Advertisement
ಸುಸಜ್ಜಿತ ಪಾರ್ಕ್ಕುಳಿತುಕೊಳ್ಳಲು ಹಾಕಿದ ಗೋಪುರ ಹಾಗೂ ವೃತ್ತಾಕಾರದ ಫೌಂಟೇನ್ ಗಮನ ಸೆಳೆಯುತ್ತದೆ. ಈ ಹಿಂದೆ ಕೇವಲ ವಾಕಿಂಗ್ ಟ್ರ್ಯಾಕ್ ನಿರ್ಮಿಸಿ ಇಂಟರ್ ಲಾಕ್ ಅಳವಡಿಸಿ ಬಿಡಲಾಗಿತ್ತು. ಇದೀಗ ಸುಸಜ್ಜಿತ ಪಾರ್ಕ್ ನಿರ್ಮಿಸಲಾಗಿದೆ. ಒಳ ಹೋಗುವಲ್ಲಿ ದ್ವಾರ ಹಾಗೂ ಸುತ್ತಲೂ ಭದ್ರತೆಗಾಗಿ ಗೋಡೆ ನಿರ್ಮಿಸಿ ಪಾರ್ಕ್ ಹಾಳಾಗದಂತೆ ಯೋಜನೆ ರೂಪಿಸಲಾಗಿದೆ.
ಅಮೃತ್ ಯೋಜನೆಯಡಿ ಇದಕ್ಕೆ 58 ಲಕ್ಷ ರೂ. ಬಿಡುಗಡೆಯಾಗಿದ್ದು, ಉಳಿದಂತೆ ಪಾಲಿಕೆಯ ಎಸ್‌ಎಫ್‌ಸಿ ಯೋಜನೆಯಡಿ 24 ಲಕ್ಷ ರೂ. ಒಳಾಂಗಣ, ಅದರಲ್ಲಿ ಎಲ್‌ಇಡಿ ಲೈಟ್ ವ್ಯವಸ್ಥೆಗಾಗಿ ಎನ್‌ಎಂಪಿಟಿ 7 ಲಕ್ಷ ರೂ. ನೀಡಿದೆ. ಉಳಿದಂತೆ ಇನ್ನೂ ಮಕ್ಕಳ ಆಟದ ವ್ಯವಸ್ಥೆ, ಓಪನ್ ಜಿಮ್ ಸ್ಥಾಪಿಸಲು ಅನುದಾನದ ಅಗತ್ಯವಿದ್ದು, ದಾನಿಗಳ ಹುಡುಕಾಟ ನಡೆದಿದೆ. ಮತ್ತಷ್ಟು ಅಭಿವೃದ್ಧಿಗೆ ಚಿಂತನೆ
ನನ್ನ ವಾರ್ಡ್‌ನಲ್ಲಿ ಪಾರ್ಕ್ ನಿರ್ಮಾಣಕ್ಕೆ ಉತ್ತಮ ಸ್ಥಳ ಆಯ್ಕೆ ಮಾಡಲಾಗಿದೆ. 75 ಸೆಂಟ್ಸ್ ಜಾಗದಲ್ಲಿ ನಿರ್ಮಿಸಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಈ ಪಾರ್ಕ್ ಉಪಯೋಗವಾಗುತ್ತದೆ. ಇಲ್ಲಿ ಬೆಲೆ ಬಾಳುವ ಜಿಮ್ ಉಪಕರಣ, ಉಯ್ನಾಲೆ ಮತ್ತಿತರ ವ್ಯವಸ್ಥೆಯಿದ್ದು ಹಾಳುಗೆಡವದಂತೆ ಎಲ್ಲರೂ ಮುತುವರ್ಜಿ ವಹಿಸಬೇಕು. ಈ ಪಾರ್ಕನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಚಿಂತಿಸಿದ್ದೇವೆ.
– ತಿಲಕ್‌ರಾಜ್,ಕೃಷ್ಣಾಪುರ ವಾರ್ಡ್ ಕಾರ್ಪೊರೇಟರ್