Advertisement
ಜಗತ್ತಿನಲ್ಲೇ ಮೂರನೇ ಅತಿದೊಡ್ಡ ತೈಲ ಆಮದು ದೇಶವಾಗಿರುವ ಭಾರತವು ಈಗ ದಕ್ಷಿಣ ಅಮೆರಿಕದ ರಾಷ್ಟ್ರ ಗುಯಾನಾದಿಂದ ತೈಲವನ್ನು ಖರೀದಿಸಿದೆ. 10 ಲಕ್ಷ ಬ್ಯಾರೆಲ್‌ನಷ್ಟು ತೈಲ ಹೊತ್ತ ನೌಕೆಯು ಗುಯಾನಾದ ಕರಾವಳಿಯಿಂದ ಸಂಚಾರ ಆರಂಭಿಸಿದೆ.
Related Articles
ಗುಯಾನಾದ ಲಿಝಾ ಲೈಟ್ ಸ್ವೀಟ್ ಕ್ರೂಡ್‌ನಿಂದ 10 ಲಕ್ಷ ಬ್ಯಾರೆಲ್ ಕಚ್ಚಾ ತೈಲ ತುಂಬಿದ ನೌಕೆಯು ಮಾ.2ರಂದೇ ಸಂಚಾರ ಆರಂಭಿಸಿದ್ದು, ಏ.8ರ ವೇಳೆಗೆ ಭಾರತದ ಮುಂದ್ರಾ ಬಂದರನ್ನು ತಲುಪಲಿದೆ. 2020ರ ಆರಂಭದಲ್ಲೇ ಗುಯಾನಾವು ತೈಲ ರಫ್ತು ಆರಂಭಿಸಿದೆ. ಇಲ್ಲಿಂದ ಬಹುತೇಕ ತೈಲವನ್ನು ಅಮೆರಿಕ, ಚೀನಾ, ಪನಾಮಾ ಮತ್ತು ಕೆರಿಬಿಯನ್‌ಗಳಿಗೆ ಸಾಗಿಸಲಾಗುತ್ತಿದೆ.
Advertisement