Advertisement

ಐವರು ಮಹಿಳೆಯರಿಂದ ಪ್ಯಾರಾಚೂಟ್‌ ಡೈವ್‌

11:29 AM Feb 24, 2019 | Team Udayavani |

ಬೆಂಗಳೂರು: ಐವರು ಮಹಿಳಾ ವಿಂಗ್‌ ಕಮಾಂಡರ್‌ಗಳು ಏರೋ ಇಂಡಿಯಾ ಶೋನಲ್ಲಿ 400 ಅಡಿ ಎತ್ತರದಿಂದ ಪ್ಯಾರಾಚೂಟ್‌ನೊಂದಿಗೆ ಹಾರುವ ಮೂಲಕ ಪ್ರೇಕ್ಷಕರು ಹುಬ್ಬೇರಿಸುವಂತೆ ಮಾಡಿದರು. ವಿಂಗ್‌ ಕಮಾಂಡ್‌ ಆಶಾ ಜೋತಿರ್ಮಯಿ ನೇತೃತ್ವದ ತಂಡದಲ್ಲಿ ಬೆಂಗಳೂರು ಮೂಲದ ಸಂಗೀತಾ ಪೌಲ್‌ರಾಜ್‌ ಹಾಗೂ ಸೀಮಾ ಶರೋನ್‌, ಈಶಾ ಗಿಲ್‌, ತುಹಿತಾ ಗೌರ್‌ ಇದ್ದರು. 9.30ಕ್ಕೆ ಹೆಲಿಕಾಪ್ಟರ್‌ ನಲ್ಲಿ ಆಕಾಶದಿಂದ ಭಾರತೀಯ ಧ್ವಜ, ಸೇನೆಯ ಧ್ವಜ ಹಿಡಿದು ಪ್ಯಾರಚೂಟ್‌ ಮೂಲಕ ಭೂಮಿಗೆ ಇಳಿದ ಮಹಿಳೆಯರು, 15 ನಿಮಿಷದಲ್ಲಿ ರನ್‌ವೇ ತಲುಪಿದ್ದರು. ಈ ವೇಳೆ ಪುರುಷರ ತಂಡವೊಂದು ಪ್ಯಾರಾಚೂಟ್‌ ಡೈವ್‌ ನಡೆಸಿತು.

Advertisement

ನಂತರ ಮಾತನಾಡಿದ ವಿಂಗ್‌ ಕಮಾಂಡ್‌ ಆಶಾ ಜೋತಿರ್ಮಯಿ, ಕಠಿಣ ಪರಿಶ್ರಮದಿಂದ ಇದು ಸಾಧ್ಯವಾಗಿದೆ. ಮಹಿಳೆಯಾಗಿ ಇಂತಹ ಸಾಧನೆ ಮಾಡಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಸುಮಾರು 20 ವರ್ಷದಿಂದ ಅಭ್ಯಾಸ ಮಾಡುತ್ತಿದ್ದೇನೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹಿಳೆರು ಸಾಧನೆ ಮಾಡುತ್ತಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ ಎಂದರು. 

ಸಂಗೀತಾ ಪೌಲ್‌ರಾಜ್‌ ಮಾತನಾಡಿ, ಮಹಿಳೆಯರು ಸವಾಲುಗಳನ್ನು ಸ್ವೀಕರಿಸಿದರೆ ಮಾತ್ರ ರಕ್ಷಣಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ. ರಕ್ಷಣಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಸಾಕಷ್ಟು ಅವಕಾಶಗಳಿದ್ದು, ಅವುಗಳ ಸದುಪಯೋಗ ಪಡೆಯಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next