Advertisement

ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಕಟ

06:00 AM Dec 10, 2018 | |

ಬೀದರ: ಕರ್ನಾಟಕ ಜಾನಪದ ಅಕಾಡೆಮಿಯ 2018ನೇ ಸಾಲಿನ ಪ್ರತಿಷ್ಠಿತ ಜಾನಪದ ಪ್ರಶಸ್ತಿಗೆ ರಾಜ್ಯದ 30 ಜಾನಪದ ಕಲಾವಿದರು ಆಯ್ಕೆಯಾಗಿದ್ದು, ಇಬ್ಬರು ಜಾನಪದ ತಜ್ಞರಿಗೆ ಗೌರವ ಪುರಸ್ಕಾರ ನೀಡಲು ನಿರ್ಧರಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಬಿ.ಟಾಕಪ್ಪ ಕಣ್ಣೂರ ಹೇಳಿದರು.

Advertisement

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಾನಪದ ಪ್ರಶಸ್ತಿಯ ಮೊತ್ತ 25,000 ಹಾಗೂ ಇಬ್ಬರು ಕ್ಷೇತ್ರ ತಜ್ಞರಿಗೆ ತಲಾ 50,000 ರೂ.ನಗದು ಜೊತೆಗೆ ಸ್ಮರಣಿಕೆ ನೀಡಲಾಗುವುದು. ಉತ್ತಮ ಕಲಾವಿದರನ್ನು, ಕಲೆಗಾಗಿ ಬದುಕು ಮುಡುಪಾಗಿಟ್ಟವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಡಿ.26, 27ರಂದು ಬೀದರನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದರು. ಅಕಾಡೆಮಿ ರಿಜಿಸ್ಟ್ರಾರ್‌ ಸಿದ್ರಾಮ ಸಿಂಧೆ, ಸದಸ್ಯರಾದ ವಿಜಯಕುಮಾರ ಸೋನಾರೆ, ಪ್ರಕಾಶ ಅಂಗಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಶಸ್ತಿ ಪುರಸ್ಕೃತರು:
* ಸಂಪ್ರದಾಯ ಕಲಾ ಪ್ರಕಾರ – ಬೆಂಗಳೂರಿನ ಕೌದೇನಹಳ್ಳಿ ಗ್ರಾಮದ ಯಲ್ಲಮ್ಮ.
* ಸೋಬಾನೆ ಪದ – ಬೆಂಗಳೂರು ಗ್ರಾಮಾಂತರ ಜಿಲ್ಲೆ ಕೊಯಿರಾ ಗ್ರಾಮದ ಮುನಿನರಸಮ್ಮ.
* ತಮಟೆ ವಾದನ – ರಾಮನಗರ ಜಿಲ್ಲೆ ಹೊಸಹಳ್ಳಿ ಗ್ರಾಮದ ಮುನಿಚೂಡಯ್ಯ.
* ಸೂಲಗಿತ್ತಿ ಜನಪದ ವೈದ್ಯ ಕಲಾ ಪ್ರಕಾರ – ಕೋಲಾರ ಜಿಲ್ಲೆ ದಿನ್ನಹಳ್ಳಿ ಗ್ರಾಮದ ಬ್ಯಾಟಮ್ಮ
* ಚೆಕ್ಕೆ ಭಜನೆ – ಚಿಕ್ಕಬಳ್ಳಾಪುರ ಜಿಲ್ಲೆ ಬೊಮ್ಮಯ್ಯಗಾರಿಪಲ್ಲಿ ಗ್ರಾಮದ ನರಸಿಂಹಯ್ಯ.
* ಜುಂಜಪ್ಪನ ಕಾವ್ಯ – ತುಮಕೂರು ಜಿಲ್ಲೆ ಕೆಂಚನಹಳ್ಳಿ ಗ್ರಾಮದ ಲಕ್ಷ್ಮಮ್ಮ.
* ನಾಟಿ ವೈದ್ಯ ಕಲಾ ಪ್ರಕಾರ – ದಾವಣಗೆರೆ ಜಿಲ್ಲೆ ಕತ್ತಿಗೆ ಗ್ರಾಮದ ಪುಟ್ಟಮಲ್ಲಪ್ಪ ಮಾಳನಾಯಕರ.
* ಭಜನೆ ಪದ – ಚಿತ್ರದುರ್ಗ ಜಿಲ್ಲೆ ಸೊಂಡೆಕೋಳ ಗ್ರಾಮದ ಎಸ್‌.ರೇವಣಸಿದ್ದಪ್ಪ.
* ಡೊಳ್ಳು ಕುಣಿತ – ಶಿವಮೊಗ್ಗ ಜಿಲ್ಲೆ ಹೆಜ್ಜೆ ಗ್ರಾಮದ ಕರಡಿ ಲಕ್ಷ್ಮಣಪ್ಪ.
* ಲಂಬಾಣಿ ಹಾಡುಗಳು  – ಹಾಸನ ಜಿಲ್ಲೆ ಕರೇಹಳ್ಳಿ ಗ್ರಾಮದ ಚಂದ್ರಬಾಯಿ.
