Advertisement

ಸುಂಕ ವಸೂಲಿಗೆ ಮುಂದಾದರೆ ಹೋರಾಟ

09:09 PM Feb 15, 2020 | Team Udayavani |

ಮಧುಗಿರಿ: ಪಾವಗಡದಿಂದ ಮಳವಳ್ಳಿವರೆಗಿನ ಕೆಶಿಫ್ ರಸ್ತೆ ಸುಮಾರು 525 ಕೋಟಿ ರೂ. ವೆಚ್ಚದ ಸರ್ಕಾರಿ ಪ್ರಾಯೋಜಕತ್ವದ ಹಾಗೂ ವಿಶ್ವ ಬ್ಯಾಂಕಿನ ಕಾರ್ಯಕ್ರಮ. ಇದು ಜನರ ಆಸ್ತಿಯಾಗಿದ್ದು, ಸುಂಕ ವಸೂಲಿ ಮಾಡಲು ಖಾಸಗಿಯವರಿಗೆ ಹಕ್ಕಿಲ್ಲ. ಹಾಗಾಗಿ ಜನ ವಿರೋಧಿಯಾಗಿರುವ ಸುಂಕ ವಸೂಲಿ ಕೇಂದ್ರ ನಿರ್ಮಿಸಲು ಬಿಡುವುದಿಲ್ಲ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ, ಧಾರ್ಮಿಕ ಮುಖಂಡ ಡಾ.ಎಂ.ಜಿ.ಶ್ರೀನಿವಾಸಮೂರ್ತಿ ತಿಳಿಸಿದ್ದಾರೆ.

Advertisement

ಪಟ್ಟಣದ ಶ್ರೀವೆಂಕಟರಮಣಸ್ವಾಮಿ ದೇಗುಲದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಪವಿಭಾಗವೇ ಸತತ ಬರಗಾಲದಿಂದ ಕಂಗೆಟ್ಟಿದ್ದು, ಇಂತಹ ಸಂದರ್ಭದಲ್ಲಿ ಕೆಶಿಫ್ ರಸ್ತೆಗೆ ಸುಂಕ ವಸೂಲಿ ಕೇಂದ್ರ ಸ್ಥಾಪಿಸಲು ಮುಂದಾದರೆ ಸುಮ್ಮನಿರುವುದಿಲ್ಲ. ರಸ್ತೆ ಉದ್ಘಾಟನೆ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದಂತೆ ರಸ್ತೆಗೆ ಟೋಲ್‌ ಸಂಗ್ರಹದ ಹೊಣೆಗಾರಿಕೆಯಿಲ್ಲ. ಹಿಂದಿನ ಶಾಸಕರೂ, ಹಾಲಿ ಶಾಸಕರೂ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ನಿಯಮ ಉಲ್ಲಂ ಸಿ ತುಮಕೂರು ಬಳಿಯ ಓಬಳಾಪುರ, ಕೊರಟಗೆರೆಯ ತುಂಬಾಡಿ ಹಾಗೂ ಮಧುಗಿರಿಯ ಚಿನ್ನೇನಹಳ್ಳಿ ಬಳಿ ಟೋಲ್‌ ಸಂಗ್ರಹಿಸಲು ಖಾಸಗಿ ಸಂಸ್ಥೆ ಮುಂದಾಗಿರುವುದು ಸರಿಯಲ್ಲ. ಮುಂದುವರಿಸಿದರೆ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಎಂ.ಕೆ.ನಂಜುಂಡರಾಜು ಮಾತನಾಡಿ, ಟೋಲ್‌ ಸಂಗ್ರಹ ಯೋಜನೆ ಅವೈಜ್ಞಾನಿಕ ಹಾಗೂ ಕಾನೂನು ಬಾಹಿರ. ಇದರಿಂದ ಜನರಿಗೆ ನಷ್ಟವಾಗಲಿದ್ದು, ಉಪವಿಭಾಗದ ಕೊರಟಗೆರೆ, ಮಧುಗಿರಿ, ಪಾವಗಡದ ಶಾಸಕರು ಈ ಬಗ್ಗೆ ಚಿಂತಿಸಿ ಟೋಲ್‌ ನಿರ್ಮಾಣ ನಿಲ್ಲಿಸಬೇಕು. ಇಲ್ಲವಾದರೆ ಜನರೆ ಟೋಲ್‌ ನಿರ್ಮಾಣ ಸಂಸ್ಥೆಯವರಿಗೆ ಬುದ್ಧಿ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗುತ್ತಿಗೆದಾರ ರಾಧ್ಯೇಶ್ಯಾಮ್‌ ಮಾತನಾಡಿ, ರಸ್ತೆಯ ಕಾಮಗಾರಿ ಸಂಪೂರ್ಣ ಮುಗಿದಿಲ್ಲ. ಮುಖ್ಯರಸ್ತೆಗೆ ಸಮನಾಗಿ ಸರ್ವೀಸ್‌ ರಸ್ತೆ ನಿರ್ಮಾವಾಣಗಬೇಕು. ಇದು ವಿಶ್ವಬ್ಯಾಂಕಿನ ನೆರವಿನಿಂದ ನಿರ್ಮಾಣವಾಗಿದ್ದು, ಇದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಸ್ಪಷ್ಟಪಡಿಸಿದ್ದರು. ಈಗ ಏಕಾಏಕಿ ಟೋಲ್‌ ಸಂಗ್ರಹಕ್ಕೆ ಮುಂದಾಗುವುದು ತಪ್ಪು. ಅಂತಾರಾಜ್ಯ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಹಣದ ದುರಾಸೆಗೆ ಈ ಕಾರ್ಯಕ್ಕೆ ಮುಂದಾಗಿದ್ದಾರೆ.

ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಟೋಲ್‌ ನಿರ್ಮಾಣಕ್ಕೆ ತಡೆ ನೀಡುವಂತೆ ಒತ್ತಾಯಿಸಿದರು. ಪುರಸಭೆ ಸದಸ್ಯ ಎಂ.ಆರ್‌.ಜಗನ್ನಾಥ್‌, ಮಾಜಿ ಅಧ್ಯಕ್ಷ ಕೆ.ಪ್ರಕಾಶ್‌, ಅಯೂಬ್‌, ಮಾಜಿ ಸದಸ್ಯ ರಮೇಶ್‌, ಡಾ.ಜಯರಾಂ, ಮಧುಗಿರಿ ನಾಗರೀಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಶ್ರೀಧರ್‌, ಗುತ್ತಿಗೆದಾರ ಮಹೇಶ್‌ ಕಾರಮರಡಿ, ಮುಖಂಡರಾದ ನಾರಾಯಣ್‌, ಧನಪಾಲ್‌, ಅಕ್ಕಿಸೂರಿ ಇತರರು ಇದ್ದರು.

Advertisement

ಮಳವಳ್ಳಿ-ಪಾವಗಡ ಕೆಶಿಫ್ ರಸ್ತೆ ನಿರ್ಮಾಣ ಸಂಪೂರ್ಣ ವಿಶ್ವಬ್ಯಾಂಕ್‌ ನೆರವಿನಿಂದ ನಿರ್ಮಾಣವಾಗಿದ್ದು, ಯಾವುದೇ ಕಾರಣಕ್ಕೂ ನಮ್ಮ ಭಾಗದಲ್ಲಿ ಟೋಲ್‌ ಸಂಗ್ರಹ ಕೇಂದ್ರಗಳ ಸ್ಥಾಪನೆಗೆ ಅವಕಾಶ ನೀಡಲ್ಲ. ಅಂತಹ ಸಂದರ್ಭ ಬಂದರೆ ಹೋರಾಟ ಅನಿವಾರ್ಯ.
-ಎಂ.ವಿ.ವೀರಭದ್ರಯ್ಯ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next