ಬೆಳಗಾವಿ: ರಾಜ್ಯದಲ್ಲಿ ಹಲವಾರು ರೈತರ ಜಮೀನಿಗೆ ವಕ್ಫ್ ಬೋರ್ಡ್ ಶಾಕ್ ನೀಡಿದೆ. ಜಮೀನು ವಕ್ಫ್ ಬೋರ್ಡ್ ಗೆ ಸೇರಿದ್ದು ಎಂಬ ಮಾಹಿತಿ ತಿಳಿದು ಸಾವಿರಾರು ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಇದೀಗ ಬಿಜೆಪಿಯ ಪ್ರತಿಷ್ಠಿತ ಕುಟುಂಬಕ್ಕೂ ವಕ್ಫ್ ಶಾಕ್ ತಾಗಿದೆ.
ಚಿಕ್ಕೋಡಿಯ ಜೊಲ್ಲೆ ಕುಟುಂಬದ ಜಮೀನಿನಲ್ಲೂ ವಕ್ಫ್ ಹೆಸರು ನಮೂದಿಸಲಾಗಿದೆ. ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಪುತ್ರ ಬಸವಪ್ರಸಾದ ಹೆಸರಲ್ಲಿರುವ ಜಮೀನು ವಕ್ಫ್ ಬೋರ್ಡ್ ಗೆ ಎಂದು ಹೆಸರಿಸಲಾಗಿದೆ.
ಸ್ವಗ್ರಾಮ ಯಕ್ಸಂಬಾ ಗ್ರಾಮದ ಜಮೀನು ಮತ್ತು ಜತೆಗೆ ಜೊಲ್ಲೆ ಕುಟುಂಬದ ಹಲವು ಜನರ ಜಮೀನಿಗೂ ಇದೀಗ ಆತಂಕ ಎದುರಾಗಿದೆ. ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದ ಹಲವಾರು ರೈತರ ಜಮೀನಿಗೆ ವಕ್ಫ್ ಹೆಸರು ನಮೂದು ಮಾಡಲಾಗಿದೆ.
ಬಿಜೆಪಿಯ ಶಾಸಕಿ ಕುಟುಂಬಕ್ಕೆ ವಕ್ಫ್ ಹೆಸರು ಕಂಡು ಜನಸಾಮಾನ್ಯ ರೈತರ ಆತಂಕ ಹೆಚ್ಚಾಗಿದೆ. ಸ್ಪಷ್ಟವಾಗಿ ತಾಂತ್ರಿಕ ದೋಷದ ನಿವಾರಣೆ ನೀಡದ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.