಮಿದ್ದು, ಜೆಸಿಟಿ ಪರ 1995ರಿಂದ 1997ರವರೆಗೆ ಆಡಿದ ಅವಧಿಯಲ್ಲಿ. ಈ ತಂಡದಲ್ಲಿ ‌ ಅವರು 14 ಟ್ರೋಫಿಗಳನ್ನು ಗೆದ್ದಿದ್ದರು. ರಾಷ್ಟ್ರೀಯ ಫ‌ುಟ್‌ಬಾಲ್‌ ಲೀಗ್‌ ಉದ್ಘಾಟನಾ ಕೂಟವವನ್ನೂ ಇದೇ ತಂಡದ ಪರ‌ ಗೆದ್ದಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next