Advertisement
ಜೂನ್‌ನಿಂದ ಎರಡು ತಿಂಗಳು ಮೀನುಗಾರಿಕೆಗೆ ನಿಷೇಧವಿದೆ.ಯಾಂತ್ರಿಕ ಮೀನುಗಾರಿಕೆ ಚಟುವಟಿಕೆ ನಡೆಯುವುದು ಆ. 10ರ ಬಳಿಕ; ಹಾಗಾಗಿ ಮೀನು ಪ್ರಿಯರು ಮಳೆಗಾಲಕ್ಕೆ ಬೇಕಾಗುವ ಮೀನನ್ನು ಎಪ್ರಿಲ್ ಮೇ ತಿಂಗಳಲ್ಲಿ ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಆದರೆ ಈ ಬಾರಿ ಲಾಕ್‌ಡೌನ್‌ನಿಂದಾಗಿ ಸುಮಾರು ಒಂದೂವರೆ ತಿಂಗಳು ಮೀನುಗಾರಿಕೆ ಸ್ಥಗಿತಗೊಂಡಿತ್ತು. ಬಳಿಕ ಶೇ. 15ರಷ್ಟು ದೋಣಿಗಳು ಮಾತ್ರ ಮೀನುಗಾರಿಕೆಗೆ ತೆಳಿದ್ದು ತಾಜಾ ಮೀನಿಗೆ ಸಾಕಷ್ಟು ಬೇಡಿಕೆ ಇದ್ದುದರಿಂದ ಒಣಮೀನಿಗೆ ಬೇಕಾಗುವಷ್ಟು ಮೀನು ಲಭ್ಯತೆ ಇರಲಿಲ್ಲ.
ಪ್ರಸ್ತುತ ಮೀನು ಮಾರುಕಟ್ಟೆಯಲ್ಲಿ ಒಣಮೀನು ಬೆಲೆ ಗಗನಕ್ಕೇರಿದ್ದು, ಒಂದು ಕೆ.ಜಿ.ಗೆ 150 ರೂ. ಇದ್ದ ಗೊಲಾಯಿ ಮೀನು ಇದೀಗ ಮಾರುಕಟ್ಟೆಯಲ್ಲಿ 600 ರೂ. ಗೆ ಮಾರಾಟವಾಗುತ್ತಿದೆ. ಅದರಂತೆ ಕೆ.ಜಿ.ಗೆ 300 ರೂ. ಇದ್ದ ಅಡೆಮೀನಿಗೆ 900 ರೂ. ಆಗಿದೆ. ಕೆ.ಜಿ.ಗೆ 50 ರೂ. ಇದ್ದ ಕುರ್ಚಿ, ಪಾಂಬೊಲ್‌ಗೆ 150 ರೂ., 80 ರೂ. ಇದ್ದ ಆರಣೆ ಮೀನು 170ಕ್ಕೆ ಮಾರಾಟ ವಾಗುತ್ತಿದೆ. 100 ರೂ.ಯ ನಂಗ್ ಮೀನಿಗೆ 400 ರೂ. ಇದೆ. 4 ರೂ. ಗೆ ಮಾರಾಟವಾಗು ತ್ತಿದ್ದ ಮದ್ಯಮ ಗಾತ್ರ ಒಂದು ಬಂಗುಡೆ ಮೀನಿಗೆ ಈಗ 20ರೂ. ಆಗಿದೆ. ಕಲ್ಲರ್ 70ರಿಂದ 400 ರೂ. ಗೆ ಏರಿಕೆಯಾಗಿದೆ. ಸಮುದ್ರದಲ್ಲಿ ಹಿಡಿದು ತಂದ ಮೀನನ್ನು ನೀರಿನಿಂದ ಸ್ವತ್ಛವಾಗಿ ತೊಳೆದು ಬಳಿಕ ಕೆಲವು ಗಂಟೆಗಳ ಕಾಲ ಉಪ್ಪು ಹಾಕಿ ಇಡಲಾಗುತ್ತದೆ. ಬಳಿಕ ಸಿಹಿನೀರಿನಿಂದ ಸ್ವಚ್ಚಗೊಳಿಸಿ ಬಿಸಿಲಿಗೆ ಹಾಕಿ ಒಣಗಿಸಲಾಗುತ್ತದೆ.
Related Articles
ಸರಕಾರ ಲಾಕ್‌ಡೌನ್ ಮಾಡಿದ್ದರಿಂದ ಮೀನಿನ ಮಾರಾಟಕ್ಕೆ ಸಮಸ್ಯೆಯಾಗುತ್ತದೆ ಎಂದು ದಾಸ್ತಾನು ಇಟ್ಟಿದ್ದ ಎಲ್ಲ ಮೀನನ್ನು ಅದರ ಮೊದಲೇ ಮಾರಾಟ ಮಾಡಿದ್ದೇವೆ. ಲಾಕ್‌ಡೌನ್ ಸಡಿಲಿಕೆಯಾದ ಅನಂತರ ಕೆಲವೇ ಬೋಟುಗಳು ತೆರಳಿದ್ದರಿಂದ ಬಂದ ಮೀನಿಗೆ ಒಣಗಿಸಲು ಬೇಕಾದ ಮೀನು ಸಿಗುತ್ತಿರಲಿಲ್ಲ.
-ಜಲಜಾ ಕೋಟ್ಯಾನ್,,
ಅಧ್ಯಕ್ಷರು, ಮಹಿಳಾ ಮೀನುಗಾರ ಸಹಕಾರಿ ಸಂಘ
Advertisement