Advertisement

ಪುರಸಭೆ ವಾಣಿಜ್ಯ ಮಳಿಗೆ ನಿರ್ವಹಣೆಯಲ್ಲಿ ವಿಫ‌ಲ

04:28 PM Sep 04, 2022 | Team Udayavani |

ಹೊಳೆನರಸೀಪುರ: ಪಟ್ಟಣದ ಪುರಸಭೆಗೆ ಅದಾಯದ ದೃಷ್ಟಿಯಿಂದ ಕೋಟ್ಯಂತ ರ ರೂ. ವೆಚ್ಚದಲ್ಲಿ ಪ್ರಮುಖ ವೃತ್ತಗಳಲ್ಲಿ ಎರಡು ಅಂತಸ್ತಿನ ವಾಣಿಜ್ಯ ಮಳಿಗೆ ನಿರ್ಮಿಸಿದೆ. ಆದರೆ ಇವುಗಳ ನಿರ್ವಹಣೆ ಮಾಡುವಲ್ಲಿ ವಿಫಲವಾ ಗಿರುವುದರಿಂದ ವಾಣಿಜ್ಯ ಸಂಕಿರ್ಣಗಳ ಮೇಲೆ ಗಿಡಗಂಟಿಗಳು ಬೆಳೆದು ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ.

Advertisement

ಪುರಸಭೆ ಅಧಾಯಕ್ಕಾಗಿ ಮಾಜಿ ಸಚಿವ ಹಾಗು ಶಾಸಕ ರೇವಣ್ಣ ಅವರು ಪಟ್ಟಣದ ಹಲವು ಹೃದಯ ಭಾಗಗಳಲ್ಲಿ ವಾಣಿಜ್ಯ ಸಂಕಿರ್ಣಗಳನ್ನು ನಿರ್ಮಿಸಿ ಅವುಗಳ ವಿಲೇವಾರಿ ಮಾಡಿರುವುದರಿಂದ ಪ್ರತಿ ತಿಂಗಳು ಪುರಸಭೆ ಲಕ್ಷಾಂತರ ರೂ.ಬಾಡಿಗೆ ರೂಪದಲ್ಲಿ ಬರ ತೊಡಗಿದೆ. ಆದರೆ ಈ ಮಳಿಗೆಗಳ ಸ್ವತ್ಛತೆ ಬಗ್ಗೆ ನಿರ್ವಹಿಸಬೇಕಾದ ಪುರಸಭೆ ಇತ್ತೀಚೆಗೆ ಯಾವುದನ್ನು ಮಾಡದೆ ಇರುವುದರಿಂದ ವಾಣಿಜ್ಯ ಸಂಕೀರ್ಣಗಳ ಮೇಲೆ ಗಿಡ ಮರಗಳು ಬೆಳೆದು ಬೇರು ಬಿಟ್ಟ ಪರಿಣಾ ಮ ಕಟ್ಟಡದ ಹಲವು ಭಾಗಗಳಲ್ಲಿ ಬಿರುಕು ಕಾಣಿಸಿ ಕೊಂಡು ತಂತಾನೇ ಬೀಳುವ ಹಂತ ತಲುಪಿದೆ. ಇದಕ್ಕೆ ಉದಾಹರಣೆಯಾಗಿ ಪುರಸಭೆಗೆ ಸೇರಿದ ವಾಣೀಜ್ಯ ಸಂಕಿರ್ಣ ಎಸ್‌ಎಲ್‌ಎ ನ್‌ ಚಿತ್ರಮಂದಿರಕ್ಕೆ ತೆರಳುವ ವಾಣಿಜ್ಯ ಸಂಕೀರ್ಣದಲ್ಲಿ ದೊಡ್ಡದಾದ ಗಿಡ ಬೆಳೆದು ನಿಂತಿರುವುದು ಮತ್ತು ಗೋಡೆಗಳ ಬಿರುಕು ಕಾಣಿಸಿಕೊಂಡಿದೆ.

ತಪ್ಪಿದ ಹೆಚ್ಚಿನ ಅನಾಹುತ: ಪುರಸಭೆ ಅಧಿಕಾರಿಗಳು ಎಷ್ಟರ ಮಟ್ಟಿಗೆ ಕರ್ತವ್ಯದಲ್ಲಿ ಜಾಗೃತರಾಗಿದ್ದಾರೆ ಎಂಬುದಕ್ಕೆ ಪ್ರಸ್ತುತ ಪುರಸಭೆ ಕಚೇರಿ ಕಟ್ಟಡದ ಮೀಟಿಂಗ್‌ ಹಾಲ್‌ನ ಮೇಲ್ಛಾ ವಣಿ ಕುಸಿದುಬಿದ್ದ ಪರಿಣಾಮ ಯಾವುದೆ ಸಾವು ನೋವು ಸಂಭವಿಸಲಿಲ್ಲ. ಮೀಟಿಂಗ್‌ ಹಾಲ್‌ ಲಕ್ಷಾಂತರ ರೂ.ವೆಚ್ಚದಲ್ಲಿ ಸಭಾಂಗಣ ನಿರ್ಮಿಸಲಾಗಿದೆ. ಕಳೆದ ಒಂದು ತಿಂಗಳ ಹಿಂದೆ ಸಭಾಂಗಣದ ಮೇಲ್ಚಾವಣಿ ಕುಸಿದು ಬಿದಿತ್ತು. ಅದೃಷ್ಟವಶಾತ್‌ ಆ ವೇಳೆಯಲ್ಲಿ ಯಾರೋಬ್ಬರು ಇಲ್ಲದೆ ಪ್ರಾಣಾಪಾಯ ಸಂಭವಿಸಿಲ್ಲ. ಇದಕ್ಕಾಗಿ ಪುರಸಭೆ ದುರಸ್ತಿಗೆ ಮುಂದಾಗಿದೆ. ಇದಕ್ಕೆಲ್ಲ ಕಾರಣ ಪುರಸಭೆ ಅಧಿಕಾರಿಗಳ ಬೇಜಾವಾಬ್ದರಿತ ಎಂದು ಹೇಳಲಾಗಿದೆ.

ಈ ಬಗ್ಗೆ ಪುರಸಭೆ ಅಧ್ಯಕ್ಷೆ ಸುಧಾನಳಿನ ಅವರನ್ನು ಸಂಪರ್ಕಿಸಿದಾಗ ಹೌದು ಪುರ ಸಭೆ ಸಭಾಂಗಣದ ಮೇಲ್ಛಾವಣಿ ಕುಸಿದಿದೆ. ಜೊತೆಗೆ ಕುಸಿದ ವೇಳೆ ನಾವು ಗಳು ಸಹ ಸ್ಥಳದಲ್ಲೆ ಇದ್ದೆವು, ಅದೃಷ್ಟವಶಾತ್‌ ನಮ್ಮ ತಲೆಯ ಮೇಲೆ ಬೀಳದೆ ಸ್ವಲ್ಪ ದೂರದಲ್ಲಿ ಬಿತ್ತೆಂದು ತಿಳಿಸಿ ಈ ಸಭಾಂಗಣದ ದುರಸ್ತಿ ಕಾರ್ಯ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next