Advertisement
ಕ್ರಿಯೇಟಿವಿಟಿ ಪ್ರತಿಯೊಬ್ಬರಲ್ಲೂ ವಿಭಿನ್ನವಾಗಿದ್ದು, ಅದನ್ನು ಬಳಸಿ ಜನರ ಗಮನ ಸೆಳೆಯುವುದು ಅಷ್ಟು ಸುಲಭದ ಮಾತಲ್ಲ, ಅದಕ್ಕೆ ಹಲವಾರು ರೀತಿಯ ಪೂರಕ ಆಲೋಚನೆಗಳ ಆವಶ್ಯಕತೆಯಿದೆ. ಇಂತಹ ಆಲೋಚನೆಗಳು ನಿಮ್ಮಲ್ಲಿದ್ದರೆ ಫಿಲ್ಮ್ಎಡಿಟಿಂಗ್ ಗೆ ಪೂರಕವಾಗಿ ಹಲವಾರು ಶಿಕ್ಷಣ ಸಂಸ್ಥೆಗಳು ಕೋರ್ಸ್, ಕ್ಲಾಸ್ ಗಳ ಮೂಲಕ ಸೂಕ್ತ ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಿವೆ.
ವೀಡಿಯೋ ಸಂಪಾದಕರಿಗೆ ಔಪಚಾರಿಕ ಶಿಕ್ಷಣವಿರುವುದಿಲ್ಲ. ಯಾವುದೇ ಪದವಿ ಅಥವಾ ಅನುಭವದ ಮೇರೆಗೆ ಭವಿಷ್ಯಕ್ಕೆ ಮುನ್ನುಡಿ ಬರೆಯಬಹುದು. ಇತ್ತೀಚಿನ ದಿನಗಳಲ್ಲಿ ಇದಕ್ಕೆಂದು ಹಲವಾರು ರೀತಿಯ ಕೋರ್ಸ್‌ಗಳು ಆರಂಭಗೊಂಡಿದ್ದು, ವೀಡಿಯೊ ನಿರ್ದೇಶನ, ಸೆಟ್ ವಿನ್ಯಾಸ, ಸೌಂಡ್ ರೆಕಾರ್ಡಿಂಗ್, ಸೌಂಡ್ ಎಡಿಟಿಂಗ್, ಡಿಜಿಟಲ್ ಇಮೇಜಿಂಗ್, ಕಂಪ್ಯೂಟರ್ ಆ್ಯನಿಮೇಶನ್ ಮುಂತಾದವುಗಳನ್ನು ಒಳಗೊಂಡಿರುತ್ತದೆ. ಕಿರುಚಿತ್ರಗಳ ಹಾವಳಿ
ಇತ್ತೀಚೆಗೆ ಚಲನಚಿತ್ರಗಳ ಜತೆಗೆ ಕಿರು ಚಿತ್ರಗಳ ಟ್ರೆಂಡ್ ಕೂಡ ಹೆಚ್ಚುತ್ತಿದ್ದು, ಇದರಲ್ಲಿಯೂ ಹಲವಾರು ಅವಕಾಶಗಳಿವೆ. ಬಿಡುವಿನ ವೇಳೆಯಲ್ಲಿ ನುರಿತ ಕಲಾವಿದರ ಜತೆಗೆ ಅಗತ್ಯ ಮಾಹಿತಿಗಳನ್ನು ಪಡೆಯಬಹುದಾಗಿದೆ. ಕಾಲೇಜು, ಇನ್ನಿತರ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಕೂಡ ಹವ್ಯಾಸಿಯಾಗಿ ಫಿಲ್ಮ್ಎಡಿಟಿಂಗ್ ಕಲಿಯಬಹುದು.
Related Articles
ಯು.ಎಸ್. ಬ್ಯೂರೋ ಆಫ್ ಲೇಬರ್ ಸ್ಟಾಟಿಸ್ಟಿಕ್ಸ್ (ಬಿಎಲ್ ಎಸ್) ಪ್ರಕಾರ 2014-2024ರ ಅವಧಿಯಲ್ಲಿ ವೀಡಿಯೋ ಸಂಪಾದಕರಿಗೆ ಶೇ. 18 ಅವಕಾಶಗಳು ಹೆಚ್ಚಾಗಿವೆ ಎಂದು ನಿರೀಕ್ಷಿಸಲಾಗಿದೆ. ಉದ್ಯೋಗ ಕ್ಷೇತ್ರದಲ್ಲಿ ಸ್ಪರ್ಧೆ ತೀವ್ರವಾಗುತ್ತಿದ್ದು ಹೆಚ್ಚಾಗಿ ಚಲನಚಿತ್ರಗಳ ಕಡೆ ಮುಖ ಮಾಡುತ್ತಿದ್ದಾರೆ. ಬರುವ ದಿನಗಳಲ್ಲಿ ಇವರ ವೇತನಗಳಲ್ಲಿ ಗಣನೀಯವಾಗಿ ಏರಿಕೆ ಕಂಡು ಬರುವುದಲ್ಲದೆ ವಾರ್ಷಿಕವಾಗಿ ಕೋಟಿಗಳಲ್ಲಿ ಸಂಭಾವನೆ ಪಡೆಯುವುದರಲ್ಲಿ ಸಂಶಯವಿಲ್ಲ ಎಂಬುದು ವರದಿಗಳ ಸಾರಾಂಶ.
Advertisement
ಬೇಕಾಗಿರುವ ಕೌಶಲಗಳುವೀಡಿಯೋ ಸಂಪಾದಕರಾಗಲು ವೀಡಿಯೋ ಎಡಿಟಿಂಗ್ ಸಾಫ್ಟ್ ವೇರ್ ಗಳ ಆಳವಾದ ಜ್ಞಾನ, ಜತೆಗೆ ಸ್ವಲ್ಪ ಮಟ್ಟಿನ ಕಲಾತ್ಮಕತೆಯ ಆವಶ್ಯಕತೆಯಿರುತ್ತದೆ. ಚಲನಚಿತ್ರ ದೂರದರ್ಶನದ ಪ್ರದರ್ಶನ, ವಾಣಿಜ್ಯ, ಸಂಗೀತ ಎಲ್ಲದರ ವೀಡಿಯೊ ತಯಾರಿಸಲು ಕಲಾತ್ಮಕ ವೃತ್ತಿಪರರೊಂದಿಗೆ ಸಹಭಾಗಿತ್ವ ಹೊಂದಿರಬೇಕು. ಪ್ರೀತಿ ಭಟ್ ಗುಣವಂತೆ