Advertisement
40 ವರ್ಷದ ಶಾನ್ ಮಾರ್ಷ್ ಬಿಗ್ ಬಾಶ್ ಲೀಗ್ನಲ್ಲಿ ಮೆಲ್ಬರ್ನ್ ರೆನೆಗೇಡ್ಸ್ ಪರ ಆಡುತ್ತಿದ್ದು, ಬುಧವಾರ ಸಿಡ್ನಿ ಥಂಡರ್ ವಿರುದ್ಧ ಕೊನೆಯ ಸಲ ಅಂಗಳಕ್ಕೆ ಇಳಿಯಲಿದ್ದಾರೆ.
ಐಪಿಎಲ್ನೊಂದಿಗೆ ಶಾನ್ ಮಾರ್ಷ್ ಅವರ ಶಾಶ್ವತ ನಂಟೊಂದು ಬೆಸೆದುಕೊಂಡಿದೆ. 2008ರ ಚೊಚ್ಚಲ ಐಪಿಎಲ್ನಲ್ಲಿ ಅತ್ಯಧಿಕ 616 ರನ್ ಬಾರಿಸಿ “ಆರೇಂಜ್ ಕ್ಯಾಪ್’ ಏರಿಸಿಕೊಂಡ ಹೆಗ್ಗಳಿಕೆ ಇವರದು. ಆಗ ಮಾರ್ಷ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸದಸ್ಯರಾಗಿದ್ದರು. ಒಂದು ಶತಕ, 5 ಅರ್ಧ ಶತಕ ಬಾರಿಸಿ ಭರ್ಜರಿ ಫಾರ್ಮ್ ಪ್ರದರ್ಶಿಸಿದ್ದರು.