Advertisement

ಚಿತ್ರೋತ್ಸವದ ಜ್ಯೂರಿ ಅವಾರ್ಡ್‌

01:46 PM May 11, 2020 | Suhan S |

ಮನುಷ್ಯನ ದುರಾಸೆ ಕುರಿತ ಕಿರುಚಿತ್ರಕ್ಕೆ ಪ್ರಶಂಸೆ ಕನ್ನಡದಲ್ಲಿ ಈಗಂತೂ ಸಾಕಷ್ಟು ಕಿರುಚಿತ್ರಗಳು ಪ್ರಭಾವ ಬೀರುತ್ತಿವೆ. ಅದರಲ್ಲೂ, ವಿಶೇಷ ಸಂದೇಶ ಸಾರುವ ಕಿರುಚಿತ್ರಗಳಿಗೆ ಶಾರ್ಟ್‌ ಫಿಲ್ಮ್ ಫೆಸ್ಟಿವಲ್‌ಗ‌ಳಲ್ಲಿ ಮನ್ನಣೆ ಸಿಗುತ್ತಿದೆ. ಆ ಸಾಲಿಗೆ ಈಗ ಕನ್ನಡದ “ಪಿಕಾಸಿ’ ಚಿತ್ರವೂ ಸೇರಿದೆ. ಹೌದು, ಈ ಕಿರುಚಿತ್ರಕ್ಕೆ ಇತ್ತೀಚೆಗೆ ದಾದಾ ಸಾಹೇಬ್‌ ಫಾಲ್ಕೆ ಚಿತ್ರೋತ್ಸವದಲ್ಲಿ ವಿಶೇಷ ತೀರ್ಪುಗಾರರ ಪ್ರಶಸ್ತಿ ಸಿಕ್ಕಿದೆ.

Advertisement

ಬಹುತೇಕ ಹೊಸಬರೇ ಸೇರಿದ ಕೆಲಸ ಮಾಡಿರುವ ಈ ಕಿರುಚಿತ್ರಕ್ಕೆ ವಿಶೇಷ ಪ್ರಶಸ್ತಿ ಲಭಿಸಿರುವುದು ಸಹಜವಾಗಿಯೇ ಚಿತ್ರತಂಡದ ಖುಷಿಯನ್ನು ಹೆಚ್ಚಿಸಿದೆ. ಇನ್ನು ಮನುಷ್ಯನಿಗೆ ಎಷ್ಟೊಂದು ದುರಾಸೆ ಇದೆ ಎಂಬ ಅಂಶದೊಂದಿಗೆ ಮಾಡಿರುವ ಕಿರುಚಿತ್ರ ಇದಾಗಿದ್ದು, ಮನುಷ್ಯನಿಗೆ ಎಷ್ಟಿದ್ದರೂ ತೃಪ್ತಿ ಇರಲ್ಲ. ಆಸೆ, ದುರಾಸೆಯೇ ಹೆಚ್ಚು. ಅದೇ ಕಾನ್ಸೆಪ್ಟ್ ಮೇಲೆ ಇಡೀ ಕಿರುಚಿತ್ರ ಸಾಗುತ್ತದೆ. ಈ ಚಿತ್ರ ವೀಕ್ಷಿಸಿದ ತೀರ್ಪುಗಾರರು ವಿಶೇಷ ಪ್ರಶಸ್ತಿ ನೀಡಿದ್ದಾರೆ. ಈ ಸಂತಸವನ್ನು ಮುಖಪುಟದಲ್ಲಿ ಹಂಚಿಕೊಂಡಿರುವ ಚಿತ್ರತಂಡಕ್ಕೆ ಎಲ್ಲೆಡೆಯಿಂದ ಒಳ್ಳೆಯ ಪ್ರತಿಕ್ರಿಯೆ ದೊರೆಯುತ್ತಿವೆ.

ನಟಿ ಅರುಣಬಾಲರಾಜ್‌ “ಪಿಕಾಸಿ’ ಕಿರುಚಿತ್ರದಲ್ಲಿ ಶಿಕ್ಷಕಿ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದ ಆರಂಭದಲ್ಲಿ ಅವರ ಪಾತ್ರ ಶುರುವಾಗಲಿದ್ದು, ಶಾಲೆಯಲ್ಲಿ ಮಕ್ಕಳಿಗೆ ಬುದ್ಧಿ ಹೇಳುವ ಸಮಯ ಬರುತ್ತೆ. ಆಗ “ಪಿಕಾಸಿ’ ಕಥೆ ಶುರುವಾಗಲಿದೆ ಎಂಬುದು ಅರುಣ ಬಾಲರಾಜ್‌ ಮಾತು. 25 ನಿಮಿಷಗಳ ಈ ಕಿರುಚಿತ್ರವನ್ನು ವಿನೋದ್‌ ಕುಲಶೇಖರ್‌ ನಿರ್ದೇಶನ ಮಾಡಿದ್ದಾರೆ. ಇವರಿಗೆ ಇದು ಹೊಸ ಅನುಭವ. ಇನ್ನು, ಸಂದೀಪ್‌ ಛಾಯಾಗ್ರಹಣ ಮಾಡಿದ್ದಾರೆ. ಹೇಮಂತ್‌ ಅವರು ಸಂಕಲನ ಮಾಡಿದ್ದಾರೆ. ಹೊಸಬರ ಪ್ರಯತ್ನಕ್ಕೆ ತಕ್ಕ ಪ್ರತಿಫ‌ಲ ಸಿಕ್ಕಿದೆ ಎಂದಿರುವ ಚಿತ್ರತಂಡ, ಇದು ಎಲ್ಲರ ಪ್ರೀತಿಯ ಶ್ರಮಕ್ಕೆ ಸಿಕ್ಕ ಗೆಲುವು. “ಪಿಕಾಸಿ’ ಕಿರುಚಿತ್ರವಾದರೂ ಸಿನಿಮಾದಲ್ಲಿ ಕೆಲಸ ಮಾಡಿದ ಅನುಭವ ಆಗಿದೆ ಎಂದಿರುವ ಚಿತ್ರತಂಡ, ಈ ಕಿರುಚಿತ್ರ ಮೂಲಕ ಸಣ್ಣ ಸಂದೇಶ ಸಾರಲಾಗಿದೆ. ಇದೊಂದು ಮಾನವ ಪ್ರಪಂಚದ ಮೇಲಿನ ಚಿತ್ರವಾಗಿದ್ದು, ಬದಲಾವಣೆ ಅಗತ್ಯತೆ ಏನೆಂಬುದನ್ನು ಇಲ್ಲಿ ಹೇಳಲಾಗಿದೆ.­

Advertisement

Udayavani is now on Telegram. Click here to join our channel and stay updated with the latest news.

Next