Advertisement

ವಿಶ್ವ ಚಂದ್ರನ ದಿನ: ಚಂದ್ರನೂರಿನಲ್ಲಿ ಮೊದಲ ಹೆಜ್ಜೆ…

12:00 AM Jul 20, 2023 | Team Udayavani |

ಬಾಹ್ಯಾಕಾಶ ಕ್ಷೇತ್ರದಲ್ಲಿ ಇಂದು ನಾವು ಅಸಾಧ್ಯವೆನಿಸಿದ್ದ ಸಾಧ್ಯತೆಗಳನ್ನು ಸಾಧಿಸಿ ಮುನ್ನುಗ್ಗುತ್ತಿದ್ದೇವೆ. ಭೂಮಿಯ ಪರಿಧಿಯ ಮೀತಿಯನ್ನು ಮೀರಿ ಶಿಶಿರನ ಸಂಶೋಧನೆಯೆಡೆಗೆ ಹೆಜ್ಜೆ ಇಟ್ಟಿದ್ದೇವೆ. ಸುಮಾರು 24 ವರ್ಷಗಳ ಹಿಂದೆ ಇಡೀ ಮನುಕುಲವೇ ಅಚ್ಚರಿ ಪಡುವಂತಹ ವಿಸ್ಮಯ ಎಲ್ಲರನ್ನೂ ಬೆರಗಾಗಿಸಿತ್ತು. ಅದು 1964ರ ಜು.20, ಭೂಮಿಯ ಏಕೈಕ ಉಪಗ್ರಹ ಚಂದ್ರನ ಮೇಲೆ ಮಾನವ ಹೆಜ್ಜೆ ಇರಿಸಿದ್ದ. ಇದರ ಸ್ಮರಣಾರ್ಥವಾಗಿ ಜು.20ರಂದು ವಿಶ್ವ ಚಂದ್ರನ ದಿನವಾಗಿ ಆಚರಿಸಲಾಗುತ್ತಿದೆ.

Advertisement

2021ರಲ್ಲಿ ನಿರ್ಧಾರ
ವಿಶ್ವಸಂಸ್ಥೆಯು 2021ರಲ್ಲಿ ತನ್ನ “ಬಾಹ್ಯಾಕಾಶದ ಶಾಂತಿಯುತ ಬಳಕೆಗಳಲ್ಲಿ ಅಂತಾರಾಷ್ಟ್ರೀಯ ಸಹಕಾರ’ ನಿರ್ಣಯದಲ್ಲಿ ಚಂದ್ರನ ಮೇಲೆ ಮಾನವನು ಮೊದಲ ಹೆಜ್ಜೆಯಿರಿಸಿದ ದಿನವನ್ನು ಅಂತಾರಾಷ್ಟ್ರೀಯ ಚಂದ್ರನ ದಿನವನ್ನಾಗಿ ಆಚರಿಸಲು ನಿರ್ಧರಿಸಿತು.

ಇಂದು ಹಲವು ದೇಶಗಳು ಚಂದ್ರನ ಊರಿಗೆ ಪಯಣ ಬೆಳೆಸುವ ಹಾದಿಯಲ್ಲಿವೆ. ಇತ್ತೀಚೆಗಷ್ಟೇ ಭಾರತವೂ ತನ್ನ ಚಂದ್ರಯಾನ – 3ರ ಉಪಗ್ರಹವನ್ನು ಉಡಾವಣೆ ಮಾಡಿದೆ. ಅಮೆರಿಕ, ಚೀನ, ರಷ್ಯಾ ಈಗಾಗಲೇ ಚಂದ್ರನ ಬಗ್ಗೆ ಅಧ್ಯಯನ ನಡೆಸುತ್ತಿದೆ. ಅದಲ್ಲದೆ ಈಗಿನವರೆಗೆ 140 ಮೂನ್‌ ಮಿಷನ್‌ಗಳನ್ನು ಕೈಕೊಳ್ಳಲಾಗಿದೆ. ತಂತ್ರಜ್ಞಾನದ ಸಾಧ್ಯತೆಗಳು ಬಾಹ್ಯಾಕಾಶದ ವಿಸ್ಮಯಕಾರಿ, ಕುತೂ ಹಲಗಳನ್ನು ನಾವು ತಿಳಿದುಕೊಳ್ಳುವಂತೆ ಮಾಡುತ್ತಿವೆ.

