Advertisement
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಭೂಮಿ, ಗಣಿ,ರೇಪ್ ಇನ್ನಿತರ ಹಗರಣಗಳಲ್ಲಿ ಸಿಲುಕಿತ್ತು. ಸಿದ್ದರಾಮಯ್ಯ ನೇತೃತ್ವದ ಸರಕಾರ ಯಾವುದಾದರೂ ಹಗರಣದಲ್ಲಿ ಸಿಲುಕಿದೆಯೇ ಹೇಳಿ ಎಂದು ಪ್ರಧಾನಿಯವರನ್ನು ಪ್ರಶ್ನಿಸಿದರು.
ರಾಫೆಲ್ ಯುದ್ಧ ವಿಮಾನ ತಯಾರಿಸುವ ಗುತ್ತಿಗೆಯನ್ನು ಬೆಂಗಳೂರಿನ ಎಚ್‌ಎಎಲ್‌ಗೆ ನೀಡಲಾಗಿತ್ತು. ಆದರೆ,ಮೋದಿ ಯವರು ಏಕಾಏಕಿ ಫ್ರಾನ್ಸ್‌ನ ಕಂಪನಿಯೊಂದಕ್ಕೆ ಗುತ್ತಿಗೆ ನೀಡಿ ದ್ದರ ಹಿಂದಿನ ರಹಸ್ಯವೇನು ಎಂದು ಪ್ರಶ್ನಿಸಿದರು. ಎಚ್‌ಎಎಲ್‌ಗೆ ನೀಡಿದ್ದರೆ ನಮ್ಮ ಯುವಕರಿಗೆ ಅವಕಾಶ ಸಿಗುತ್ತಿತ್ತು. ಫ್ರಾನ್ಸ್ ದೇಶದ ಸ್ನೇಹಕ್ಕಾಗಿ ಮೋದಿ ಎಚ್‌ಎಎಲ್ ಗುತ್ತಿಗೆ ರದ್ದುಪಡಿಸಿದರು. ಈ ನಿರ್ಧಾರ ಪೂರ್ವದಲ್ಲಿ ರಕ್ಷಣಾ ಸಚಿವರು, ಸಂಪುಟದ ಒಪ್ಪಿಗೆ ಪಡೆಯಲಾಗಿತ್ತೆ ಎಂಬುದನ್ನು ಮೋದಿ ದೇಶದ ಜನತೆ ಮುಂದೆ ಸ್ಪಷ್ಟಪಡಿಸಬೇಕು ಎಂದು ರಾಹುಲ್ ಒತ್ತಾಯಿಸಿದರು.
Related Articles
Advertisement
ಕಾಂಗ್ರೆಸ್ ನೀಡಿದ ಭರವಸೆಯನ್ನು ಈಡೇರಿಸುತ್ತದೆ. ಹೈದರಾಬಾದ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ 371(ಜೆ)ಕಲಂ ಜಾರಿಗೆ ಭರವಸೆ ನೀಡಿದಂತೆ ಸೌಲಭ್ಯ ನೀಡಿದ್ದೇವೆ. ಈ ಸೌಲಭ್ಯ ನೀಡಲು ಆಗ ಉಪಪ್ರಧಾನಿಯಾಗಿದ್ದ ಎಲ್.ಕೆ.ಆಡ್ವಾಣಿ ನಿರಾಕರಿಸಿದ್ದರು ಎಂದರು.
371(ಜೆ )ಕಲಂನಿಂದಾಗಿ ಹೈ-ಕ ಭಾಗ ಅಭಿವೃದ್ಧಿಗೆ ಹಿಂದಿನ 350 ಕೋಟಿ ರೂ. ಬದಲು ಈಗ ನಾಲ್ಕು ಸಾವಿರ ಕೋಟಿ ರೂ.ಅನುದಾನ ಬರುತ್ತಿದೆ. ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣದಲ್ಲಿ ಹೈ-ಕದ ಸುಮಾರು ಐದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರವೇಶ ಹಾಗೂ ಅಂದಾಜು 20 ಸಾವಿ ರಕ್ಕೂ ಅಧಿಕ ಯುವಕರಿಗೆ ಉದ್ಯೋಗ ಲಭ್ಯವಾಗಿದೆ ಎಂದರು.
ಬಳ್ಳಾರಿ ಜಿಲ್ಲೆ ತಾಯಿ ಸೋನಿಯಾ ಹಾಗೂ ನಮ್ಮ ಕುಟುಂಬ ಕ್ಕೆ ಮರೆಯಲಾಗದ ರೀತಿಯಲ್ಲಿ ಹತ್ತಿರವಾಗಿದೆ. ಯಾವಾಗ ಕರೆದರೂ ಬಂದು ಇಲ್ಲಿ ನಿಮ್ಮೊಂದಿಗಿರುವೆ ಎಂದು ರಾಹುಲ್ ಭರವಸೆ ನೀಡಿದರು.
ಗಮನ ಸೆಳೆದ ಅನಿಲ್ ಲಾಡ್ಪಕ್ಷ ದೊಂದಿಗೆ ಮುನಿಸಿಕೊಂಡಂತಿದ್ದ ಬಳ್ಳಾರಿ ನಗರ ಕ್ಷೇತ್ರದ ಶಾಸಕ ಅನಿಲ್ ಲಾಡ್ ಬೇರೆ ಪಕ್ಷಕ್ಕೆ ವಲಸೆ ಹೋಗುತ್ತಾರೆಂಬ ಸುದ್ದಿ ಹಬ್ಬಿತ್ತಾದರೂ, ಹೊಸ ಪೇಟೆಯಲ್ಲಿ ನಡೆದ ಜನಾಶೀರ್ವಾದ ಯಾತ್ರೆಯ ವೇದಿಕೆಯಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರು.