Advertisement

ಸರಕಾರಿ ಶಾಲೆಗಳ ಬಗ್ಗೆ ಒಲವು ತೋರಿ

05:19 PM Dec 08, 2017 | |

ಕುಕ್ಕೇಡಿ : ಸರಕಾರಿ ಶಾಲೆಗಳಿಗೆ ಸರಕಾರ ಕ್ಷೀರಭಾಗ್ಯ, ಬಿಸಿಯೂಟ, ಸಮವಸ್ತ್ರ ಸೇರಿದಂತೆ ಹಲವು ಸವಲತ್ತುಗಳನ್ನು ನೀಡುತ್ತಿದೆ. ಸರಕಾರಕ್ಕೆ ಸರಕಾರಿ ಶಾಲೆಗಳಿಗೆ ಸೌಲಭ್ಯ ಕಲ್ಪಿಸಬಹುದೇ ಹೊರತು ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲು ಸಾಧ್ಯವಿಲ್ಲ. ಅದಕ್ಕಾಗಿ ಹೆತ್ತವರು ಸರಕಾರಿ ಶಾಲೆಗಳ ಬಗ್ಗೆ ಒಲವು ತೋರಿಸಬೇಕು ಎಂದು ಮಂಗಳೂರು ದ.ಕ.ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ. ಶಾಹುಲ್‌ ಹಮೀದ್‌ ಹೇಳಿದರು. ಕುಕ್ಕೇಡಿ ಬುಳೆಕ್ಕಾರ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದ ಉದ್ಘಾಟನೆಯನ್ನು ಗುರುವಾರ ನೆರವೇರಿಸಿ ಮಾತನಾಡಿದರು.

Advertisement

ಸಮಾರಂಭದ ಅಧ್ಯಕ್ಷತೆಯನ್ನು ಕುಕ್ಕೇಡಿ ಗ್ರಾ.ಪಂ. ಅಧ್ಯಕ್ಷೆ ತೇಜಾಕ್ಷಿ ವಹಿಸಿದ್ದರು. ಅಳದಂಗಡಿ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ, ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್‌ ಪಿ., ಬೆಂಗಳೂರು ಹೈಕೋರ್ಟ್‌ ನ್ಯಾಯವಾದಿ ಸ್ವರ್ಣಲತಾ ಹೆಗ್ಡೆ, ವೇಣೂರು ಲಯನ್ಸ್‌ ಕ್ಲಬ್‌ ಅಧ್ಯಕ್ಷ ನಿತೇಶ್‌ ಎಚ್‌., ಕುಕ್ಕೇಡಿ ಗ್ರಾ.ಪಂ. ಸದಸ್ಯರಾದ ಪದ್ಮನಾಭ, ಗೌರಿ, ಸರೋಜಾ, ಶ್ರೀಕ್ಷೇತ್ರ ಧ.ಗ್ರಾ.ಯೋ. ಸೇವಾ ಪ್ರತಿನಿಧಿ ಸುರೇಶ್‌ ಶೆಟ್ಟಿ, ಶಿಕ್ಷಣ ಇಲಾಖೆಯ ಸಿಆರ್‌ಪಿ ಆರತಿ, ಕುಕ್ಕೇಡಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾರಾಯಣ ಶೆಟ್ಟಿ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಪ್ಪ ಮೂಲ್ಯ, ಶಾಲಾ ವಿದ್ಯಾರ್ಥಿ ಸಂಘದ ನಾಯಕಿ ಹರ್ಷಿಕಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಸಮ್ಮಾನ: ಶಾಲೆಗೆ ಕಂಪ್ಯೂಟರ್‌ ಕೊಡುಗೆ ನೀಡಿದ ಸ್ವರ್ಣಲತಾ ವಸಂತ ಹೆಗ್ಡೆ ದಂಪತಿಯನ್ನು ವೇದಿಕೆಯಲ್ಲಿ ಸಮ್ಮಾನಿಸಲಾಯಿತು. ಎಸ್‌ಡಿಎಂಸಿ ಮಾಜಿ ಸದಸ್ಯರನ್ನು, ಬುಳೆಕ್ಕಾರ ಗೆಳೆಯರ ಬಳಗ, ಶ್ರೀ ಶಾರದಾಂಬ ಭಜನ ಮಂಡಳಿ, ಪುರುಷರ ಕಟ್ಟುವ ಬಳಗದ ಅಧ್ಯಕ್ಷರುಗಳನ್ನು ಸಮ್ಮಾನಿಸಿ ಗೌರವಿಸಲಾಯಿತು.

ವಿವಿಧ ಆಟೋಟಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಪುರಿಯ ಮಾಲಾಡಿ ಹಾಲು ಉ.ಸ. ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್‌ ಧ್ವಜಾರೋಹಣ ನೆರವೇರಿಸಿದರು.  ಶಾಲಾ ಶಿಕ್ಷಕ ವೃಂದ, ಎಸ್‌ಡಿಎಂಸಿ ಸದಸ್ಯರು ಹಾಗೂ ಹಳೆವಿದ್ಯಾರ್ಥಿ ಸಂಘದ ಸದಸ್ಯರು ಸಹಕರಿಸಿದರು. ಮುಖ್ಯ ಶಿಕ್ಷಕ ಭಾಸ್ಕರ ವರದಿ ವಾಚಿಸಿದರು. ಶಿಕ್ಷಕಿ ಗೀತಾ ಕೆ. ಸ್ವಾಗತಿಸಿ, ಶಿಕ್ಷಕಿ ತುಳಸಿ ವಂದಿಸಿದರು. ಶಿಕ್ಷಕ ಸತೀಶ್‌ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

ಸಮುದಾಯದ ಸಹಭಾಗಿತ್ವ ಅಗತ್ಯ
ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಹಾವಳಿಯಿಂದ ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿದೆ. ಸರಕಾರಿ ಅನುದಾನದಿಂದ ಮಾತ್ರ ಶಾಲೆಗಳನ್ನು ಬಲಪಡಿಸಲು ಸಾಧ್ಯವಿಲ್ಲ. ಇದಕ್ಕೆ ಸಮುದಾಯದ ಸಹಭಾಗಿತ್ವವೂ ಅಗತ್.
 ಶಾಹುಲ್‌ ಹಮೀದ್‌ 

Advertisement
Advertisement

Udayavani is now on Telegram. Click here to join our channel and stay updated with the latest news.

Next