Advertisement

ಉಗ್ರ ಪ್ರಚೋದನೆ : ಯುವಕರಿಗೆ ತರಬೇತಿ ನೀಡಲು ಇಕ್ರಾ ಕ್ಯಾಂಪ್‌

11:31 AM Oct 09, 2020 | Suhan S |

ಬೆಂಗಳೂರು: ಐಸಿಸ್‌ ಉಗ್ರ ಸಂಘಟನೆ ಪರವಾಗಿ ಕೆಲಸ ಮಾಡುತ್ತಿದ್ದ ಇಬ್ಬರು ರಾಷ್ಟ್ರೀಯ ತನಿಖಾ ದಳ ( ಎನ್‌ಐಎ) ಬಲೆಗೆ ಬಿದ್ದಿದ್ದು, ಇದರಲ್ಲಿ ಇರ್ಫಾನ್‌ ನಾಸೀರ್‌ ಅಕ್ಕಿ ವ್ಯಾಪಾರ ಮಾಡಿಕೊಂಡು ಯುವಕರನ್ನು ಐಸಿಸ್‌ಸಂಘಟನೆಯತ್ತ ಸೆಳೆಯುತ್ತಿದ್ದ. ಮತ್ತೂಬ್ಬ  ಆರೋಪಿ ಅಬ್ದುಲ್‌ ಖಾದೆರೆ ಇ-ಮೇಲ್‌ ಮೂಲಕ ಉಗ್ರ ಸಂಘಟನೆ ಮಾಡುತ್ತಿದ್ದದ್ದು, ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Advertisement

ನಗರದಲ್ಲಿ ಸಗಟು ಅಕ್ಕಿ ವ್ಯಾಪಾರಿಯಾಗಿರುವ ಇರ್ಫಾನ್‌ ನಾಸೀರ್‌ ನಗರದ ಯುವಕರನ್ನು  ಸಂಘಟನೆಯತ್ತ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ವಾಟ್ಸ್‌ ಆ್ಯಪ್‌ ಗ್ರೂಪ್‌ ಸೃಷ್ಟಿಸಿ, ಸಿರಿಯಾದಲ್ಲಿನ ವಿಡಿಯೋಗಳನ್ನು ತೋರಿಸಿ ಯುವಕರಿಗೆ ಧರ್ಮಾಂಧತೆ ಬಿತ್ತುತ್ತಿದ್ದ. ಈತನಿಂದ ಪ್ರೇರಣೆಗೊಂಡ ಹಲವರು ಸಿರಿಯಾಗೆ ತೆರಳಿದ್ದಾರೆ. ಐಸಿಸ್‌ ಪರ ಒಲವುಳ್ಳ ಯುವಕರಿಗೆ ತರಬೇತಿ ನೀಡಲು ಇಕ್ರಾ ಕ್ಯಾಂಪ್‌ಗ್ಳನ್ನು ನಡೆಸುತ್ತಿದ್ದ. ಈ ಕ್ಯಾಂಪ್‌ಗ್ಳನ್ನು ನಡೆಸಲು ಸೌದಿ ಅರೇಬಿಯಾದಲ್ಲಿರುವ ಸೈಯದ್‌ ಇಕ್ಬಾಲ್‌ ಜಹೀರ್‌ ಎಂಬಾತನ ನೆರವು ಪಡೆದಿದ್ದ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

