Advertisement

ಕೋವಿಡ್ ದುರ್ಬಲವಾಗಿದೆ ಎಂದು ಡಬ್ಲ್ಯು.ಎಚ್.ಒ. ಹೇಳಿಲ್ಲ

02:27 AM Jun 20, 2020 | Hari Prasad |

ಜಗತ್ತಿನಾದ್ಯಂತ ಲಕ್ಷಾಂತರ ಮಂದಿಯನ್ನು ಬಲಿಪಡೆದಿರುವ ಕೋವಿಡ್ ವೈರಸ್‌ ಈಗ ತನ್ನ ಪ್ರಾಬಲ್ಯವನ್ನು ಕಳೆದುಕೊಂಡಿದ್ದು, ದುರ್ಬಲವಾಗುತ್ತಾ ಸಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (WHO) ಅಧ್ಯಯನವೊಂದು ಹೇಳಿದೆ ಎಂಬ ಸುದ್ದಿಯೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿದೆ.

Advertisement

ಇತ್ತೀಚೆಗೆ ಸೋಂಕು ದುರ್ಬಲವಾಗಿದ್ದು, 2 ತಿಂಗಳ ಹಿಂದೆ ಇದ್ದ ಪರಿ ಸ್ಥಿತಿ ಈಗ ಇಲ್ಲ. ಕೋವಿಡ್ ರೋಗಿಗಳಿಗೆ ಈಗ ಪ್ರಾಣಕ್ಕೆ ಅಪಾಯವಿಲ್ಲ ಎಂಬ ಸಂದೇಶವನ್ನೂ ಹರಿಬಿಡಲಾಗಿದೆ.

ಆದರೆ, ಇದೊಂದು ಸುಳ್ಳು ಸುದ್ದಿ. ಇತ್ತೀಚೆಗೆ ಇಟಲಿಯ ವೈದ್ಯರೊಬ್ಬರು ಕೋವಿಡ್ ವೈರಸ್‌ ಪ್ರಾಬಲ್ಯ ತಗ್ಗಿದೆ ಎಂಬ ಹೇಳಿಕೆ ನೀಡಿದ್ದರು. ಆದರೆ, ಅದನ್ನು ವಿಶ್ವ ಆರೋಗ್ಯ ಸಂಸ್ಥೆ ತಿರಸ್ಕರಿಸಿತ್ತು.

ಅಲ್ಲದೆ, ಈಗಲೂ ಕೋವಿಡ್ ಎನ್ನುವುದು ಮಾರಣಾಂತಿಕ ಸೋಂಕು ಆಗಿದ್ದು, ಅದು ದುರ್ಬಲವಾಗಿದೆ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಸ್ಪಷ್ಟಪಡಿಸಿತ್ತು. ಆದರೆ, ಯಾರೋ ಕಿಡಿಗೇಡಿಗಳು ಡಬ್ಲ್ಯುಎಚ್‌ಒ ಮಾಡಿರುವ ಟ್ವೀಟ್‌ ಎಂಬಂತೆ ಬಿಂಬಿಸಿ ಸುಳ್ಳು ಸುದ್ದಿಯನ್ನು ಹರಿಬಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next