Advertisement

ರೈತ ವಿರೋಧಿ ಧೋರಣೆಗಳ ವಿರುದ್ಧ ಹೋರಾಟ

04:54 AM Jun 11, 2020 | Lakshmi GovindaRaj |

ನಂಜನಗೂಡು: ಸರ್ಕಾರದ ರೈತ ವಿರೋಧಿ ಧೋರಣೆಯ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು. ನಗರದ ಕೃಷಿ ಉತ್ಪನ್ನ ಮಾರುಕಟ್ಟೆ  ಪ್ರಾಂಗಣದಲ್ಲಿ ಆಯೋಜಿಸಿದ್ದ ರೈತ ಹೋರಾಟದ ಪೂರ್ವಭಾವಿ ಸಭೆ ಯಲ್ಲಿ ಮಾತನಾಡಿದರು.

Advertisement

ಸರ್ಕಾರದ ರೈತ ವಿರೋಧಿ ಧೋರ ಣೆಗೆ ಎಪಿಎಂಸಿ ಕಾನೂನು ತಿದ್ದುಪಡಿ ಹಾಗೂ ವಿದ್ಯುತ್‌ ಪ್ರಾಧಿಕಾರ ಖಾಸಗೀಕರಣ ಮಸೂದೆಗಳೇ ಸಾಕ್ಷಿ  ದು ಸರ್ಕಾರದ ವಿರುದ್ಧ ಕಿಡಿಕಾರಿದರು. ಸರ್ಕಾರಿ ಸ್ವಾಮ್ಯದ ಇಲಾಖೆ ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡುವುದು ಬೇಕಾಗಿಲ್ಲ. ಸರ್ಕಾರಗಳೆಲ್ಲ ರೈತರ ಹೆಸರೇಳುತ್ತಲೇ ಅನ್ನದಾತರ ಕತ್ತು ಹಿಸುಕುವ ಕೆಲಸ ಮಾಡುತ್ತಿವೆ ಎಂದು  ಆರೋಪಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಅನ್ನದಾತರ ಹಿತಕ್ಕಿಂತ ಖಾಸಗಿಯವರ ಅಭಿವೃದಿಟಛಿಯೇ ಮುಖ್ಯ. ಸರ್ಕಾರದ ರೈತ ರೋಧಿ ಧೋರಣೆ ವಿರುದ್ಧ ಹೋರಾಟದ ರೂಪುರೇಷೆಗಳ ಕುರಿತಾಗಿ ವಿವಿಧ ಪಕ್ಷಗಳ ನಾಯಕ ರೊಂದಿಗೂ ಸಮಾನ ಮನಸ್ಕ ಸಂಘ ಸಂಸ್ಥೆಗಳೊಂದಿಗೆ ಈಗಾಗಲೆ ಸಮಾಲೋಚನೆ ಆರಂಭಿಸಲಾಗಿದೆ ಎಂದರು. ಕೆಆರ್‌ಎಸ್‌ ನಿರ್ಮಾತೃ ನಾಲ್ವಡಿಯವರ ಪ್ರತಿಮೆಗೆ ಯಾರ ವಿರೋಧವೂ ಇಲ್ಲ.

ಆದರೆ ಅಲ್ಲಿನ ದಿವಾನರಾಗಿ ಕೆಲಸ  ಮಾಡಿದವರು ಹಾಗೂ ಅರಸರ ಸಮಕ್ಕೆ ಪ್ರತಿಮೆ ನಿರ್ಮಿಸುವುದಕ್ಕೆ ರೈತಸಂಘವೂ ಸೇರಿದಂತೆ ರಾಜ್ಯಾದ್ಯಂತ ವಿವಿಧ ಸಂಘಟನೆಗಳ ವಿರೋಧವೂ ಇದೆ ಎಂದು ಹೇಳಿದರು. ಸಭೆಯಲ್ಲಿ ರೈತ ಸಂಘಟನೆ ತಾಲೂಕು ಅಧ್ಯಕ್ಷ ಶಿರಮಳ್ಳಿ ಸಿದ್ದಪ್ಪ,  ಮುಖಂಡರಾದ ಅಶ್ವತ್ಥ್ರಾಜೇ ಅರಸು, ಹೆಜ್ಜಿಗೆ ಪ್ರಕಾಶ, ಹೊಸಕೋಟೆ ಬಸವರಾಜು, ಗುರುಲಿಂಗೇಗೌಡ, ಚಂದ್ರಶೇಖರ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next