Advertisement

ಕಲಬುರಗಿಯಲ್ಲಿ ಟೆಕ್ಸ್ ಟೈಲ್‌ ಪಾರ್ಕ್‌ ಸ್ಥಾಪನೆಗೆ ಒತ್ತಾಯ

12:56 PM Mar 15, 2022 | Team Udayavani |

ಚಿತ್ತಾಪುರ: ನಮ್ಮ ಭಾಗದ ಜನಪ್ರತಿನಿಧಿ ಗಳು ರಾಜಕೀಯ ಮರೆತು ಕಲಬುರಗಿಯಲ್ಲಿ ಟೆಕ್ಸ್‌ಟೈಲ್‌ ಪಾರ್ಕ್‌ ಸ್ಥಾಪಿಸಲು ಪ್ರಯತ್ನಿಸಬೇಕು ಎಂದು ಎಚ್‌ಕೆಸಿಸಿಐ ಅಧ್ಯಕ್ಷ ಪ್ರಶಾಂತ ಮಾನಕರ್‌ ಹೇಳಿದರು.

Advertisement

ಪಟ್ಟಣದ ಬಾಪುರಾವ ಪಾಟೀಲ್‌ ಕಲ್ಯಾಣ ಮಂಟಪದಲ್ಲಿ ಹೈದ್ರಾಬಾದ ಕರ್ನಾಟಕ ಚೆಂಬರ್‌ ಆಪ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿ ವತಿಯಿಂದ ಹಮ್ಮಿಕೊಂಡ ಮಾಸಿಕ ಸಭೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಟೆಕ್ಸ್‌ ಟೈಲ್‌ ಪಾರ್ಕ್‌ ಸ್ಥಾಪಿಸುವುದರಿಂದ ಸುಮಾರು 25 ಸಾವಿರಕ್ಕೂ ಹೆಚ್ಚು ಉದ್ಯೋಗಳು ಸೃಷ್ಟಿಯಾಗುತ್ತವೆ. ಕಲ್ಯಾಣ ಕರ್ನಾಟಕ ಸುಮಾರು ಯುವಕ- ಯುವತಿಯವರು ಉದೋಗ್ಯಕ್ಕಾಗಿ ಗುಳೆ ಹೋಗುತ್ತಿದ್ದಾರೆ. ಆದ್ದರಿಂದ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿ ಮಾಡಿ ಈ ಭಾಗದ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡಬೇಕು ಎಂದರು.

ಕಾರ್ಯದರ್ಶಿ ಶರಣುಕುಮಾರ ಪಪ್ಪಾ ಮಾತನಾಡಿ, ಕೋವಿಡ್‌ ಸಂದರ್ಭದಲ್ಲಿ ವ್ಯಾಪಾರಸ್ಥರು, ವರ್ತಕರು ಅನೇಕ ಸಮಸ್ಯೆಗಳನ್ನು ಎದುರಿಸಿದ್ದಾರೆ. ಹೀಗಾಗಿ ನಮ್ಮ ಆಡಳಿತ ಮಂಡಳಿಯ ಎಲ್ಲ ಸದಸ್ಯರು ಸೇರಿ ಸರ್ಕಾರದ ಮೇಲೆ ಒತ್ತಡ ಹೇರಿ ಟೆಕ್ಸ್‌ ಕಡಿಮೆ ಮಾಡಲು ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಉದ್ದಿಮೆದಾರ ಸೋಮಶೇಖರ ಪಟೀಲ್‌ ಬೆಳಗುಂಪಾ ಮಾತನಾಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ರಾಜಶೇಖರ ಪಾಟೀಲ್‌, ಖಜಾಂಚಿ ಗುರುದೇವ ದೇಸಾಯಿ, ವೀರೇಂದ್ರ ಬಾಸರಡ್ಡಿ, ಸೈಯದ್‌ ನಿಜಾಮೋದ್ದಿನ್‌ ಚಿಸ್ತಿ, ಶಶಿಕಾಂತ ಪಾಟೀಲ್‌ ಬೆಳಗುಂಪಾ, ಸಿದ್ರಾಮೇಶ್ವರ ಸಜ್ಜನಶೆಟ್ಟಿ, ಶ್ರೀನಿವಾಸ್‌, ಪಾರೂಕ್‌, ವಸೀಂ ಖಾನ್‌, ಕರುಣೇಶ ಘಂಟಿ, ಶರಣು ಬಿರಾಳ, ಶರಣು ಜಿವಣಿಗಿ, ನಂದಕೀಶೋರ ಬಜಾಜ, ಬಸವರಾಜ ಪಟೀಲ್‌ ಬೆಳಗುಂಪ, ನಾಗರಾಜ ರೇಷ್ಮಿ, ವಿಶ್ವನಾಥ ಪಾಟೀಲ್‌ ಅಲ್ಲೂರ, ರಾಜಶೇಖರ ಯದಾಲಾಪುರ, ಸಾಬ್ಬಣ್ಣ ಕಾಶಿ, ಅನಿಲ್‌ ಗುತ್ತೆದಾರ, ಶ್ಯಾಮ ಮುಕ್ತೇದಾರ, ಅಬ್ದುಲ್‌ ಕರೀಂ, ರಾಜಶೇಖರ ಗೋಣಗಿ, ರಾಚಣ್ಣ ಪಡಶೆಟ್ಟಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next