ಮುಂಬಯಿ: ಹೃತಿಕ್ ರೋಷನ್ – ದೀಪಿಕಾ ಪಡುಕೋಣೆ ಅಭಿನಯದ ʼಫೈಟರ್ʼ ಸಿನಿಮಾಕ್ಕೆ ಎಲ್ಲೆಡೆ ಭರ್ಜರಿ ಆರಂಭ ಸಿಕ್ಕಿದೆ. ಮೊದಲ ದಿನವೇ ಬಾಕ್ಸ್ ಆಫೀಸ್ ಗಳಿಕೆಯಲ್ಲೂ ಸಿನಿಮಾ ದೊಡ್ಡಮಟ್ಟದ ಕೆಲಕ್ಷನ್ ಮಾಡಿದೆ.
ಶಾರುಖ್ ಖಾನ್ ಅವರೊಂದಿಗೆ ಕಳೆದ ವರ್ಷ ಸಿದ್ದಾರ್ಥ್ ಆನಂದ್ ʼಪಠಾಣ್ʼ ಸಿನಿಮಾವನ್ನು ಮಾಡಿದ್ದರು. ದೇಶ ಪ್ರೇಮವನ್ನು ಸಾರುವ ʼಫೈಟರ್ʼ ಸಿನಿಮಾವನ್ನು ಮಾಡಿದ್ದಾರೆ. ಈ ಸಿನಿಮಾನೂ ದೇಶ ಪ್ರೇಮದ ಕಥೆಯನ್ನೊಳಗೊಂಡಿದ್ದು, ನಿರೀಕ್ಷೆಯಂತೆ ಪಾಸಿಟಿವ್ ಆರಂಭವನ್ನು ಪಡೆದುಕೊಂಡಿದೆ.
ಪಾಕಿಸ್ತಾನದ ದಾಳಿಯೊಂದಕ್ಕೆ ಪ್ರತಿದಾಳಿಯಾಗಿ ಸೇಡು ತೀರಿಸಿಕೊಳ್ಳುವ ರೋಚಕ ಜರ್ನಿಯನ್ನು ತೋರಿಸಲಾಗಿದೆ. ಯುದ್ದದ ದೃಶ್ಯಗಳ ವಿಎಫ್ ಎಕ್ಸ್ ,3D ಮತ್ತು 3D IMAX ಸ್ವರೂಪದಲ್ಲಿರುವ ದೃಶ್ಯಗಳು ನೋಡುಗರ ಗಮನ ಸೆಳೆಯುತ್ತದೆ.
ದೀಪಿಕಾ – ಹೃತಿಕ್ ಆನ್ ಸ್ಕ್ರೀನ್ ಕೆಮೆಸ್ಟ್ರಿ ಹಾಗೂ ವೈಮಾನಿಕ ದೃಶ್ಯಗಳು ಸಿನಿಮಾದಲ್ಲಿ ಗಮನ ಸೆಳೆಯುತ್ತದೆ. ವೀಕ್ ಡೇಯಲ್ಲಿ ಸಿನಿಮಾ ರಿಲೀಸ್ ಆಗಿದ್ದು, ಮೊದಲ ದಿನವೇ ಬಾಕ್ಸ್ ಆಫೀಸ್ ನಲ್ಲಿ 22 ಕೋಟಿ ರೂ.ಗಳಿಸಿದೆ. ಗಣರಾಜ್ಯೋತ್ಸವದ ರಜೆ ಹಾಗೂ ವಾರಾಂತ್ಯದಲ್ಲಿ ಸಿನಿಮಾದ ಗಳಿಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಸಿನಿಮಾದಲ್ಲಿ ಸ್ಕ್ವಾಡ್ರನ್ ಲೀಡರ್ ಶಂಶೇರ್ ಪ್ಯಾಟಿ ಪಠಾನಿಯಾ ಆಗಿ ಹೃತಿಕ್ ಕಾಣಿಸಿಕೊಂಡಿದ್ದು, ದೀಪಿಕಾ ಸ್ಕ್ವಾಡ್ರನ್ ಲೀಡರ್ ಮಿನಲ್ ಮಿನ್ನಿ ರಾಥೋಡ್ ಆಗಿ ಕಾಣಿಸಿಕೊಂಡಿದ್ದಾರೆ. ಮತ್ತೊಂದೆಡೆ, ಅನಿಲ್ ಕಪೂರ್ ಗ್ರೂಪ್ ಕ್ಯಾಪ್ಟನ್ ರಾಕೇಶ್ ಜೈ ರಾಕಿ ಸಿಂಗ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.