ನಾಸಾದ ಅಪೋಲೋ ಮಿಷನ್‌
1961ರಲ್ಲಿ ಅಮೆರಿಕದ ಆಗಿನ ಪ್ರಧಾನಿಯಾಗಿದ್ದ ಜಾನ್‌ ಎಫ್. ಕೆನಡಿ ಅವರು ಚಂದ್ರನಲ್ಲಿಗೆ ಮಾನವನನ್ನು ಕಳುಹಿಸುವ ಗುರಿಯನ್ನು ಘೋಷಿಸಿದ್ದರು. ಇದಾದ ಎಂಟು ವರ್ಷಗಳ ಬಳಿಕ 1969ರಲ್ಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಾದ ನಾಸಾ ಜು.16ರಂದು ತನ್ನ ಎರಡು ಗಗನ ಯಾತ್ರಿ ಗಳನ್ನು ಹೊತ್ತೂಯ್ಯುವ ಅಪೋಲೋ -11 ಉಪಗ್ರಹವನ್ನು ಚಂದ್ರನಲ್ಲಿಗೆ ಉಡಾವಣೆ ಮಾಡಿತ್ತು.

ಅಮೆರಿಕದ ನೀಲ್‌ ಆರ್ಮ್ ಸ್ಟ್ರಾಂಗ್‌ ಹಾಗೂ ಎಡ್ವಿನ್‌ ಬಝ್ ಆಲ್ಡಿನ್‌ ಚಂದ್ರನ ಊರಿಗೆ ಪ್ರಯಾಣ ಬೆಳೆಸಿದ್ದರು. ಜು. 20ರಂದು ಚಂದ್ರನ ಮೇಲ್ಮೈ ಮೇಲೆ ನೀಲ್‌ ಆರ್ಮ್ ಸ್ಟ್ರಾಂಗ್‌ ತಮ್ಮ ಹೆಜ್ಜೆ ಗುರುತನ್ನು ಮೂಡಿಸಿದ್ದರು. ಚಂದ್ರನಲ್ಲಿ ಕಾಲಿರಿಸಿದ ವಿಶ್ವದ ಮೊದಲ ವ್ಯಕ್ತಿಯಾಗಿ ಹೊರಹೊಮ್ಮಿದರು. ಚಂದ್ರ ಮೇಲೆ ಕಾಲಿರಿಸಿದ ನೀಲ್‌ ಆರ್ಮ್ ಸ್ಟ್ರಾಂಗ್‌ “ಇದು ಮಾನವನಿಗೆ ಸಣ್ಣ ಹೆಜ್ಜೆ ಯಾಗಬಹುದು ಆದರೆ ಮಾನವಕುಲಕ್ಕೆ ದೈತ್ಯ ಹೆಜ್ಜೆಯಾಗಲಿದೆ” ಎಂದು ಉದ್ಘರಿಸಿದ್ದರು.

Advertisement

ಮೊದಲು ಕಾಲಿರಿಸಿದ ನೀಲ್‌ ಆರ್ಮ್ಸ್ಟ್ರಾಂಗ್‌ ಬಳಿಕ ಎಡ್ವಿನ್‌ ಬಝ್ ಚಂದ್ರನ ಮೇಲೆ ಕಾಲಿರಿಸಿದ ಎರಡನೇ ವ್ಯಕ್ತಿಯಾದರು.

ಉಪಗ್ರಹಕ್ಕೆ ಲಗತ್ತಿಸಲಾದ ಕೆಮರಾ ಸೆರೆಹಿಡಿದ ದೃಶ್ಯಗಳನ್ನು ಆ ದಿನ ಇಡೀ ವಿಶ್ವವೇ ಬೆರಗು ಕಣ್ಣಿನಿಂದ ನೋಡಿ ಕಣ್ತುಂಬಿಕೊಂಡಿತ್ತು. ಅಂದಿಗೂ, ಇಂದಿಗೂ ಈ ಸಾಧನೆ ವೈಜ್ಞಾನಿಕ ಕ್ಷೇತ್ರ ಹಾಗೂ ಪ್ರಪಂಚದಲ್ಲಿ ಸ್ಮರ ಣೀಯ ಘಟನೆಯಾಗಿ ಉಳಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next