ಇ-ಮೇಲ್‌ ಮೂಲಕ ಸಂಪರ್ಕ!: ಚೆನೈನ ಬ್ಯಾಂಕ್‌ವೊಂದರಲ್ಲಿ ಉದ್ಯೋಗಿ ಆಗಿರುವ ಅಬ್ದುಲ್‌ ಖಾದೆರ್‌ ಐಸಿಸ್‌ ಪರವಾಗಿ ಅಪಾರಒಲವು ಹೊಂದಿದ್ದಾನೆ. ಆತನ ಇ- ಮೇಲ್‌ ಗಳನ್ನು ಶೋಧಿಸಿದಾಗ ಹಲವು ಮಹತ್ತರ ಮಾಹಿತಿಗಳು ಲಭ್ಯವಾಗಿವೆ.ಲೆಬನಾನ್‌ ಹಿಜ್‌º -ಉತ್‌ ತೆಹ್‌ರಿರ್‌ ಸಂಘಟನೆ ಜತೆ ಸಂಪರ್ಕ ಸಾಧಿಸಿ ಇ-ಮೇಲ್‌ ಕಳುಹಿಸಿ ಅಪಾರ ಪ್ರಮಾಣದಲ್ಲಿ ಸಂಘಟನೆಗಾಗಿ ದೇಣಿಗೆ ಪಡೆದುಕೊಂಡಿದ್ದಾನೆ. ಅದೇ ದೇಣಿಗೆ ಹಣವನ್ನು ಸಿರಿಯಾ ಎಮೆರ್ಜೆನ್ಸಿ ಸಮಯದಲ್ಲಿ ಅಂದರೆ ಐಸಿಸ್‌ ಸಂಕಷ್ಟದಲ್ಲಿದ್ದಾಗ ಹಣ ಕಳುಹಿಸಿಕೊಟ್ಟಿದ್ದಾನೆ. ಜತೆಗೆ, ತನ್ನ ಸಹಚರರಿಗೆ ಮುಂದಿನ ಇಸ್ಲಾಮಿಕ್‌ ಸ್ಟೇಟ್ಸ್‌ ಹೇಗಿರಬೇಕುಅದಕ್ಕೆ ಹೇಗೆಲ್ಲಾ ಸಂಘಟನೆ ಬಲಪಡಿಸಬೇಕು ಎಂಬುದರ ಬಗ್ಗೆ ಇ-ಮೇಲ್‌ಗ‌ಳನ್ನು ಕಳುಹಿಸಿಕೊಟ್ಟಿರುವುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.

ಹತ್ತು ದಿನ ಕಸ್ಟಡಿಗೆ! : ಶಂಕಿತ ಉಗ್ರರಿಬ್ಬರನ್ನು ಹೆಚ್ಚಿನ ವಿಚಾರಣೆಗೆ ಎನ್‌ಐಎ ಹತ್ತುದಿನಗಳ ಕಾಲ ವಶಕ್ಕೆ ಪಡೆದಿದೆ. ಗುರುವಾರ ಆರೋಪಿಗಳಿಬ್ಬರನ್ನು ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ಸಂಧರ್ಭದಲ್ಲಿ ಆರೋಪಿಗಳಿಬ್ಬರು ಸಾಕಷ್ಟು ಯುವಕರಿಗೆ ಐಸಿಸ್‌ ಒಲವು ಬೆಳೆಸಿದ್ದಾರೆ. ಸಿರಿಯಾಗೆ ತೆರಳಲು ನೆರವು ನೀಡಿದ್ದಾರೆ. ಈಗಲೂ ಹಲವರು “ಕುರಾನ್‌ ಸರ್ಕ್‌ಲ್‌’ ಹೆಸರಿನಲ್ಲಿ ಸಕ್ರಿಯರಾಗಿದ್ದಾರೆ. ದಾಳಿ ವೇಳೆ ಹಲವು ಮಹತ್ತರ ಸಾಕ್ಷ್ಯಾಗಳು ಲಭ್ಯವಾಗಿವೆ. ಆರೋಪಿಗಳ ಸಂಪರ್ಕ ಜಾಲ ಹಾಗೂ ಚಟುವಟಿಕೆಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕಿದೆ ಹೀಗಾಗಿ ಆರೋಪಿಗಳನ್ನು ಎನ್‌ಐಎ ವಶಕ್ಕೆ ನೀಡಬೇಕು ಎಂದು ಎನ್‌ಐಎ ಪರ ವಿಶೇಷ ಅಭಿಯೋಜಕರಾದ ಪಿ. ಪ್ರಸನ್ನಕುಮಾರ್‌ ನ್ಯಾಯಾಲಯಕ್ಕೆ ಮನವಿ ಮಾಡಿದರು. ಈ ಮನವಿಯನ್ನು ನ್ಯಾಯಾಲಯ ಮಾನ್ಯ ಮಾಡಿತು.

Advertisement

Udayavani is now on Telegram. Click here to join our channel and stay updated with the latest news.

Next