* ಮಂಟೇಸ್ವಾಮಿ ಕಾವ್ಯ – ಚಾಮರಾಜನಗರ ಜಿಲ್ಲೆ ಭೈರನತ್ತ ಗ್ರಾಮದ ಮರಿಸಿದ್ದಮ್ಮ.
* ವೀರಗಾಸೆ ನೃತ್ಯ – ಚಿಕ್ಕಮಗಳೂರು ಜಿಲ್ಲೆ ಗೌರಾಪುರ ಗ್ರಾಮದ ಜಿ.ವಿ.ಕೊಟ್ರೇಶಪ್ಪ.
* ನಗಾರಿ ವಾದನ – ಮೈಸೂರು ಜಿಲ್ಲೆ ಅಂಬೇಡ್ಕರ ನಗರದ ನಾಗರಾಜು.
* ಕೋಲಾಟ – ಮಂಡ್ಯ ಜಿಲ್ಲೆ ತಳಗವಾದಿ ಗ್ರಾಮದ ಸಿದ್ದಯ್ಯ.
* ಭೂತಾರಾಧನೆ – ದಕ್ಷಿಣ ಕನ್ನಡ ಜಿಲ್ಲೆಯ ಯಮುನ.
* ಪಾಡಾªನ  – ಉಡುಪಿ ಜಿಲ್ಲೆ ವಂತಿಬೆಟ್ಟು ಗ್ರಾಮದ ಅಮ್ಮಣ್ಣಿ.
* ದುಡಿ ಪಾಟ್‌  – ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಜಾನಕಿ ತಮ್ಮಯ್ಯ.
* ಸಂಪ್ರದಾಯ ಕಲಾಪ್ರಕಾರ – ಕಲಬುರಗಿ ಜಿಲ್ಲೆ ಅತ್ತರಗಿ ಗ್ರಾಮದ ಮಹಾದೇವಿ ಶಾಂತಪ್ಪ.
* ರಿವಾಯತ್‌ ಪದ – ಕೊಪ್ಪಳ ಜಿಲ್ಲೆ ಹಾಬಲಕಟ್ಟಿ ಗ್ರಾಮದ ದಾವಲಸಾಬ ಆತ್ತಾರ.
* ಜಾನಪದ ಗೀತೆ – ರಾಯಚೂರಿನ ಕೃಷ್ಣದೇವರಾಯ ನಗರದ ಶರಣಪ್ಪ ಗೋನಾಳ.
* ತತ್ವಪದ ಗಾಯನ – ಬೀದರ ಜಿಲ್ಲೆ ನಾಗೂರ ಗ್ರಾಮದ ತುಳುಸಮ್ಮ.
 * ಸೋಬಾನೆ ಪದ – ಬಳ್ಳಾರಿ ಜಿಲ್ಲೆ ಸೋವೆನಹಳ್ಳಿ ಗ್ರಾಮದ ಸೋವೇನಹಳ್ಳಿ ಬಸಣ್ಣ.
* ದುಂದುಮೆ ಹಾಡು – ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಬಿ.ಲಕ್ಷ್ಮಣ ಗುತ್ತೇದಾರ.
* ಶಹನಾಯಿ ವಾದನ – ಬೆಳಗಾವಿ ಜಿಲ್ಲೆ ಬಂಬಲವಾಡ ಗ್ರಾಮದ ಭರಮಪ್ಪ ರಾಮಪ್ಪ ಭಜಂತ್ರಿ.
* ಜಾನಪದ ಗಾಯನ – ಧಾರವಾಡ ಜಿಲ್ಲೆ ದೇವಗಿರಿ ಗ್ರಾಮದ ಲಕ್ಷ್ಮೀಬಾಯಿ ಕಾಳೆ.
* ಸಂಬಾಳ ವಾದನ – ವಿಜಯಪುರ ಜಿಲ್ಲೆ ಕಾಖಂಡಕಿ ಗ್ರಾಮದ ಚಿನ್ನಪ್ಪ ಗಿರಿಮಲ್ಲಪ್ಪ ಪೂಜಾರಿ.
* ಕರಡಿ ಸಾಂಬಾಳ – ಬಾಗಲಕೋಟೆ ಜಿಲ್ಲೆ ನಾವಲಗಿ ಗ್ರಾಮದ ಮಲ್ಲಪ್ಪ ಬಾಳಪ್ಪ ಹೂಗಾರ.
* ಹಾಲಕ್ಕಿ ಸುಗ್ಗಿ ಕುಣಿತ – ಉತ್ತರ ಕನ್ನಡ ಜಿಲ್ಲೆ ಬೇಲೆಕೇರಿ ಗ್ರಾಮದ ಖೇಮು ತುಳಸುಗೌಡ.
* ಡೊಳ್ಳಿನ ಪದ – ಹಾವೇರಿ ಜಿಲ್ಲೆ ಇನಾಂಯಲ್ಲಾಪೂರ ಗ್ರಾಮದ ಬಡವಪ್ಪ ಮಹಾದೇವಪ್ಪ ಆನವಟ್ಟಿ.
* ಮದುವೆಯ ಹಾಡುಗಳು – ಗದಗ ಜಿಲ್ಲೆ ಕೊತಬಾಳ ಗ್ರಾಮದ ಬಸವ್ವ.

ತಜ್ಞರ ಪ್ರಶಸ್ತಿ:
ಡಾ| ಜೀ.ಶಂ.ಪ ತಜ್ಞ ಪ್ರಶಸ್ತಿಗೆ ದಾವಣಗೆರೆ ಜಿಲ್ಲೆಯ ಡಾ| ಮಲ್ಲಿಕಾರ್ಜುನ ಕಲಮರಳಿ, ಡಾ| ಬಿ.ಎಸ್‌.ಗದ್ದಗೀಮಠ ತಜ್ಞ ಪ್ರಶಸ್ತಿಗೆ ಉಡುಪಿ ಜಿಲ್ಲೆಯ ಪಾಲ್ತಾಡಿ ರಾಮಕೃಷ್ಣ ಆಚಾರ್‌ ಅವರನ್ನು ಆಯ್ಕೆ ಮಾಡಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next