Advertisement

ಗ್ರಂಥಾಲಯ ಪಿತಾಮಹ ಡಾ.ರಂಗನಾಥ್‌ ಸ್ಮರಣೆ

04:14 PM Aug 12, 2017 | |

ಮೈಸೂರು: ಗ್ರಂಥಾಲಯ ಪಿತಾಮಹ ಡಾ.ಎಸ್‌.ಆರ್‌.ರಂಗನಾಥ್‌ರ 125ನೇ ಜನ್ಮದಿನದ ಪ್ರಯುಕ್ತ ಮೈಸೂರು ವಿವಿ ಗ್ರಂಥಾಲಯ ಹಾಗೂ ಮಹಾರಾಜ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ಹಾಗೂ ಪುಸ್ತಕ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಮೈಸೂರು ವಿವಿ: ಮಾನಸ ಗಂಗೋತ್ರಿಯಲ್ಲಿರುವ ಮೈಸೂರು ವಿವಿ ಗ್ರಂಥಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆ ಪ್ರಯುಕ್ತ ಗ್ರಂಥಾಲಯದಲ್ಲಿ
ಅಧ್ಯಯನ ಶೀಲತೆ ಮತ್ತು ಅಂತರ್ಜಲ ಬಳಕೆ-ಒಂದು ಅನಿಸಿಕೆ ವಿಷಯ ಕುರಿತ ಉಪನ್ಯಾಸ ಆಯೋಜಿಸಲಾಗಿತ್ತು. ಮೈಸೂರು ವಿವಿ ಗಾಂಧಿ ಅಧ್ಯಯನ ಸಂಸ್ಥೆ ನಿರ್ದೇಶಕ ಪೊ›.ಶಿವರಾಜಪ್ಪ ಮಾತನಾಡಿ, ವಿಶ್ವ ವಿದ್ಯಾನಿಲಯಗಳ ಕೀರ್ತಿ ಪತಾಕೆಗೆ ಬೋಧನಾಂಗ,
ಕಾರ್ಯಾಂಗ ಹಾಗೂ ಪ್ರಸಾರಾಂಗದ ಜತೆಗೆ ಗ್ರಂಥಾಲಯಗಳು ಪ್ರಾಮುಖ್ಯತೆ ವಹಿಸಿದೆ. ಇದಕ್ಕೆ ಡಾ.ಎಸ್‌.ಆರ್‌.ರಂಗನಾಥ್‌ ಕಾರಣರಾಗಿದ್ದು, ತಮ್ಮ ಬದುಕಿನುದ್ದಕ್ಕೂ ಗ್ರಂಥಾಲಯದ ಏಳಿಗೆಗೆ ಸಾಕಷ್ಟು ಶ್ರಮಿಸಿದ್ದಾರೆ. ಎಸ್‌.ಆರ್‌.ರಂಗನಾಥ್‌ ಗ್ರಂಥಾಲಯ ರೂಪಿಸುವ ಮೂಲಕ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸಹಕಾರಿಯಾಗಿದ್ದು, ಗ್ರಂಥಾಲಯಗಳ ಮೂಲಕ ವಿದ್ಯಾರ್ಥಿಗಳು ಬುದ್ಧ, ಅಂಬೇಡ್ಕರ್‌ ಸೇರಿದಂತೆ ಅನೇಕ ಮಹನೀಯರ ಕೃತಿಗಳನ್ನು ಓದಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ಗ್ರಂಥಾಲಯದ ಆವರಣದಲ್ಲಿ ಡಾ.ಎಸ್‌.ಆರ್‌. ರಂಗನಾಥ್‌ರವರು ಬರೆದಿರುವ ಪುಸ್ತಕಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಈ ವೇಳೆ ಮೈಸೂರು ವಿವಿ ಗ್ರಂಥಾಲಯದ ಗ್ರಂಥಪಾಲಕ ಡಾ.ಆರ್‌.ಟಿ.ಡಿ. ರಮೇಶ್‌ಗಾಂಧಿ,
ಉಪ ಗ್ರಂಥಪಾಲಕ ಡಾ.ವೈ.ಎಲ್‌. ಸೋಮಶೇಖರ್‌, ಸಹಾಯಕ ಗ್ರಂಥಪಾಲಕರಾದ ವೆಂಕಟೇಶ್‌, ನಾಗಸುಂದರ ಹಾಜರಿದ್ದರು.
ಮಹಾರಾಜ ಕಾಲೇಜು: ಮಹಾರಾಜ ಕಾಲೇಜಿನ ಸ್ನಾತಕ ಗ್ರಂಥಾಲಯದಲ್ಲೂ ಗ್ರಂಥಾಲಯ ಪಿತಾಮಹ ಡಾ.ಎಸ್‌.ಆರ್‌.ರಂಗನಾಥ್‌ರ ಭಾವಚಿತ್ರಕ್ಕೆ ಗಣ್ಯರಿಂದ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಗ್ರಂಥಪಾಲಕ ಡಾ.ಕೆ.ಪ್ರಕಾಶ್‌ ಪುಸ್ತಕ ಪ್ರೀತಿ ಮಾಸಿಕ ವಿಶೇಷ ಉಪನ್ಯಾಸ ನಡೆಸಿಕೊಟ್ಟರು. ಟೆರೆಷಿಯನ್‌ ಕಾಲೇಜಿನ ಗ್ರಂಥಪಾಲಕಿ
ರುಕ್ಮಿಣಮ್ಮ, ಮಹಾರಾಜ ಕಾಲೇಜಿನ ಸ್ನಾತಕ ಗ್ರಂಥಾಲಯದ ಉಪಗ್ರಂಥಪಾಲಕ ಆರ್‌.ಕೆ.ಸೋಮಶೇಖರ್‌, ಮಹಾರಾಜ ಕಾಲೇಜಿನ
ಕನ್ನಡ ಪ್ರಾಧ್ಯಾಪಕ ಡಾ.ಸಿ.ಡಿ.ಪರಶುರಾಮ, ಮುಕ್ತ ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕ ಡಾ.ಎನ್‌.ಆರ್‌.ಚಂದ್ರೇಗೌಡ ಹಾಜರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next