Advertisement

Thirthahalli: ಅರಣ್ಯ ಒತ್ತುವರಿ ತೆರವು ವಿಚಾರ: ತೀರ್ಥಹಳ್ಳಿಯಲ್ಲಿ ಬೃಹತ್ ಪ್ರತಿಭಟನೆ!

06:01 PM Aug 14, 2024 | Poornashri K |

ತೀರ್ಥಹಳ್ಳಿ: ಈಗಾಗಲೇ ಅರಣ್ಯ ಒತ್ತುವರಿ ತೆರವು ಬಗ್ಗೆ ನಾವೆಲ್ಲರೂ ಸಭೆ ನಡೆಸಿದ್ದೇವೆ. ಅದೊಂದು ಅವೈಜ್ಞಾನಿಕ ಒತ್ತುವರಿ ತೆರವು ಪ್ರಕ್ರಿಯೆ ಆಗಿದೆ. ಈ ಕಾರಣಕ್ಕೆ ಆಗಸ್ಟ್ 19 ಕ್ಕೆ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದು ರೈತ ಸಂಘದ ಮುಖಂಡರಾದ ಕಂಬಳಿಗೆರೆ ರಾಜೇಂದ್ರ ತಿಳಿಸಿದರು.

Advertisement

ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಅವೈಜ್ಞಾನಿಕ ಒತ್ತುವರಿ ತೆರವು ಖಂಡಿಸಿ 19 ರಂದು ಪಕ್ಷಾತೀತವಾಗಿ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆಗೆ ರೈತ ಸಂಘ, ಸಮಾನ ಮನಸ್ಕರು, ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮಿತಿ ಸೇರಿ ಹಲವು ಸಂಘಟನೆಗಳು ಭಾಗಿಯಾಗಲಿವೆ ಎಂದರು.

ತೀರ್ಥಹಳ್ಳಿಯ ವಿಚಾರಗಳನ್ನು ರಾಜ್ಯದ ಪ್ರತಿಯೊಬ್ಬರು ಗಮನವಿಟ್ಟು ನೋಡುತ್ತಾರೆ. ಹಾಗಾಗಿ ಈ ಪ್ರತಿಭಟನೆ ಮಹತ್ವದ್ದಾಗಿದೆ. ಇಲ್ಲಿ ಯಾರು ಬೇರೆ ಕಡೆಯಿಂದ ಬಂದು ವಲಸೆ ಸಾಗುವಳಿ ಮಾಡಿದವರಲ್ಲ, ಇಲ್ಲಿ ಇದ್ದಂತಹವರೇ ಸಾಗುವಳಿ ಮಾಡಿ ಬೆಳೆ ಬೆಳೆದವರು. ಅಂತವರ ಭೂಮಿಯನ್ನು ತೆರವು ಮಾಡುವುದು ಸರಿಯಲ್ಲ. ಅರಣ್ಯ ಇಲಾಖೆಯವರೇ ಒತ್ತುವರಿ ಮಾಡುತ್ತಾರೆ.

ಇಲ್ಲಿನ ಜನರಿಗೆ ರಸ್ತೆ, ಮನೆ, ಕುಡಿಯಲು ನೀರಿನ ವ್ಯವಸ್ಥೆ, ಅದಕ್ಕೂ ಮೀರಿ ಮತದಾನದ ಹಕ್ಕು ಕೊಡುತ್ತಾರೆ. ಇದೆಲ್ಲಾ ಆದ ಮೇಲೆ ಕಟ್ಟಿಕೊಂಡ ಮನೆ ಒತ್ತುವರಿ ಜಾಗ ಎಂದು ಹೇಳುತ್ತಾರೆ. ಇದರಲ್ಲಿ ನ್ಯಾಯ ಎಲ್ಲಿದೆ? ಎಂದು ಪ್ರಶ್ನೆ ಮಾಡಿದರು.

ಕಾಡನ್ನು ಕಡಿದು ಎಂ.ಪಿ.ಎಂ ಕಾರ್ಖಾನೆ ಮಾಡಿದ್ದಾರೆ. ಅಂತಹ ಎಷ್ಟೋ ಕಾಡುಗಳನ್ನು ಕಡಿದಿದ್ದಾರೆ. ಮೊದಲು ಅಂತಹ ಜಾಗದಲ್ಲಿ ಕಾಡನ್ನು ಬೆಳಸಿ. ಅದನ್ನು ಬಿಟ್ಟು ಒತ್ತುವರಿ ಜಾಗವನ್ನು ಒತ್ತಾಯ ಪೂರ್ವಕವಾಗಿ ತೆರವು ಮಾಡುವುದು ಸರಿಯಲ್ಲ. ಲೇಔಟ್ ಹಾಗೂ ನೂರಾರು ಎಕರೆ ಒತ್ತುವರಿ ಮಾಡಿದವರನ್ನು ಕೇಳುವುದಿಲ್ಲ. ಆದರೆ ರೈತರ ಸಮಸ್ಯೆಯನ್ನು ಸರ್ಕಾರ ಸರಿಪಡಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಈ ಸಂದರ್ಭದಲ್ಲಿ ಕೋಡ್ಲು ವೆಂಕಟೇಶ್, ಹೋರಬೈಲು ರಾಮಕೃಷ್ಣ, ನೆಂಪೆ ದೇವರಾಜ್, ಶಿವಾನಂದ ಕರ್ಕಿ, ನಿಶ್ಚಲ್ ಜಾದೂಗಾರ್, ಅಭಿಲಾಷ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next