Advertisement

Vikram Gowda Encounter: ನಕ್ಸಲ್‌ ಪುನರ್ವಸತಿ, ಶರಣಾಗತಿ ಸಮಿತಿ ಭೇಟಿ, ಪರಿಶೀಲನೆ

03:36 AM Nov 25, 2024 | Team Udayavani |

ಹೆಬ್ರಿ: ನಕ್ಸಲ್‌ ನಾಯಕ ವಿಕ್ರಂ ಗೌಡನ ಎನ್‌ಕೌಂಟರ್‌ ನಡೆದ ಸ್ಥಳ ಹಾಗೂ ಆತನ ನಿವಾಸಕ್ಕೆ ನಕ್ಸಲ್‌ ಪುನರ್ವಸತಿ ಮತ್ತು ಶರಣಾಗತಿ ಸಮಿತಿ ಭೇಟಿ ನೀಡಿ ಪರಿಶೀಲಿಸಿದೆ.

Advertisement

ಪೀತುಬೈಲಿನಲ್ಲಿ ಆದಿವಾಸಿ ಕುಟುಂಬಗಳೊಂದಿಗೆ ಚರ್ಚಿಸಿದ ಬಳಿಕ ಸಮಿತಿ ಸದಸ್ಯ ನ್ಯಾಯವಾದಿ ಶ್ರೀಪಾಲ ಕೆ.ಪಿ. ಅವರು ಪತ್ರಕರ್ತರೊಂದಿಗೆ ಮಾತನಾಡಿ, ಈ ಭಾಗದ ಸಮಸ್ಯೆ, ಮೂಲ ಸೌಲಭ್ಯ ಹಾಗೂ ಆದಿವಾಸಿ ಕುಟುಂಬದವರ ಸಮಸ್ಯೆಗಳ ಬಗ್ಗೆ ಸಮೀಕ್ಷೆ ಮಾಡಲಾಗಿದೆ.

ಇಲ್ಲಿನ ಎಲ್ಲ ವರದಿಗಳನ್ನು ಹಿರಿಯ ಅಧಿಕಾರಿಗಳಿಗೆ ನೀಡಿ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸಮಸ್ಯೆಗಳ ಬಗ್ಗೆ ಸರಕಾರದ ಗಮನಕ್ಕೆ ತರಲಾಗುವುದು. ಶರಣಾಗತಿ ಬಯಸುವವರು ಪುನರ್ವಸತಿ ಮತ್ತು ಶರಣಾಗತಿ ಸಮಿತಿಯನ್ನು ಸಂಪರ್ಕಿಸಿದರೆ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಶ್ರಮಿಸಲಾಗುವುದು ಎಂದರು. ಸಮಿತಿಯವರು ಕಬ್ಬಿನಾಲೆ, ನಾಡ್ಪಾಲು, ಪೀತುಬೈಲು, ಕೂಡ್ಲು ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿದರು. ಪತ್ರಕರ್ತ ಪಾರ್ವತೇಶ್‌ ಬಿಳಿದಾಳೆ, ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಮುಂದುವರಿದ ಶೋಧ ಕಾರ್ಯ
ರವಿವಾರವೂ ನಾಡ್ಪಾಲು ಹಾಗೂ ಕಬ್ಬಿನಾಲೆ ಗ್ರಾಮದಲ್ಲಿ ಎಎನ್‌ಫ್‌ ಶೋಧ ಕಾರ್ಯಚರಣೆ ಮುಂದುವರಿಸಿದೆ. ಕೂಡ್ಲು ಫಾಲ್ಸ್‌ಗೆ ನ.27ರ ತನಕ ಪ್ರವೇಶ ನಿಷೇಧ ಎನ್‌ಕೌಂಟರ್‌ ಹಿನ್ನೆಲೆಯಲ್ಲಿ ಪ್ರವಾಸಿ ತಾಣವಾದ ಕೂಡ್ಲು ಜಲಪಾತಕ್ಕೆ ಮುಂದಿನ ಆದೇಶ ತನಕ ನ.27ರ ವರೆಗೆ ಪ್ರವೇಶ ನಿಷೇಧಿಸಲಾಗಿದೆ. ಮುಂದೆ ಪರಿಸ್ಥಿತಿ ನೋಡಿ ಕೊಂಡು ಪ್ರವೇಶ ನೀಡುವ ಅಥವಾ ನಿರ್ಬಂಧ ಮುಂದುವರಿಸುವ ಬಗ್ಗೆ ಯೋಚಿಸಲಾಗುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು
ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next