Advertisement

ಸೋನಿಯಾ ಗಾಂಧಿ ವಿರುದ್ಧ ಎಫ್‌ಐಆರ್‌

07:11 AM May 21, 2020 | Lakshmi GovindaRaj |

ಸಾಗರ: ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ಕಾರ್ಯ ನಿರ್ವಹಣೆ ಬಗ್ಗೆ ಹಾಗೂ ಪಿಎಂ ಕೇರ್‌ ನಿ ಧಿಯಿಂದ ಹಣ ದುರುಪಯೋಗ ಆಗಿದೆ ಎಂದು ಸಾಮಾಜಿಕ ಜಾಲತಾಣ ಗಳಲ್ಲಿ ಸಂದೇಶಗಳನ್ನು ಹರಿಯ ಬಿಟ್ಟಿರುವುದರ ಹಿನ್ನೆಲೆಯಲ್ಲಿ  ಕಾಂಗ್ರೆಸ್‌ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ  ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

Advertisement

ಮೇ 11ರಂದು ಕಾಂಗ್ರೆಸ್‌ ಐಎನ್‌ಸಿ ಇಂಡಿಯಾ ಟ್ವಿಟರ್‌ ಖಾತೆ ಮೂಲಕ ಇಂತಹ ಹಲವಾರು ಸಂದೇಶಗಳನ್ನು ಅಪ್‌ಲೋಡ್‌ ಮಾಡಲಾಗಿದ್ದು,  ಸೋನಿಯಾ ಅವರ ನವದೆಹಲಿ ಕಚೇರಿ ಈ ಖಾತೆಯನ್ನು ನಿರ್ವಹಿಸುತ್ತಿದೆ. ಪಿಎಂ ಕೇರ್‌ ಹಣವನ್ನು ವೈಯಕ್ತಿಕವಾಗಿ ಬಳಸಲಾಗಿದೆ. ಬಡಜನರ ಉಪಯೋಗಕ್ಕೆ ಬಳಸುತ್ತಿಲ್ಲ ಎಂದು ಸುಳ್ಳು ಸಂದೇಶದ ಮೂಲಕ ದೇಶದ ನಾಗರಿಕರನ್ನು  ಎತ್ತಿ ಕಟ್ಟುವ ಕೆಲಸ ಮಾಡಲಾಗಿದೆ ಎಂದು ದೂರುದಾರ ನಗರದ ನೀಲ್‌ಕೋಡ್‌ ಬಡಾವಣೆ ವಕೀಲ ಪ್ರವೀಣ್‌ ಕೆ.ವಿ. ಆರೋಪಿಸಿ ನಗರ ಠಾಣೆಗೆ ಬುಧವಾರ ದೂರು ನೀಡಿದ್ದರು. ಪೊಲೀಸರು ಸೋನಿಯಾ ಗಾಂಧಿ ವಿರುದ್ಧ ಪ್ರಥಮ  ವರ್ತಮಾನ ವರದಿ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next