ಹೆಬ್ರಿ : ಹೆಬ್ರಿ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ಹಾಗೂ ಕಡತಗಳ ವಿಲೇವಾರಿ ವಿಳಂಬವಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಕಾರ್ಕಳ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಹೆಬ್ರಿ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದರು.
ಭೇಟಿ ನೀಡಿದ ಸಂದರ್ಭ ಕಚೇರಿಯಲ್ಲಿ ತಹಶೀಲ್ದಾರ್ ಇಲ್ಲದ ಹಿನ್ನೆಲೆಯಲ್ಲಿ ಉಪತಹಶೀಲ್ದಾರ್ ಜತೆ ಚರ್ಚೆ ನಡೆಸಿ ಸಾರ್ವಜನಿಕರ ಕೆಲಸಗಳು ತೀರ ವಿಳಂಬವಾಗುತ್ತಿದೆ. ಹಲವಾರು ಬಾರಿ ಕಚೇರಿಗಳಿಗೆ ಅಲೆದಾಡಬೇಕಾಗುತ್ತದೆ. ಆದ್ದರಿಂದ ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ಆಲಿಸಿ ಶೀಘ್ರದಲ್ಲಿ ಪರಿಹರಿಸುವಂತೆ ಮನವಿ ಮಾಡಿದರು.
ಕಚೇರಿಯಲ್ಲಿ ಸಿಬಂದಿ ಕೊರತೆ ಇದೆ. ತಾಲೂಕು ಕಚೇರಿ ಕೇವಲ ಹೆಸರಿಗೆ ಮಾತ್ರವಿದ್ದು ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಿಲ್ಲ. ಇದುವರೆಗೆ ಚುನಾವಣೆ ಕಾರಣ ಹೇಳಿ ಕಳುಹಿಸುತ್ತಿದ್ದರು. ಇನ್ನಾದರೂ ಶೀಘ್ರ ಕೆಲಸ ಕಾರ್ಯಗಳು ಸತಾಯಿಸದೆ ಆಗಲಿ. ಸಂಬಂಧಿಸಿದ ಎಲ್ಲ ಇಲಾಖೆಗಳು ಹೆಬ್ರಿಗೆ ಬರುವಂತೆ ಸರಕಾರದ ಗಮನಕ್ಕೆ ತನ್ನಿ ಎಂದು ಕಚೇರಿಯಲ್ಲಿ ಇದ್ದ ಸಾರ್ವಜನಿಕರಲ್ಲಿ ಓರ್ವರು ಉದಯ ಶೆಟ್ಟಿ ಅವರಲ್ಲಿ ವಿನಂತಿಸಿದರು.
ತಾಲೂಕು ಕಚೇರಿಗಳಲ್ಲಿ ಜನರ ಕೆಲಸಗಳು ವಿಳಂಬವಾಗುತ್ತಿದೆ ಎಂಬ ದೂರುಗಳು ಬರುತ್ತಿವೆೆ. ಜನ ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇಟ್ಟು ಅವಕಾಶ ನೀಡಿ¨ªಾರೆ. ಕೂಡಲೇ ತಾಲೂಕು ಕಚೇರಿಯ ಸಮಸ್ಯೆ ಸೇರಿದಂತೆ ಹೆಬ್ರಿ ತಾಲೂಕಿಗೆ ವಿವಿಧ ಇಲಾಖೆಗಳು ಬರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಉದಯ ಕುಮಾರ್ ಶೆಟ್ಟಿ ತಿಳಿಸಿದರು. ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಬಾಯರಿ, ಪಂಚಾಯತ್ ಸದಸ್ಯ ಜನಾರ್ದನ್, ಕರುಣಾಕರ,
ಪ್ರಚಾರ ಸಮಿತಿ ಅಧ್ಯಕ್ಷ ನವೀನ ಕೆ.ಅಡ್ಯಂತಾಯ, ಗೋಪಿನಾಥ್‌ಭಟ್,ದಿನೇಶ್ ಶೆಟ್ಟಿ, ಗುಳಿಬೆಟ್ಟು ಸುರೇಶ್ ಶೆಟ್ಟಿ, ಹರೀಶ್ ಶೆಟ್ಟಿ, ನಿತೀಶ್ ಎಸ್.ಪಿ ಉಪಸ್ಥಿತರಿದ್ದರು.