Advertisement

ಜಿಲ್ಲೆಯಲ್ಲಿ ಯೋಜನೆ ಸಫಲವಾದರೆ ರಾಜ್ಯಾದ್ಯಂತ ವಿಸ್ತರಣೆ

02:00 PM May 14, 2020 | mahesh |

ಚಿಕ್ಕೋಡಿ: ಹೈದ್ರಾಬಾದನ ಅಗ್ರೋಕ್ರಾಪ್‌ ಕಂಪನಿಯು ಅಂಗನವಾಡಿಗೆ ದಾಖಲಾದ ಕಡಿಮೆ ತೂಕದ ಮಕ್ಕಳಿಗೆ 1.50 ಕೋಟಿ ರೂ. ವೆಚ್ಚದಲ್ಲಿ ಉಚಿತವಾಗಿ ಪೌಷ್ಟಿಕ ಆಹಾರ ನೀಡುತ್ತಿದ್ದು, 3ರಿಂದ 6 ವರ್ಷದ ಬೆಳಗಾವಿ ಜಿಲ್ಲೆಯ ಮಕ್ಕಳಿಗೆ ಪ್ರಾಯೋಗಿಕವಾಗಿ ವಿತರಿಸಲಾಗುವುದು ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

Advertisement

ಬುಧವಾರ ಚಿಕ್ಕೋಡಿ ನಗರದ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯ ಸಭಾಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ
ಪೌಡರ್‌ ವಿತರಿಸಿ ಮಾತನಾಡಿದ ಅವರು, ಇಂದು ಶಿಶುಗಳಿಗೆ ಅಪೌಷ್ಟಿಕತೆ ಎನ್ನುವುದು ಬಹುದೊಡ್ಡ ಕಂಟಕವಾಗಿದ್ದು, ಇದನ್ನು ಹೋಗಲಾಡಿಸಲು ಪ್ರಾಯೋಗಿಕವಾಗಿ ಬೆಳಗಾವಿ
ಜಿಲ್ಲೆಯಲ್ಲಿ ಪೌಡರ್‌ ಉಚಿತವಾಗಿ ವಿತರಿಸಲು ಕಂಪನಿ ಮುಂದಾಗಿದ್ದು, ಒಳ್ಳೆಯ ಫಲಿತಾಂಶ ಬಂದರೆ ಈ ಯೋಜನೆಯನ್ನು ರಾಜ್ಯಾದ್ಯಂತ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಮೊದಲ ಹಂತದಲ್ಲಿ ಬೆಳಗಾವಿ, ಶಿವಮೋಗ್ಗ, ಬಾಗಲಕೋಟೆ, ವಿಜಯಪುರ ಜಿಲ್ಲೆಯಲ್ಲಿ ವಿತರಿಸಲಾಗುತ್ತದೆ ಎಂದರು. ಸಂಸದ ಅಣ್ಣಸಾಹೇಬ ಜೊಲ್ಲೆ ಮಾತನಾಡಿ, ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಬಿಸಿಲು, ಮಳೆ ಲೆಕ್ಕಿಸದೆ ದುಡಿಯುತ್ತಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಜೊಲ್ಲೆ ಉದ್ಯೋಗ ಸಮೂಹದಿಂದ 7000 ಛತ್ರಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ ಮಾತನಾಡಿದರು. ರಾಜ್ಯ ಸೌಹಾರ್ದ ಸಹಕಾರಿ ಉಪಾಧ್ಯಕ್ಷ ಜಗದೀಶ ಕವಟಗಿಮಠ, ತಹಶೀಲ್ದಾರ ಸುಭಾಷ ಸಂಪಗಾವಿ, ಸಿಪಿಐ ಆರ್‌. ಆರ್‌. ಪಾಟೀಲ, ಬೀರೇಶ್ವರ ಸಹಕಾರಿ ಅಧ್ಯಕ್ಷ ಜಯಾನಂದ ಜಾಧವ, ಉಪಾಧ್ಯಕ್ಷ ಸಿದ್ರಾಮ ಗಡದೆ, ಸಂಜು ಅರಗೆ, ಮಹೀಂದ್ರಾ ಕಂಪನಿಯ ಸಿದ್ದಾರ್ಥ, ಸಂಜಯ ಅಡಕೆ, ಸಿಡಿಪಿಒ ದೀಪಾ ಕಾಳೆ ಉಪಸ್ಥಿತರಿದ್ದರು. ಬಸವಪ್ರಸಾದ ಜೊಲ್ಲೆ ಸ್ವಾಗತಿಸಿದರು. ಜಂಟಿ ನಿರ್ದೇಶಕ ಬಸವರಾಜ ವರವಟ್ಟಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next