Advertisement

ಶೆಟ್ಟರ ನಿವಾಸದೆದುರು 2ನೇ ದಿನವೂ ರೈತರ ಸತ್ಯಾಗ್ರಹ

12:17 PM Nov 15, 2017 | |

ಹುಬ್ಬಳ್ಳಿ: ಕಳಸಾ-ಬಂಡೂರಿ ಹಾಗೂ ಮಹದಾಯಿ ಜೋಡಣೆಗೆ ಆಗ್ರಹಿಸಿ ರೈತ ಸೇನಾ ವತಿಯಿಂದ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ  ಶೆಟ್ಟರ ನಿವಾಸದೆದುರು ಮಂಗಳವಾರ 2ನೇ ದಿನವೂ ಸತ್ಯಾಗ್ರಹ ಮುಂದುವರಿದಿದೆ. 

Advertisement

ನರಗುಂದ, ನವಲಗುಂದ, ರಾಮದುರ್ಗ, ಬದಾಮಿ, ಸವದತ್ತಿ ಹಾಗೂ  ಹುಬ್ಬಳ್ಳಿ ತಾಲೂಕಿನ ರೈತರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ರೈತ ಸೇನಾ ರಾಜ್ಯಾಧ್ಯಕ್ಷ ವೀರೇಶ ಸೊಬದಮಠ ಮಾಧ್ಯಮದವರೊಂದಿಗೆ ಮಾತನಾಡಿ, ನಮ್ಮ ಹೋರಾಟ ಮುಂದುವರಿದಿದ್ದು, ಈವರೆಗೆ ನಮಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ.

ಎಲ್ಲ ಶಾಸಕರು ಬೆಳಗಾವಿಯಲ್ಲಿ ಇರುವುದರಿಂದ ಅಲ್ಲಿ ಹೋರಾಟ ಮುಂದುವರಿಸಿದರೆ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ಪೊಲೀಸ್‌ ಅಧಿಕಾರಿಗಳು ರೈತರಿಗೆ ಹೇಳಿದ್ದಾರೆ. ಆದರೆ ಇದಕ್ಕೊಪ್ಪದೇ ಇಲ್ಲಿಯೇ ಹೋರಾಟ ಮುಂದುವರಿಸಲಾಗುವುದು ಎಂದರು. 

ಶೌಚಾಲಯಕ್ಕೆ ಬೀಗ: ಜಗದೀಶ ಶೆಟ್ಟರ ಮನೆಯ ಆವರಣದಲ್ಲಿದ್ದ ಶೌಚಾಲಯವನ್ನು ಹೋರಾಟ ನಿರತ ರೈತ ಮಹಿಳೆಯರು ಬಳಸುತ್ತಿದ್ದರು. ಆದರೆ ಮಂಗಳವಾರ ಬೆಳಗ್ಗೆ ಶೌಚಾಲಯಕ್ಕೆ ಬೀಗ ಹಾಕಿದ್ದರಿಂದ ಹೋರಾಟಗಾರ ಮಹಿಳೆಯರನ್ನು ಅವರ ಗ್ರಾಮಗಳಿಗೆ ಮರಳಿ ಕಳಿಸಲಾಯಿತು ಎಂದರು. ಶಂಕ್ರಪ್ಪ ಅಂಬಲಿ, ಗುರು ರಾಯನಗೌಡರ, ವೀರಬಸಪ್ಪ ಹೂಗಾರ, ಎ.ಪಿ. ಪಾಟೀಲ, ರಮೇಶ ನಾಯ್ಕರ, ಜಯಶಂಕರ ವಣ್ಣೂರ ಹೋರಾಟದಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next