Advertisement

ಬಾವುಟಗುಡ್ಡೆ: ಗಾಂಧಿ ಪುಣ್ಯತಿಥಿ ಆಚರಣೆ 

12:36 PM Jan 31, 2018 | Team Udayavani |

ಮಹಾನಗರ: ಗ್ರಾಮಗಳ ಉದ್ಧಾರ, ಸ್ವರಾಜ್ಯದ ಆಶಯ, ಸ್ವದೇಶಿ ಉತ್ಪನ್ನ ಬಳಕೆ, ಅಹಿಂಸೆ ಸೇರಿದಂತೆ ಹಲವು ರೀತಿಯ ಕನಸು ಕಂಡಿದ್ದ ಮಹಾತ್ಮಾ ಗಾಂಧೀಜಿಯವರ ತತ್ವಗಳನ್ನೇ ಹಿಮ್ಮುಖವಾಗಿ ತಿರುಗಿಸುವ ಹಾಗೂ ತಡೆಯುವ ಅತ್ಯಂತ ನೋವಿನ ಘಟನೆಗಳು ನಡೆಯುತ್ತಿರುವುದು ಬೇಸರ ತರಿಸುತ್ತಿದೆ ಎಂದು ಲೇಖಕ ಸತ್ಯನಾರಾಯಣ ಮಲ್ಲಿಪಟ್ಣ ಅಭಿಪ್ರಾಯಪಟ್ಟರು. ಮಹಾತ್ಮಾ ಗಾಂಧಿ ಶಾಂತಿ ಪ್ರತಿಷ್ಠಾನದ ಆಶ್ರಯದಲ್ಲಿ ಬಾವುಟಗುಡ್ಡೆಯ ಪ್ರತಿಷ್ಠಾನದ ಕಾರ್ಯಾಲಯದಲ್ಲಿ ಆಯೋಜಿಸಲಾದ ಗಾಂಧಿ ಪುಣ್ಯತಿಥಿಯಲ್ಲಿ ಭಾಗವಹಿಸಿದರು.

Advertisement

ಮಹಾತ್ಮಾ ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅಲೋಶಿಯಸ್‌ ಕಾಲೇಜಿನ ಪ್ರಾಂಶುಪಾಲರಾದ ರೆ|ಡಾ|ಪ್ರವೀಣ್‌ ಮಾರ್ಟಿಸ್‌, ಟ್ಯಾಲೆಂಟ್‌ ರಿಸರ್ಚ್‌ ಫೌಂಡೇಶನ್‌ನ ರಫೀಕ್‌ ಮಾಸ್ಟರ್‌, ಮಹಾತ್ಮಾ ಗಾಂಧಿ ಶಾಂತಿ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರಭಾಕರ ಶ್ರೀಯಾನ್‌, ಕಾರ್ಯದರ್ಶಿ ಡಾ| ಎನ್‌.ಇಸ್ಮಾಯಿಲ್‌ ಉಪಸ್ಥಿತರಿದ್ದರು. ಕಾರ್ಯಕಾರಿ ಸದಸ್ಯ ಕಲ್ಲೂರು ನಾಗೇಶ್‌ ನಿರೂಪಿಸಿದರು. ಸಹಕಾರ್ಯದರ್ಶಿ ಪ್ರೇಮ್‌ಚಂದ್‌ ವಂದಿಸಿದರು.

ತದ್ವಿರುದ್ಧ ಪರಿಸ್ಥಿತಿ
ಮಹಾತ್ಮಾ ಗಾಂಧೀಜಿಯವರು ಹಿಂದೆ ಮಂಗಳೂರಿಗೆ ಬಂದಿದ್ದ ಸಂದರ್ಭ ಇಲ್ಲಿನ ಸೌಹಾರ್ದ ವಾತಾವರಣ ಕಂಡು ಶ್ಲಾಘನೆಯ ಮಾತನ್ನಾಡಿದ್ದರು. ಇತರ ಕಡೆಗಳಿಗೆ ಮಾದರಿಯಾದ ಜೀವನ ನಿರ್ವಹಣೆ ಮಂಗಳೂರಿನಲ್ಲಿ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಈಗ ಗಾಂಧೀಜಿ ಆಡಿದ ಮಾತಿಗೆ ತದ್ವಿರುದ್ಧ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸತ್ಯನಾರಾಯಣ ಮಲ್ಲಿಪಟ್ಣ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next