Advertisement

ಮ್ಯಾನ್‌ಹೋಲ್‌ನಲ್ಲಿ ಮೃತಪಟ್ಟ ಕುಟುಂಬದವರಿಗೆ ಉದ್ಯೋಗ

08:29 AM Mar 11, 2017 | |

ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನಲ್ಲಿ ಮ್ಯಾನ್‌ಹೋಲ್‌ನಲ್ಲಿ ಬಿದ್ದು ಮೃತಪಟ್ಟ ಮೂವರ ಕುಟುಂಬಗಳಿಗೆ ತಲಾ 10 ಲಕ್ಷ ರೂ.ಪರಿಹಾರ ತಲುಪಿಸಲಾಗಿದೆ. ಆ ಕುಟುಂಬದ ಸದಸ್ಯರಿಗೆ ಮಾನವೀಯತೆ ಆಧಾರದ ಮೇಲೆ ಉದ್ಯೋಗ
ಕೊಡುವ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ತಿಳಿಸಿದ್ದಾರೆ.

Advertisement

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ, ಮ್ಯಾನ್‌ ಹೋಲ್‌ಗ‌ಳಿಗೆ ಕಾರ್ಮಿಕರನ್ನು ಇಳಿಸಿ ಸ್ವತ್ಛ ಮಾಡಿಸೋದು ತಪ್ಪು. ಇನ್ಮು ಮುಂದೆ ಮ್ಯಾನ್‌ಹೋಲ್‌ ಸ್ವತ್ಛಗೊಳಿಸುವಾಗ ಪೊಲೀಸ್‌, ಆ್ಯಂಬುಲೆನ್ಸ್‌, ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲಿರಬೇಕು. ಸ್ವತ್ಛತೆ ಮಾಡುವ ಸಿಬ್ಬಂದಿ ಮದ್ಯಪಾನ ಮಾಡಿರಬಾರದು. ಸಿಬ್ಬಂದಿಗೆ ಆಮ್ಲಜನಕ ಕಿಟ್‌ ಒದಗಿಸಬೇಕು ಎಂಬುದನ್ನು ಕಡ್ಡಾಯಗೊಳಿಸಿ ನಿಯಮಾವಳಿ ರೂಪಿಸಲಾಧಿಗುವುದು. ಈ ಬಗ್ಗೆ ಜಲಮಂಡಳಿ ಹಾಗೂ ಬಿಬಿಎಂಪಿ ಅಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದರು.

ಶೈಕ್ಷಣಿಕ ಉದ್ದೇಶಕ್ಕಾಗಿ ಪರಿಶಿಷ್ಟ ಜಾತಿ ಮತ್ತು ಪಂಡಗದ ವಿದ್ಯಾರ್ಥಿಗಳು ಬ್ಯಾಂಕುಗಳಲ್ಲಿ ಸಾಲ ಪಡೆದಿರುವ ಕುರಿತ 
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಆ ಬಗ್ಗೆ ಮಾಹಿತಿ ಪಡೆದು ವಿದ್ಯಾರ್ಥಿಗಳು ಬಿಪಿಎಲ್‌ ಕುಟುಂಬಗಳಿಗೆ ಸೇರಿದ್ದವರಾಗಿದ್ದರೆ ಸಾಲ
ಮನ್ನಾ ಅಥವಾ ಸರ್ಕಾರವೇ ಭರಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.

ಬಜೆಟ್‌ ನಂತರ ಜಾತಿ ಗಣತಿ ವರದಿ 
ರಾಜ್ಯ ಬಜೆಟ್‌ ಹಾಗೂ ಎರಡು ಕ್ಷೇತ್ರಗಳ ಉಪ ಚುನಾವಣೆ ನಂತರ ಏಪ್ರಿಲ್‌ ತಿಂಗಳ ಅಂತ್ಯಕ್ಕೆ ಬಹುವಿವಾದಿತ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ (ಜಾತಿ ಸಮೀಕ್ಷೆ) ವರದಿ ಬಿಡುಗಡೆ ಮಾಡಲಾಗುವುದು. ಬಿಜೆಪಿ ಮತ್ತು ಜೆಡಿಎಸ್‌ ಸಹ ವರದಿ ಪರವಾಗಿದೆ. 
ಕಾಂಗ್ರೆಸ್‌ ಪಕ್ಷದಲ್ಲೇ ವರದಿ ಬಗ್ಗೆ ಅಪಸ್ವರ ಎತ್ತಿರುವವರಿಗೂ ವಾಸ್ತವಾಂಶ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದು ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next