Advertisement

ಆರೋಗ್ಯಕ್ಕಾಗಿ ಸೂಚನೆ ಪಾಲಿಸಿ

06:54 AM Jul 08, 2020 | Lakshmi GovindaRaj |

ಮುಳಬಾಗಿಲು: ಪ್ರತಿಯೊಬ್ಬ ಮನುಷ್ಯ ತನ್ನ ಆರೋಗ್ಯ ಕಾಪಾಡಿಕೊಳ್ಳಲು ಇಲಾಖೆಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕೆಂದು ತಹಶೀಲ್ದಾರ್‌ ಕೆ.ಎನ್‌. ರಾಜಶೇಖರ್‌ ತಿಳಿಸಿದರು. ತಾಲೂಕು ಆರೋಗ್ಯ ಇಲಾಖೆಯಿಂದ ರಾಷ್ಟ್ರೀಯ ಡೆಂಘೀ ನಿಯಂತ್ರಣ ದಿನಾಚರಣೆ ಅಂಗವಾಗಿ ನಗರದ ಮಿನಿವಿಧಾನಸೌಧ ಎದುರು ಪ್ರಚಾರ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದರು.

Advertisement

ಪ್ರತಿ ಮನೆಯಲ್ಲಿ ಸ್ವತ್ಛತೆ ಕಾಪಾಡಿಕೊಂಡು ಶುದಟಛಿ ಆಹಾರವನ್ನು ಸೇವಿಸಿ  ಚರಂಡಿ ಮತ್ತು ರಸ್ತೆಗಳಲ್ಲಿ ತ್ಯಾಜ್ಯ ವಸ್ತು ಬಿಸಾಡದೇ ನಗರಸಭೆ ಸೂಚಿಸಿರುವ ಕಸದ ಬುಟ್ಟಿಗಳಲ್ಲಿಯೇ ಹಾಕಬೇಕು ಎಂದು ಒತ್ತಾಯಿಸಿದರು. ಅಲ್ಲದೇ, ಎಲ್ಲಿಯೂ ನೀರು ಶೇಖರಣೆಯಾಗದಂತೆ ಪ್ರತಿ ನಿತ್ಯ ತಮ್ಮ ಮನೆಗಳ ಸುತ್ತಮುತ್ತ  ಸ್ವತ್ಛತೆ ಕಾಪಾಡಿ ಕೊಂಡು ಸೊಳ್ಳೆಗಳನ್ನು ನಿಯಂತ್ರಿಸಿ ಡೆಂಘೀ, ಚಿಕೂನ್‌ ಗುನ್ಯಾ, ಮಲೇರಿಯಾ ಫೈಲೇರಿಯಾಸಿಸ್‌ ಮತ್ತು ಮೆದುಳು ಜ್ವರಗಳ ಕಡಿವಾಣಕ್ಕೆ ಶ್ರಮಿಸಬೇಕು ಎಂದು ಹೇಳಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ವರ್ಣಶ್ರೀ ಮಾತನಾಡಿ, ಮೆದುಳು ಜ್ವರ, ಡೆಂಘೀ, ಚಿಕೂನ್‌ಗುನ್ಯಾ, ಇತರೆ ರೋಗ ಲಕ್ಷಣಗಳು ಕಂಡು ಬಂದಲ್ಲಿ ಕೂಡ ಲೇ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದಲ್ಲಿ ಉಚಿತ ಚಿಕಿತ್ಸೆ ನೀಡುವುದಾಗಿ ತಿಳಿಸಿದರು. ಕೋವಿಡ್‌-19 ಇರುವುದರಿಂದ ಪ್ರತಿಯೊಬ್ಬರೂ  ವಿನಾಕಾರಣ ಓಡಾಡದೇ ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್‌ ಮೂಲಕ ಪ್ರತಿನಿತ್ಯ ಕೈಗಳನ್ನು ಸ್ವತ್ಛಗೊಳಿಸಿಕೊಂಡು ತಮ್ಮ ಕುಟುಂಬಸ್ಥರ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ನಗರಸಭೆ  ಆರೋಗ್ಯ ನಿರೀಕ್ಷಕ ಶಿವಾರೆಡ್ಡಿ, ಆಲಂಗೂರು ರಾಮಣ್ಣ, ಶಿವ, ಅಪ್ಪಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next