Advertisement
ಆರೋಪವೇನು?ಭಾರತದಲ್ಲಿ ಮಾರಾಟವಾಗುವ 15 ವಿಧದ ಸಿರಿಲ್ಯಾಕ್‌ಗಳಲ್ಲಿ ಸಕ್ಕರೆ ಪ್ರಮಾಣ 3 ಗ್ರಾಮ್ ಜಾಸ್ತಿಯಿದೆ. ಆದರೆ ಅಮೆರಿಕ, ಜರ್ಮನಿ, ಯೂರೋಪ್‌ಗ್ಳಲ್ಲಿ ಈ ಪರಿಸ್ಥಿತಿ ಇಲ್ಲ ಎಂದು ಆರೋಪಿಸಲಾಗಿದೆ. ಇದು ಅಪಾಯಕಾರಿ, ಮಕ್ಕಳನ್ನು ಸಕ್ಕರೆ ಚಟಕ್ಕೀಡು ಮಾಡುತ್ತದೆ, ಮುಂದೆ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ತಜ್ಞರು ಕಳವಳ ವ್ಯಕ್ತ ಪಡಿಸಿದ್ದಾರೆ.
ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ನೆಸ್ಲೆ ಇಂಡಿಯಾ ಲಿ.ಯ ವಕ್ತಾರರೊಬ್ಬರು, ಕಳೆದ ಐದು ವರ್ಷಗಳಲ್ಲಿ ನಮ್ಮ ಶಿಶು ಆಹಾರಗಳಲ್ಲಿ ಸಕ್ಕರೆ ಪ್ರಮಾಣವನ್ನು ಶೇ. 30ರಷ್ಟು ಕಡಿಮೆ ಮಾಡಲಾಗಿದೆ. ಇದರ ಪರಿಶೀಲನೆ ಮುಂದುವರಿಯುತ್ತದೆ, ಸಕ್ಕರೆ ಪ್ರಮಾಣವನ್ನು ತಗ್ಗಿಸಲು ಉತ್ಪನ್ನಗಳನ್ನು ಪರಿಷ್ಕರಿಸಲಾಗುತ್ತದೆ ಎಂದು ಹೇಳಿದ್ದಾರೆ.