Advertisement
ಸಣ್ಣ ಉಪಗ್ರಹಗಳಿಗೆ ಸೌರ ವಿದ್ಯುತ್ ಚಾಲಿತ ಎಂಜಿನ್ ಅನ್ನು ಪರಿಚಯಿಸಲಿರುವ ಅರ್ಕಾ ಸರಣಿಯ ಎಚ್‌ಇಟಿ ಶನಿವಾರ ಪಿಎಸ್‌ಎಲ್‌ವಿ ರಾಕೆಟ್ ಮೂಲಕ ನಭಕ್ಕೆ ಚಿಮ್ಮಲಿದೆ.“ಇದು ಎಲೆಕ್ಟ್ರಿಕ್ ವಾಹನ ಕ್ರಾಂತಿಯನ್ನು ಬಾಹ್ಯಾಕಾಶಕ್ಕೆ ಒಯ್ದಂತೆ. ಆದರೆ, ಭೂಮಿಯಲ್ಲಿ ನಾವು ವಿದ್ಯುತ್‌ಚಾಲಿತ ವಾಹನಗಳನ್ನು ಕಾರ್ಯಾಚರಿಸುವುದಕ್ಕೆ ಹೋಲಿಸಿದರೆ, ಬಾಹ್ಯಾಕಾಶದಲ್ಲಿ ಈ ತಂತ್ರಜ್ಞಾನದ ಬಳಕೆ ಅತ್ಯಂತ ಸಂಕೀರ್ಣ ಮತ್ತು ಭಿನ್ನವಾಗಿರುತ್ತದೆ” ಎಂದು ಬೆಲ್ಲಾಟ್ರಿಕ್ಸ್ ಏರೋಸ್ಪೇಸ್ ಸಹ ಸ್ಥಾಪಕ ಯಶಸ್ ಕರಣಮ್ ಹೇಳಿದ್ದಾರೆ.
ಸಾಂಪ್ರದಾಯಿಕ ರಾಕೆಟ್‌ಗಳಿಗೆ ಹೋಲಿಸಿದರೆ ಬೆಲ್ಲಾಟ್ರಿಕ್ಸ್ ಅಭಿವೃದ್ಧಿಪಡಿಸಿರುವ ಹಾಲ್-ಎಫೆಕ್ಟ್ ಥ್ರಸ್ಟರ್ ಹೆಚ್ಚಿನ ನೂಕು ಬಲ ಅಥವಾ ಮೈಲೇಜ್ ನೀಡುತ್ತದೆ. ಇದರಿಂದ ಅತ್ಯಂತ ವಿಷಕಾರಿಯಾಗಿರುವ ಹೈಡ್ರಝೈನ್‌ನಂತಹ ಸಾಂಪ್ರದಾಯಿಕ ಇಂಧನಗಳ ಮೇಲಿನ ಅವಲಂಬನೆಯನ್ನೂ ತಗ್ಗಿಸುತ್ತದೆ. ಅಲ್ಲದೆ, ನಾವು ವಿದೇಶಿ ಬಿಡಿಭಾಗಗಳ ಮೇಲೆ ಅವಲಂಬಿಸದೇ ಭಾರತದಲ್ಲೇ ಬಹುತೇಕ ಬಿಡಿಭಾಗಗಳನ್ನು ಅಭಿವೃದ್ಧಿಪಡಿಸಿದ್ದೇವೆ ಎಂದೂ ಯಶಸ್ ತಿಳಿಸಿದ್ದಾರೆ.