ಮುಂಬಯಿ : ಡಿಸೆಂಬರ್ ತಿಂಗಳ ವಾಯಿದೆ ವಹಿವಾಟು ಚುಕ್ತಾ ಗೊಳಿಸುವ (F&O Expiry) ಅಂತಿಮ ದಿನವಾದು ಇಂದು ಗುರುವಾರ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 63.24 ಅಂಕಗಳ ಮುನ್ನಡೆಯನ್ನು ಪಡೆದುಕೊಂಡರೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10,500ರ ಮಟ್ಟವನ್ನು ಪುನರ್ ಸಂಪಾದಿಸುವಲ್ಲಿ ಯಶಸ್ವಿಯಾಯಿತು.
ಲೋಹ ಮತ್ತು ಸ್ವಾಸ್ಥ್ಯ ಕ್ಷೇತ್ರದ ಶೇರುಗಳ ನೇತೃತ್ವದಲ್ಲಿ ಬಹುತೇಕ ಹೆಚ್ಚಿನೆಲ್ಲ ರಂಗದ ಶೇರುಗಳು ಉತ್ತಮ ಖರೀದಿಯ ಬೆಂಬಲವನ್ನು ಪಡೆದು ಮುನ್ನಡೆ ಸಾಧಿಸಿದವು.
ಬೆಳಗ್ಗೆ 11 ಗಂಟೆಯ ಸುಮಾರಿಗೆ ಸೆನ್ಸೆಕ್ಸ್ 5.92 ಅಂಕಗಳ ನಷ್ಟದೊಂದಿಗೆ 33,905.89 ಅಂಕಗಳ ಮಟ್ಟದಲ್ಲೂ, ನಿಫ್ಟಿ ಸೂಚ್ಯಂಕ 6.40 ಅಂಕಗಳ ಮುನ್ನಡೆಯೊಂದಿಗೆ 10,497.20 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಸನ್ ಫಾರ್ಮಾ, ಹಿಂಡಾಲ್ಕೊ, ವೇದಾಂತ, ಎಕ್ಸಿಸ್ ಬ್ಯಾಂಕ್ ಮತ್ತು ಟಾಟಾ ಸ್ಟೀಲ್ ಅತ್ಯಂತ ಕ್ರಿಯಾಶೀಲವಾಗಿದ್ದವು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಆರಂಭಿಕ ವಹಿವಾಟಿನಲ್ಲಿ 2,499 ಶೇರುಗಳು ವ್ಯವಹಾರಕ್ಕೆ ಒಳಪಟ್ಟವು; 1,332 ಶೇರುಗಳು ಮುನ್ನಡೆ ಸಾಧಿಸಿದವು; 1,017 ಶೇರುಗಳು ಹಿನ್ನಡೆಗೆ ಗುರಿಯಾದವು; 150 ಶೇರುಗಳ ಧಾರಣೆಯಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ.