Advertisement

ಭಾರತ ಅಥ್ಲೀಟ್ಸ್‌ಗೆ ಒಲಿಂಪಿಕ್ಸ್‌ ಅರ್ಹತೆ ತಪ್ಪುವ ಆತಂಕ; ದ್ಯುತಿ, ಹಿಮಾದಾಸ್‌ ಗೆ ನಿರಾಸೆ

03:38 PM Apr 10, 2020 | keerthan |

ಹೊಸದಿಲ್ಲಿ: ಮುಂದಿನ ನವೆಂಬರ್‌ ತಿಂಗಳ ಅಂತ್ಯದವರೆಗೆ ಒಲಿಂಪಿಕ್ಸ್‌ ಅರ್ಹತಾ ಅವಧಿಯನ್ನು ವಿಶ್ವ ಅಥ್ಲೆಟಿಕ್ಸ್‌ ಸಂಸ್ಥೆ ಅಮಾನತುಗೊಳಿಸಿದೆ. ಈ ನಿರ್ಧಾರದಿಂದ ಭಾರತೀಯ ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌ ಸ್ಪರ್ಧಿಗಳಿಗೆ ಬಲುದೊಡ್ಡ ಹೊಡೆತ ಬಿದ್ದಂತಾಗಿದೆ.

Advertisement

ಅಥ್ಲೀಟ್ಸ್‌ ಆಯೋಗ, ಕಾಂಟಿನೆಂಟಲ್‌ ಸಂಸ್ಥೆಗಳ ಅಧ್ಯಕ್ಷರು ಮತ್ತು ಕೌನ್ಸಿಲ್‌ನ ಸಲಹೆ ಪಡೆದ ಬಳಿಕ ವಿಶ್ವ ಅಥ್ಲೆಟಿಕ್ಸ್‌ ಏ.6ರಿಂದ ನ.30ರ ನಡುವಣ ಅವಧಿಯನ್ನು ಅಮಾನತುಗೊಳಿಸಲು ನಿರ್ಧರಿಸಿದೆ. ಈ ಅವಧಿಯ ನಡುವೆ ಜರುಗುವ ಯಾವುದೇ ಸ್ಪರ್ಧೆಗಳ ಫ‌ಲಿತಾಂಶವನ್ನು ಟೋಕೊಯೋ ಒಲಿಂಪಿಕ್ಸ್‌ನ ಪ್ರವೇಶ ಗುಣಮಟ್ಟ ಅಥವಾ ವಿಶ್ವ ಶ್ರೇಯಾಂಕಕ್ಕೆ ಪರಿಗಣಿಸುವಂತಿಲ್ಲ ಎಂದು ತಿಳಿಸಿದೆ.

ಈ ಬಗ್ಗೆ ಭಾರತ ತಂಡದ ಉಪ ಮುಖ್ಯ ಕೋಚ್‌ ರಾಧಾಕೃಷ್ಣನ್‌ ನಾಯರ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶ್ವ ಅಥ್ಲೆಟಿಕ್ಸ್‌ ಕೂಟದ ಈ ನಿರ್ಧಾರದಿಂದ ತೇಜಿಂದರ್‌ ಪಾಲ್‌ (ಶಾಟ್‌ಪುಟ್‌), ಅನು ರಾಣಿ (ಜಾವೆಲಿನ್‌), ಶ್ರೀಶಂಕರ್‌ (ಲಾಂಗ್‌ ಜಂಪ್‌) ಮತ್ತು ಅಥ್ಲೀಟ್‌ಗಳಾದ ದ್ಯುತಿ ಚಾಂದ್‌, ಹಿಮಾದಾಸ್‌ಗೆ ಹೊಡೆತ ಬೀಳಲಿದೆ ಎಂದು ಹೇಳಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next