Advertisement
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಅಧ್ಯಕ್ಷರಾಗಿ ಆಯ್ಕೆ ಯಾದ ಬಳಿಕ ಶನಿವಾರ ಬಜಪೆ ವ್ಯ. ಸೇವಾ ಸಹಕಾರಿ ಬ್ಯಾಂಕ್‌ಗೆ ಆಗಮಿಸಿದ ಅವರನ್ನು ಬ್ಯಾಂಕ್‌ನ ವತಿಯಿಂದ ಸಮ್ಮಾನಿಸಲಾಯಿತು. ನಮ್ಮ ಸಂಸ್ಥೆ ಆರ್ಥಿಕವಾಗಿ ಬಲಾಡ್ಯವಾಗಿದೆ. 250 ಕೋಟಿ ರೂ. ಬಂಡವಾಳ, ರಾಜ್ಯದಲ್ಲಿ 40 ಕಡೆ ಗೋದಾಮು ಇದೆ. ಸರಕಾರ ರೈತರ ಬಗ್ಗೆ ಕಾಳಜಿ ವಹಿಸಬೇಕು ಎಂದರು.ಸಮುದ್ರದಲ್ಲಿ ವಿದ್ಯುತ್ ಉತ್ಪಾದನೆಗೆ ಯೋಜನೆ ರಾಜ್ಯದಲ್ಲಿ ವಿದ್ಯುತ್ ಕೊರತೆ ಇದೆ. ಸೋಲಾರ್ ವಿದ್ಯುತ್ ಉತ್ಪಾದನೆ ವ್ಯವಸ್ಥೆಯನ್ನು ಈಗಾಗಲೇ ಬ್ಯಾಂಕ್ ನಲ್ಲಿ ಅಳವಡಿಸಲಾಗಿದೆ. ಸಹಕಾರ ಕ್ಷೇತ್ರದ ಮೂಲಕ ಕರಾವಳಿ ಪ್ರದೇಶದಲ್ಲಿ ಸಮುದ್ರದಲ್ಲಿ ಪ್ಯಾನಲ್ ಹಾಕಿ ವಿದ್ಯುತ್ ಉತ್ಪಾದಿಸುವ ಮೂಲಕ ಜಿಲ್ಲೆಗೆ ಸಂಪೂರ್ಣ ಹೊಸ ಯೋಜನೆ ಬಗ್ಗೆ ಸರಕಾರದ ಸಹಕಾರ ದೊಂದಿಗೆ ಮಾಡುವ ಉದ್ದೇಶವಿದೆ. ಇದರಿಂದ ಉದ್ಯೋಗ ಸೃಷ್ಟಿಯೂ ಸಾಧ್ಯವಾಗುತ್ತದೆ ಎಂದು ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ಅಭಯಚಂದ್ರ ಮಾತನಾಡಿ, ಪರಿಶ್ರಮ ಹಾಗೂ ಬದ್ಧತೆಯಿಂದ ಡಾ| ರಾಜೇಂದ್ರ ಕುಮಾರ್ ಈ ಮಟ್ಟಕ್ಕೆ ಏರಲು ಸಾಧ್ಯವಾಗಿದೆ ಎಂದು ತಿಳಿಸಿದರು. ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರು ಈ ಹುದ್ದೆಯನ್ನು ಸ್ವೀಕರಿಸುವುದು ಅವರನ್ನು ಗೌರವಿಸುವುದು ನಮಗೆ ಅಭಿಮಾನ ಎಂದು ಬ್ಯಾಂಕ್‌ನ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು ಹೇಳಿದರು. ಬ್ಯಾಂಕ್‌ನ ನಿರ್ದೇಶಕರು, ಸಿಬಂದಿ ಅವರನ್ನು ಸಮ್ಮಾನಿಸಿದರು. ಮಕ್ಕಳ ತಜ್ಞ ಡಾ| ಜಯರಾಮ ಶೆಟ್ಟಿ, ಬ್ಯಾಂಕಿನ ಉಪಾಧ್ಯಕ್ಷ ವಸಂತ. ನಿರ್ದೇಶಕರಾದ ಸ್ಪೇನಿ ಡಿ’ಸೋಜಾ, ರಿತೇಶ್ ಶೆಟ್ಟಿ,, ಡೆನ್ನಿಸ್ ಡಿ’ಸೋಜಾ, ಮಹಮದ್ ಹನೀಫ್, ಭಾಸ್ಕರ್ ಮಲ್ಲಿ, ಲೀಲಾವತಿ, ಗೀತಾ ಕೆ. ಅಮೀನ್, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿ ಕಿರಣ್ ಶೆಟ್ಟಿ ಮೊದಲಾದವರು ಪಸ್ಥಿತರಿದ್ದರು.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ರತ್ನಾಕರ ಶೆಟ್ಟಿ ನಿರ್ವಹಿಸಿದರು.