ಬಳ್ಳಾರಿ : ಮಾಜಿ ಸಚಿವ ಜನಾರ್ದನ ರೆಡ್ಡಿಯವರ 55ನೇ ಜನ್ಮದಿನದ ನಿಮಿತ್ತ ಅವರ ಅಭಿಮಾನಿಗಳಿಂದ ಚಿನ್ನ, ಬೆಳ್ಳಿ ಮತ್ತು ಐದು ರೂ. ಕಾಯಿನ್ ಗಳಿಂದ ತುಲಾಭಾರ ಮಾಡಲಾಯಿತು.
ನಗರದ ಕನಕದುರ್ಗಮ್ಮ ದೇವಸ್ಥಾನದಲ್ಲಿ ದಂಪತಿ ಸಮೇತ ವಿಶೇಷ ಪೂಜೆ ಸಲ್ಲಿಸಿದ ಜನಾರ್ಧನ ರೆಡ್ಡಿಯವರಿಗೆ ಬಳಿಕ ಅವರ ಅಭಿಮಾನಿಗಳು 55 ಬೆಳ್ಳಿ ನಾಣ್ಯ, 55 ಬಂಗಾರದ ನಾಣ್ಯ ಜೊತೆಗೆ ಐದು ರೂಪಾಯಿ ಮತ್ತು ಹತ್ತು ರೂಪಾಯಿ ನಾಣ್ಯಗಳಿಂದ ತುಲಾಭಾರ ಮಾಡಿ ಗಮನ ಸೆಳೆದರು.
ಮಾತೃಜಿಲ್ಲೆ ಬಳ್ಳಾರಿಯಲ್ಲಿ ವಾಸ ಮಾಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಜನಾರ್ಧನ ರೆಡ್ಡಿಯವರು ದಶಕದ ಬಳಿಕ ಜನ್ಮದಿನದವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಮಾಜಿ ಸಚಿವ ಜನಾರ್ಧನ ರೆಡ್ಡಿಗೆ ಅವರ ಆಪ್ತ ಸಚಿವ ಬಿ.ಶ್ರೀರಾಮುಲು ಸಾಥ್ ನೀಡಿದರು.
ಇದನ್ನೂ ಓದಿ:ಭಂಡತನ, ಬಂಡೆತನ ಬೇಡ.. ಎಲ್ಲದಕ್ಕೂ ಸಮರ್ಥವಾಗಿ ಉತ್ತರ ಕೊಡ್ತೀವಿ:ಅಶ್ವತ್ಥನಾರಾಯಣ್ ಟಾಂಗ್
ಬಳಿಕ ಸುದ್ದಿಗಾರರೊಂದಿಗೆ ಮಾತನಡಿದ ಜನಾರ್ಧನ ರೆಡ್ಡಿಯವರು, ನಾನು ಬಳ್ಳಾರಿಗೆ ಬಂದರೆ ಕನಕ ದುರ್ಗಮ್ಮ ದೇವಸ್ಥಾನಕ್ಕೆ ತುಲಾಭಾರ ಮಾಡಿ ಅರ್ಪಿಸುವುದಾಗಿ ಅಭಿಮಾನಿಗಳು ಹರಕೆ ಹೊತ್ತಿದ್ದರು. ಅದರಂತೆ ನನ್ನ ಜನ್ಮದಿನದ ನಿಮಿತ್ತ ಇಂದು ತುಲಾಭಾರ ಮಾಡಿದ್ದಾರೆ. ಹನ್ನೊಂದು ವರ್ಷಗಳ ಬಳಿಕ ಅದ್ಧೂರಿಯಾಗಿ ಬಳ್ಳಾರಿಯಲ್ಲಿ ಹುಟ್ಟುಹಬ್ಬ ಆಚರಿಸಿ ಕೊಳ್ಳುತ್ತಿದ್ದೇನೆ ಎಂದ ಅವರು, ರಾಜಕೀಯ ಮಾತನಾಡುವುದಿಲ್ಲ. ಅದಕ್ಕೊಂದು ಸಮಯ ನಿಗದಿ ಮಾಡಿ ಮಾತನಾಡುವೆ ಎಂದು ತಿಳಿಸಿದರು.
ಪುತ್ರನ ಸಿನಿರಂಗ ಪ್ರವೇಶ
ಇದೇ ವೇಳೆ ತನ್ನ ಮಗ ಕಿರೀಟಿ ರೆಡ್ಡಿ ಚಿತ್ರರಂಗ ಪ್ರವೇಶ ಬಗ್ಗೆ ಪ್ರತಿಕ್ರಿಯಿಸಿದ ಜನಾರ್ಧನ ರೆಡ್ಡಿ, ಇದೇ ಜ.20ರಂದು ಸಿನಿಮಾ ಪ್ರಾರಂಭವಾಗಬೇಕಿತ್ತು. ಕೊರೊನಾ ಹಿನ್ನೆಲೆ ಮುಂದೂಡಲಾಗಿದೆ.
ಕನ್ನಡ ಮತ್ತು ತೆಲುಗು ಎರಡು ಭಾಷೆಗಳಲ್ಲಿ ಸಿನಿಮಾವನ್ನು ಏಕಕಾಲಕ್ಕೆ ನಿರ್ಮಾಣ ಮಾಡಲಿದ್ದೇವೆ. ಮುಂದಿನ ತಿಂಗಳು ಸೆಟ್ ಎರಲಿದೆ ಎಂದು ಸ್ಪಷ್ಡಪಡಿಸಿದರು.
ಬಳ್ಳಾರಿಯವರೇ ಆದ ತೆಲುಗಿನ ” ಈಗ” ನಿನಿಮಾದ ನಿರ್ಮಾಪಕ ಸಾಯಿ ಕೊರ್ರಪಾಟಿ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ಮಾಯಬಜಾರ ಚಿತ್ರದ ನಿರ್ದೇಶಕ ರಾಧಕೃಷ್ಣ ನಿರ್ದೇಶನ ಮಾಡಲಿದ್ದಾರೆ ಎಂದರು.